ಟೀಮ್ ಇಂಡಿಯಾಗೆ ಇಶಾಂತ್ ಶರ್ಮಾ ಅಲಭ್ಯತೆ ಆಸ್ಟ್ರೇಲಿಯಾಗೆ ಅನುಕೂಲ: ಆಸಿಸ್ ಮಾಜಿ ವೇಗಿ

ಇಶಾಂತ್ ಶರ್ಮಾ ಇಲ್ಲದ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾದ ವೇಗದ ಪಡೆಗೆ ಸಮನಾಗಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜಾಸನ್ ಗಿಲೆಸ್ಪಿ ಅಭಿಪ್ರಾಯಪಟ್ಟಿದ್ದಾರೆ. ಇಶಾಂತ್ ಅಲಭ್ಯತೆ ಎರಡು ತಂಡಗಳ ಮಧ್ಯೆ ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗಲಿದೆ ಎಂದು ಗಿಲೆಸ್ಪಿ ಹೇಳಿದ್ದಾರೆ.

"ಈ ಬಾರಿಯ ಸರಣಿಯಲ್ಲಿ ಭಾರತ ತಂಡವನ್ನು ಆಸ್ಟ್ರೇಲಿಯಾ ಮಣಿಸಲಿದೆ ಎಂದು ನಾನು ಊಹಿಸುತ್ತೇನೆ" ಎಂದು ಜಾಸನ್ ಗಿಲೆಸ್ಪಿ ವಿಶ್ವಾಸದಿಂದ ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಆಸಿಸ್‌ನ ಈ ಮಾಜಿ ವೇಗಿ ವೇಗದ ಬೌಲಿಂಗ್‌ನಲ್ಲಿ ಇಶಾಂತ್ ಶರ್ಮ ಟೀಮ್ ಇಂಡಿಯಾದಲ್ಲಿದ್ದರೆ ಅವರ ಅನುಭವ ತಂಡಕ್ಕೆ ದೊಡ್ಡ ಅನುಕೂಲವಾಗಿರುತ್ತಿತ್ತು ಎಂದಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

"ನನ್ನ ಪ್ರಕಾರ ತವರು ನೆಲದ ಅನುಕೂಲತೆ ಆಸ್ಟ್ರೇಲಿಯಾಗೆ ಒಂದು ಕಡೆಯಿದ್ದರೆ, ಮತ್ತೊಂದೆಡೆ ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಗಾಯಗೊಂಡಿದ್ದಾರೆ. ಮೂಮ್ರಾ ಹಾಗೂ ಶಮಿ ಟೀಮ್ ಇಮಡಿಯಾ ಪರವಾಗಿ ಉತ್ತಮ ಬೌಲಿಂಗ್ ದಾಳಿ ನಡೆಸಲಿದ್ದಾರೆ. ಆದರೆ ಆಸ್ಟ್ರೇಲಿಯಾ ಪರಿಸ್ಥಿತಿಯಲ್ಲಿ ಇಶಾಂತ್ ಶರ್ಮಾ ಅನುಭವವನ್ನು ಟೀಮ್ ಇಂಡಿಯಾ ಕಳೆದುಕೊಳ್ಳಲಿದೆ" ಎಂದಿದ್ದಾರೆ.

97 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಇಶಾಂತ್ ಶರ್ಮಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಆಸಿಸ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಬಾರತೀಯ ಕ್ರಿಕೆಟ್ ಮಂಡಳಿಯ ವೈದ್ಯಕೀಯ ತಂಡ ಇಶಾಂತ್ ಶರ್ಮಾ ಅವರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಡಿಸೆಂಬರ್ 17ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿ ವೇಳೆಗೆ ಇಶಾಂತ್ ಚೇತರಿಸಿಕೊಂಡರೂ ಕೂಡ ಕ್ವಾರಂಟೈನ್ ನಿಯಮಗಳು ಕಠಿಣವಾಗಿರುವ ಕಾರಣ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ತುಂಬಾ ವಿರಳ.

ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ಧಾರಿಗೆ ರೋಹಿತ್ ಸೂಚಿಸಿದ್ದರು: ಸೂರ್ಯಕುಮಾರ್ ಯಾದವ್

32ರ ಹರೆಯದ ಇಶಾಂತ್ ಶರ್ಮಾ ತಮ್ಮ 19ನೇ ವಯಸ್ಸಿನಲ್ಲಿ 2008ರಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣಿಸುವ ಮೂಲಕ ಮೊದಲ ಬಾರಿಗೆ ಆಸಿಸ್ ನೆಲದಲ್ಲಿ ಕಣಕ್ಕಿಳಿದಿದ್ದರು. ತಮ್ಮ ವೇಗ ಹಾಗೂ ಬೌನ್ಸ್ ಮೂಲಕ ಆಸಿಸ್ ದಿಗ್ಗಜ ರಿಕಿ ಪಾಂಟಿಂಗ್‌ಗೆ ಕಂಗೆಡಿಸುವ ಮೂಲಕ ಖ್ಯಾತರಾಗಿದ್ದರು. ಈವರೆಗೆ ಆಸ್ಟ್ರೇಲಿಯಾಗೆ ನಾಲ್ಕು ಬಾರಿ ಪ್ರವಾಸ ಕೈಗೊಂಡ ಅನುಭವ ಹೊಂದಿದ್ದಾರೆ. 2018-19ರಲ್ಲಿ ಭಾರತ ಗೆದ್ದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಇಶಾಂತ್ ಶರ್ಮಾ ಪಾತ್ರವೂ ಮುಖ್ಯವಾಗಿತ್ತು. 3 ಪಂದ್ಯಗಳಲ್ಲಿ 11 ವಿಕೆಟ್ ಕಿತ್ತಿದ್ದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 29, 2020, 14:26 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X