ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ, ಟೆಸ್ಟ್: ಮೂರೇ ದಿನಕ್ಕೆ ಮುಗ್ಗರಿಸಿದ ಬಾಂಗ್ಲಾ ಟೈಗರ್ಸ್!

India vs Bangladesh, 1st Test, Day 3 - Live Cricket Score

ಇಂದೋರ್‌, ನವೆಂಬರ್ 16: ಮಯಾಂಕ್ ಅಗರ್ವಾಲ್ ದ್ವಿಶತಕ, ಚೇತೇಶ್ವರ್ ಪೂಜಾರ-ಅಜಿಂಕ್ಯ ರಹಾನೆ-ರವೀಂದ್ರ ಜಡೇಜಾ ಅರ್ಧಶತಕ, ಮೊಹಮ್ಮದ್ ಶಮಿ-ರವಿಚಂದ್ರನ್ ಅಶ್ವಿನ್-ಉಮೇಶ್ ಯಾದವ್ ಮಾರಕ ಬೌಲಿಂಗ್‌ ನೆರವಿನೊಂದಿಗೆ ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಭಾರತ ತಂಡ, ಬಾಂಗ್ಲಾವನ್ನು ಇನ್ನಿಂಗ್ಸ್ ಸಹಿತ 130 ರನ್‌ನಿಂದ ಸೋಲಿಸಿದೆ.

ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?ಇಂದೋರ್‌ನಲ್ಲಿ ಸೊನ್ನೆ ಸುತ್ತಿದ ದಾಖಲೆವೀರ : ಕೊಹ್ಲಿ ಡಕ್‌ಔಟ್‌ ಬಗ್ಗೆ ನಿಮಗೆಷ್ಟು ಗೊತ್ತು?

ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿ ನಡೆಯುತ್ತಿರುವ ಈ ಟೆಸ್ಟ್ ಸರಣಿಯಲ್ಲೂ ವಿರಾಟ್ ಕೊಹ್ಲಿ ಪಡೆ ಪಾರಮ್ಯ ಮುಂದುವರೆಸಿದೆ. ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಈಗಾಗಲೇ 240 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಭಾರತದ ಖಾತೆಗೆ ಇಂದೋರ್ ಗೆಲುವು 60 ಅಂಕಗಳನ್ನು ಸೇರಿಸಿದೆ. ಇಲ್ಲಿಗೆ ಭಾರತ ಒಟ್ಟು 300 ಅಂಕಗಳನ್ನು ಕಲೆ ಹಾಕಿದಂತಾಗಿದೆ.

ಭಾರತ vs ಬಾಂಗ್ಲಾದೇಶ, 1ನೇ ಟೆಸ್ಟ್ ಪಂದ್ಯ, ಸ್ಕೋರ್‌ಕಾರ್ಡ್

1
46119

ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 16) ಮುಕ್ತಾಯಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾ, ಮುಷ್ಫಿಕರ್ ರಹೀಮ್ 43, ಮೊಮಿನುಲ್ ಹಕ್ 37, ಲಿಟನ್ ದಾಸ್ 21 ರನ್‌ನೊಂದಿಗೆ 58.3 ಓವರ್‌ಗೆ 150 ರನ್ ಪೇರಿಸಿತು.

ಐಪಿಎಲ್ 2020: ಎಲ್ಲಾ ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿಐಪಿಎಲ್ 2020: ಎಲ್ಲಾ ತಂಡಗಳು ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 6, ಚೇತೇಶ್ವರ ಪೂಜಾರ 54, ವಿರಾಟ್ ಕೊಹ್ಲಿ 0, ಅಜಿಂಕ್ಯ ರಹಾನೆ 86, ಮಯಾಂಕ್ ಅಗರ್ವಾಲ್ 243, ರವೀಂದ್ರ ಜಡೇಜಾ 60 ರನ್‌ ಸೇರಿಸಿದ್ದರು. ಶುಕ್ರವಾರ (ನವೆಂಬರ್ 15) ದಿನದಾಟದ ಅಂತ್ಯಕ್ಕೆ ಭಾರತ 114 ಓವರ್‌ಗೆ 6 ವಿಕೆಟ್ ಕಳೆದು 493 ರನ್ ಮಾಡಿ, ಡಿಕ್ಲೇರ್ ಘೋಷಿಸಿತ್ತು.

ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!

ನಿರ್ಣಾಯಕ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ, ಮುಷ್ಫಿಕರ್ ರಹೀಮ್ 64, ಲಿಟನ್ ದಾಸ್ 35, ಮೆಹಿದಿ ಹಸನ್ 38 ರನ್‌ನೊಂದಿಗೆ 213 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಭಾರತದ ಬೌಲರ್‌ಗಳಾದ ಇಶಾಂತ್ ಶರ್ಮಾ 2+1, ಉಮೇಶ್ ಯಾದವ್ 2+2, ಮೊಹಮ್ಮದ್ ಶಮಿ 3+4, ರವಿಚಂದ್ರನ್ ಅಶ್ವಿನ್ 2+3 ವಿಕೆಟ್‌ನೊಂದಿಗೆ ಮಿಂಚಿದರು. ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠರೆನಿಸದರು.

ಅಫ್ಘಾನಿಸ್ತಾನ ಎದುರು 30 ರನ್‌ನಿಂದ ಗೆದ್ದು ದಾಖಲೆ ಬರೆದ ವೆಸ್ಟ್ ಇಂಡೀಸ್!ಅಫ್ಘಾನಿಸ್ತಾನ ಎದುರು 30 ರನ್‌ನಿಂದ ಗೆದ್ದು ದಾಖಲೆ ಬರೆದ ವೆಸ್ಟ್ ಇಂಡೀಸ್!

ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.

ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!

ಬಾಂಗ್ಲಾದೇಶ ತಂಡ: ಇಮ್ರುಲ್ ಕಾಯೆಸ್, ಶಾಡ್ಮನ್ ಇಸ್ಲಾಂ, ಮೊಹಮ್ಮದ್ ಮಿಥುನ್, ಮೊಮಿನುಲ್ ಹಕ್ (ಸಿ), ಮುಶ್ಫಿಕುರ್ ರಹೀಮ್, ಮಹಮುದುಲ್ಲಾ, ಲಿಟಾನ್ ದಾಸ್ (ವಿಕೆ), ಮೆಹೆದಿ ಹಸನ್, ತೈಜುಲ್ ಇಸ್ಲಾಂ, ಅಬು ಜಯೀದ್, ಎಬಾದತ್ ಹೊಸೈನ್.

Story first published: Saturday, November 16, 2019, 16:14 [IST]
Other articles published on Nov 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X