ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾದೇಶ: ಕೊನೇ ಅಭ್ಯಾಸ ಪಂದ್ಯದಲ್ಲಾದ್ರೂ ಭಾರತ ಗೆದ್ದೀತ್ತಾ?

India vs Bangladesh, 10th Warm-up game preview

ಕಾರ್ಡಿಫ್, ಮೇ 28: ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ 2019 ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿತ್ತು. ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ ಸ್ಟೇಡಿಯಂನಲ್ಲಿ ಮಂಗಳವಾರ (ಮೇ 28) ಭಾರತ ತಂಡ ಎರಡನೇ ಮತ್ತು ಕೊನೇ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲು ಸ್ವೀಕರಿಸಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಅಭ್ಯಾಸ ಪಂದ್ಯದ ಸೋಲು-ಗೆಲುವಿನ ಆಧಾರದಲ್ಲಿ ವಿಶ್ವಕಪ್ ಭವಿಷ್ಯ ನಿರ್ಧರಿಸಲಾಗೋಲ್ಲ. ಆದರೆ ಇಡೀ ತಂಡದ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ಈ ಗೆಲುವೂ ಪ್ರಮುಖವೆ. ಹೀಗಾಗಿ ಭಾರತ ಈ ಪಂದ್ಯದಲ್ಲಾದರೂ ಗೆಲ್ಲಬೇಕಿದೆ. ಒಂದಿಷ್ಟು ವಿಭಾಗಗಳ ಕಡೆ ಗಮನ ಹರಿಸಿದರೆ ಕೊಹ್ಲಿ ಬಳಗಕ್ಕೆ ಬಾಂಗ್ಲಾ ವಿರುದ್ಧದ ಗೆಲುವು ಕಷ್ಟವೇನಲ್ಲ.

ಐಸಿಸಿ ವಿಶ್ವಕಪ್ 2019: ಧೋನಿ ಟೀಕಾಕಾರರಿಗೆ 'ವಾರ್ನ್' ಮಾಡಿದ ಶೇನ್!ಐಸಿಸಿ ವಿಶ್ವಕಪ್ 2019: ಧೋನಿ ಟೀಕಾಕಾರರಿಗೆ 'ವಾರ್ನ್' ಮಾಡಿದ ಶೇನ್!

ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್‌ಗಳು, ಮಧ್ಯಮ ಕ್ರಮಾಂಕ, ಬೌಲರ್‌ಗಳ ಬೆಂಬಲ ಗಮನಾರ್ಹವಾಗಿರಲಿಲ್ಲ. ರವೀಂದ್ರ ಜಡೇಜಾ ಅವರ 54 ರನ್ ಮತ್ತು ಹಾರ್ದಿಕ್ ಪಾಂಡ್ಯ 30 ರನ್ ಕೊಡುಗೆ ಬಿಟ್ಟರೆ ಭಾರತ ತಂಡ, ಏಕದಿನ ರ್ಯಾಂಕಿಂಗ್‌ನಲ್ಲಿನ ತನ್ನ ದ್ವಿತೀಯ ಶ್ರೇಯಾಂಕಕ್ಕೆ ನ್ಯಾಯ ಒದಗಿಸಿರಲಿಲ್ಲ.

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತದ ನಿರ್ಲಕ್ಷ್ಯದಾಟದಿಂದಾಗಿ ನ್ಯೂಜಿಲ್ಯಾಂಡ್ 6 ವಿಕೆಟ್ ಗೆಲುವನ್ನಾಚರಿಸಿತ್ತು. ಜೊತೆಗೆ ರಾಸ್ ಟೇಲರ್ ಮತ್ತು ಕೇನ್ ವಿಲಿಯಮ್ಸನ್ ಅರ್ಧ ಶತಕ, ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ನೀಶಮ್ ಮಾರಕ ಬೌಲಿಂಗ್ ತಂಡಕ್ಕೆ ನೆರವು ನೀಡಿತ್ತು. ಇಂದಿನ ಪಂದ್ಯದಲ್ಲಾದರೂ ಭಾರತ ಗಾಯಕ್ಕೀಡಾಗದೆ, ಎಚ್ಚರಿಕೆ ಆಟದ ಮೂಲಕವೇ ಬಲ ಪ್ರದರ್ಶಿಸಬೇಕಿದೆ. ಪಂದ್ಯ 3 pmಗೆ ಆರಂಭಗೊಳ್ಳಲಿದೆ.

ವಿಶ್ವಕಪ್ 2019: ಮಾರ್ಟಿನ್ ಗಪ್ಟಿಲ್ ಪ್ರಕಾರ ಭಾರತ ಈ ಸಾರಿ ಕಪ್‌ ಗೆಲ್ಲಲ್ವಾ?!ವಿಶ್ವಕಪ್ 2019: ಮಾರ್ಟಿನ್ ಗಪ್ಟಿಲ್ ಪ್ರಕಾರ ಭಾರತ ಈ ಸಾರಿ ಕಪ್‌ ಗೆಲ್ಲಲ್ವಾ?!

ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ಎಂಎಸ್ ಧೋನಿ (ವಿಕೆ), ರೋಹಿತ್ ಶರ್ಮಾ, ಶಿಖರ್ ಧವನ್, ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಕೇದಾರ ಜಾಧವ್, ಜಸ್‌ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್.

ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಭವಿಷ್ಯ ನುಡಿದ ವಕಾರ್‌ ಯೂನಿಸ್‌!ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಭವಿಷ್ಯ ನುಡಿದ ವಕಾರ್‌ ಯೂನಿಸ್‌!

ಬಾಂಗ್ಲಾ ತಂಡ: ಮುಷ್ಫಿಕರ್ ರಹೀಮ್ (ವಿಕೆ), ಮಶ್ರಫೆ ಮೊರ್ಟಾಜಾ (ಸಿ), ತಮೀಮ್ ಇಕ್ಬಾಲ್, ಲಿಟಾನ್ ದಾಸ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ಮಹಮ್ಮುದುಲ್ಲಾ, ಶಬ್ಬೀರ್ ರಹಮಾನ್, ಮೊಹಮ್ಮದ್ ಸೈಫುದ್ದೀನ್, ಮೆಹಿದಿ ಹಸನ್, ಮುಸ್ತಾಫಿಝುರ್ ರಹಮಾನ್, ರುಬೆಲ್ ಹುಸೇನ್, ಮೊಹಮ್ಮದ್ ಮಿಥುನ್, ಅಬು ಜಾಯೆದ್, ಮೊಸಾದೆಕ್ ಹುಸೇನ್.

Story first published: Tuesday, May 28, 2019, 12:55 [IST]
Other articles published on May 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X