ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರಿಸ್ಬೇನ್ ಟೆಸ್ಟ್: ಗಾಯಗೊಂಡ ಪುಕೋವ್ಸ್ಕಿ ನಾಲ್ಕನೇ ಪಂದ್ಯದಿಂದ ಹೊರಕ್ಕೆ

India vs Australia:Will Pucovski Ruled out and Marcus Harris to replace

ಆಸ್ಟ್ರೇಲಿಯಾ ತಂಡದ ಯುವ ಆರಂಭಿಕ ಆಟಗಾರ ವಿಲ್ ಪುಕೋವ್ಸ್ಕಿ ಭಾರತದ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಿಂದ ಹೊರಬಿದ್ದದ್ದಾರೆ. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಒಂದ್ಯದ ವೇಳೆ ಪುಕೋವ್ಸ್ಕಿ ಭುಜದ ನೋವಿಗೆ ತುತ್ತಾಗಿದ್ದರು. ಹೀಗಾಗಿ ಅವರು ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.

ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್ ಈ ಬಗ್ಗೆ ಖಚಿತವಾಗಿ ಗುರುವಾರ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಭುಜದ ನೋವಿಗೆ ಒಳಗಾಗಿರುವ ಪುಕೋವ್ಸ್ಕಿ ಆಡಲು ಸಮರ್ಥರಾಗಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಾರರು ಅವರ ಬದಲಿಗೆ ಮಾರ್ಕಸ್ ಹ್ಯಾರಿಸ್ ಆರಂಭಿಕನಾಗಿ ಡೇವಿಡ್ ವಾರ್ನರ್‌ಗೆ ಸಾಥ್ ನೀಡಲಿದ್ದಾರೆ ಎಂದು ಟಿಮ್ ಪೈನ್ ಹೇಳಿದ್ದಾರೆ.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 750 ಮಿಲಿಯನ್‌ ಡಾಲರ್‌ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 750 ಮಿಲಿಯನ್‌ ಡಾಲರ್‌

ಶುಕ್ರವಾರದಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ವಿಲ್ ಪುಕೋವ್ಸ್ಕಿಗೆ ಗುರುವಾರ ಫಿಟ್‌ನೆಸ್ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ ಅವರು ವಿಫಲರಾಗಿದ್ದಾರೆ. ಹೀಗಾಗಿ 2019ರ ಆ್ಯಶಸ್ ಸರಣಿಯಲ್ಲಿ ಕೊನೆಯದಾಗಿ ಕಣಕ್ಕಿಳಿದಿದ್ದ ಹ್ಯಾರಿಸ್ ಭಾರತದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ವಿಲ್ ಪುಕೋವ್ಸ್ಕಿ ಅಲಭ್ಯತೆಯಿಂದಾಗಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸಿಸ್ ಪರವಾಗಿ ಕಣಕ್ಕಿಳಿಯುತ್ತಿರುವ ಐದನೇ ಆರಂಭಿಕ ಆಟಗಾರ ಹ್ಯಾರಿಸ್ ಆಗಲಿದ್ದಾರೆ.

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ನ ಅಂತಿಮ ದಿನದಾಟ ಸೋಮವಾರ ನಡೆಯುತ್ತಿದ್ದ ವೇಳೆ ವಿಲ್ ಪುಕೋವ್ಸ್ಕಿ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಭುಜದ ನೋವಿಗೆ ಒಳಗಾಗಿದ್ದ ಅವರು ಬಳಿಕ ಸ್ಕ್ಯಾನಿಂಗ್‌ಗೆ ಒಳಪಟ್ಟರು. ಈ ಸಂದರ್ಭದಲ್ಲಿ ಭುಜದ ಮೂಳೆಯಲ್ಲಿ ಸಣ್ಣ ಸ್ಥಳಾಂತರವಾಗಿರುವುದು ಕಂಡು ಬಂದಿತ್ತು. ಇದರಿಂದ ಚೇತರಿದಿಕೊಳ್ಳದ ಹಿನ್ನೆಲೆಯಲ್ಲಿ ಅವರು ಅಂತಿಮ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.

ಗಾಬಾ ಟೆಸ್ಟ್: ಆಸ್ಟ್ರೇಲಿಯಾದ 32 ವರ್ಷಗಳ ಸೋಲಿಲ್ಲದ ದಾಖಲೆಗೆ ಅಡ್ಡಿಯಾಗುತ್ತಾ ರಹಾನೆ ಪಡೆಗಾಬಾ ಟೆಸ್ಟ್: ಆಸ್ಟ್ರೇಲಿಯಾದ 32 ವರ್ಷಗಳ ಸೋಲಿಲ್ಲದ ದಾಖಲೆಗೆ ಅಡ್ಡಿಯಾಗುತ್ತಾ ರಹಾನೆ ಪಡೆ

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮೆರಾನ್ ಗ್ರೀನ್, ಟಿಮ್ ಪೈನ್ (ನಾಯಕ/ ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ನಥನ್ ಲಿಯಾನ್.

Story first published: Thursday, January 14, 2021, 10:59 [IST]
Other articles published on Jan 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X