ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್‌ನ ಭಾರತದ ಸಂಭಾವ್ಯ ಪ್ಲೇಯಿಂಗ್ XI ತಂಡ

India vs Bangladesh 2019: India’s predicted playing 11 for first Test

ಟಿ-ಟ್ವೆಂಟಿ ಸರಣಿ ಗೆಲುವಿನ ಬಳಿಕ ಬಾಂಗ್ಲಾದೇಶದ ವಿರುದ್ಧ ಭಾರತ ನವೆಂಬರ್ 14 ರಿಂದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಎರಡು ಪಂದ್ಯಗಳ ಈ ಸರಣಿಗೆ ಎರಡೂ ತಂಡಗಳು ಸಜ್ಜಾಗಿದೆ. ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್‌ನಲ್ಲಿ ಭಾರತ ಈಗಾಗಲೇ ಅಗ್ರಸ್ಥಾನದಲ್ಲಿದ್ದು ಈ ಸರಣಿಯನ್ನು ಗೆದ್ದು ವರ್ಷಾಂತ್ಯಕ್ಕೆ ಅಂಕ ಪಟ್ಟಿಯಲ್ಲಿ ಮತ್ತಷ್ಟು ಅಂತರವನ್ನು ಕಾಯ್ದುಕೊಳ್ಳುವ ಇರಾದೆಯಲ್ಲಿದೆ.

ಮೊದಲ ಟೆಸ್ಟ್‌ಗೂ ಮುನ್ನವೇ ಬಾಂಗ್ಲಾ ಬೌಲರ್‌ಗಳು ಬೆದರಿದ್ದು ಯಾಕೆ?ಮೊದಲ ಟೆಸ್ಟ್‌ಗೂ ಮುನ್ನವೇ ಬಾಂಗ್ಲಾ ಬೌಲರ್‌ಗಳು ಬೆದರಿದ್ದು ಯಾಕೆ?

ಹೀಗಾಗಿ ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಆಡುವ ೧೧ರ ಬಳಗ ಮಹತ್ವದ್ದು. ಹೀಗಾಗಿ ಯಾರ್ಯಾರು ಯಾವ ಯಾವ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ ಅನ್ನೋದನ್ನು ಬನ್ನಿ ನೋಡೋಣ.

ಭಾರತ vs ಬಾಂಗ್ಲಾದೇಶ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46119
ಆರಂಭಿಕರು: ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್:

ಆರಂಭಿಕರು: ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್:

ಈ ಜೋಡಿ ಕಳೆದ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದಿತ್ತು. ಸರಣಿಯುದ್ದಕ್ಕೂ ನೀಡಿದ ಅದ್ಭುತ ಪ್ರದರ್ಶನ ಹಲವು ಸಮಯಗಳಿಂದ ಭಾರತ ಎದುರಿಸುತ್ತಿದ್ದ ಆರಂಭಿಕರ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ನೀಡಿದೆ. ರೋಹಿತ್ ಶರ್ಮಾ ಒಂದು ದ್ವಿಶತಕ ಹಾಗೂ ಎರಡು ಶತಕ ಸಿಡಿಸಿದ್ರೆ ಮಾಯಾಂಕ್ ಅಗರ್ವಾಲ್ ಕೂಡ ಒಂದು ದ್ವಿಶತಕ ಹಾಗೂ ಒಂದು ಶತಕ ಬಾರಿಸಿದರು. ಹೀಗಾಗಿ ಈ ಜೋಡಿಯೇ ಬಾಂಗ್ಲಾದೇಶದ ವಿರುದ್ಧವೂ ಇನ್ನಿಂಗ್ಸ್ ಆರಂಬಿಸುವ ಕುರಿತಾಗಿ ಯಾವುದೇ ಅನುಮಾನಗಳು ಇಲ್ಲ.

ಮಧ್ಯಮ ಕ್ರಮಾಂಕ: ಚೇತೇಶ್ವರ್ ಪೂಜಾರ, ವಿರಾಟ್ ಕೋಹ್ಲಿ, ಅಜಿಂಕ್ಯಾ ರೆಹಾನೆ

ಮಧ್ಯಮ ಕ್ರಮಾಂಕ: ಚೇತೇಶ್ವರ್ ಪೂಜಾರ, ವಿರಾಟ್ ಕೋಹ್ಲಿ, ಅಜಿಂಕ್ಯಾ ರೆಹಾನೆ

ರೋಹಿತ್ ಶರ್ಮಾ ಆರಂಭಿನಾಗಿ ಭಡ್ತಿ ಪಡೆದುಕೊಂಡಿದ್ದು ಮಧ್ಯಮ ಕ್ರಮಾಂಕಕ್ಕೂ ಸಹಕಾರಿಯಾಗಿದೆ. ಚೇತೇಶ್ವರ್ ಪೂಜಾರ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ೨ ಅರ್ಧ ಶತಕವನ್ನು ಸಿಡಿಸಿದ್ದಾರೆ. ಆದರೆ ಕಳೆದ ಎರಡು ಸರಣಿಯಲ್ಲಿ ಯಾವುದೇ ಶತಕ ಪೂಜಾರ ಬ್ಯಾಟ್‌ನಿಂದ ಸಿಡಿದಿಲ್ಲ ಅನ್ನೊದು ಸ್ವಲ್ಪ ಹಿನ್ನೆಡೆ. ಇನ್ನು ನಾಯಕ ವಿರಾಟ್‌ಕೋಹ್ಲಿ ದ.ಆಫ್ರಿಕಾ ವಿರುಧ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ತನ್ನ ಕೆರಿಯರ್‌ನ ಅತ್ಯುತ್ತಮ 254*ರನ್ ಸಿಡಿಸಿದ್ರು. ವಿರಾಟ್‌ಕೋಹ್ಲಿಯಂತಾ ಆಟಗಾರನಿಗೆ ಈ ಫಾರ್ಮನ್ನು ಮುಂದುವರಸಿಕೊಂಡು ಹೋಗುವುದು ದೊಡ್ಡ ಸಮಸ್ಯೆಯಲ್ಲ. ಉಪ ನಾಯಕ ಅಜಿಂಕ್ಯಾ ರಹಾನೆಯೂ ಉತ್ತಮ ಫಾರ್ಮ್ ನಲ್ಲಿದ್ದಾರೆ. ವೆಸ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಹಾಗೂ ಕಳೆದ ದ.ಆಫ್ರಿಕಾ ಸರಣಿಯಲ್ಲಿ ತಲಾ ಒಂದು ಶತಕ ಸಿಡಿಸಿದ್ದರು.

ಆಲ್‌ರೌಂಡರ್‌ಗಳು: ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್

ಆಲ್‌ರೌಂಡರ್‌ಗಳು: ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್

ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ಒಂದು ವರ್ಷದಿಂದೀಚೆಗೆ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಕಳೆದ ಹಲವು ಸರಣಿಗಳಲ್ಲಿ ನಿರಂತರವಾಗಿ ರನ್‌ಗಳಿಸುತ್ತಿದ್ದಾರೆ. ಪರ್ಫೆಕ್ಟ್‌ ಆಲ್‌ರೌಂಡರ್ ಆಗಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ ಸ್ಪಿನ್ನರ್ಸ್ ವಿಭಾಗವನ್ನು ಮುನ್ನಡೆಸುತ್ತಿದ್ದು ಅವಕಾಶ ಸಿಕ್ಕಾಗ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ.

ವಿಕೆಟ್‌ ಕೀಪರ್: ವೃದ್ಧಿಮಾನ್ ಸಾಹಾ

ವಿಕೆಟ್‌ ಕೀಪರ್: ವೃದ್ಧಿಮಾನ್ ಸಾಹಾ

ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಯಲ್ಲಿ ರಿಷಬ್ ಪಂತ್ ವಿಫಲವಾದ ನಂತರ ಅನುಭವಿ ವೃದ್ಧಿಮಾನ್ ಸಾಹಾ ದ,ಆಫ್ರಿಕಾ ವಿರುದ್ಧ ಅವಕಾಶ ಪಡೆದಿದ್ದರು. ವಿಕೆಟ್ ಹಿಂದೆ ಅತ್ಯುತ್ತಮವಾಗಿ ಮಿಂಚುತ್ತಿದ್ದು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಬೌಲಿಂಗ್ ವಿಭಾಗ: ಇಶಾಂತ್ ಶರ್ಮಾ, ಮೊಹಮದ್ ಶಮಿ, ಉಮೇಶ್ ಯಾದವ್

ಬೌಲಿಂಗ್ ವಿಭಾಗ: ಇಶಾಂತ್ ಶರ್ಮಾ, ಮೊಹಮದ್ ಶಮಿ, ಉಮೇಶ್ ಯಾದವ್

ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಗಾಯಾಳುಗಳಾಗಿ ತಂಡದಿಂದ ಹೊರಗಿರುವ ಹೊರತಾಗಿಯೂ ಭಾರತ ಬೌಲಿಂಗ್ ಅತ್ಯುತ್ತಮವಾಗಿದೆ. ತಂಡದಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್ ಇದ್ದರೂ ಪೇಸ್ ಬೌಲಿಂಗ್ ಗೆ ಸಹಕಾರಿಯಾಗುವ್ ಪಿಚ್ ಆಗಿರುವುದರಿಂದ ಮೂವರು ವೇಗಿಗಳೊಂದಿಗೆ ಭಾರತ ಕಣಕ್ಕಿಳಿಯಲಿದೆ. ಇಶಾಂತ್ ಶರ್ಮಾ, ಮೊಹಮದ್ ಶಮಿ, ಉಮೇಶ್ ಯಾದವ್ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಹರಿಣಗಳನ್ನು ಹೆಡೆಮುರಿಕಟ್ಟಿದ್ದರು. ಇಶಾಂತ್ ಶರ್ಮಾ ವಿಕೆಟ್ ಕೀಳುವಲ್ಲಿ ಹಿನ್ನೆಡೆ ಅನುಭವಿಸಿದರೂ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಶಮಿ ದ.ಆಫ್ರಿಕಾದ ಪ್ರಮುಖ ವಿಕೆಟ್‌ಗಳನ್ನು ಕಿತ್ತು ಸಂಪೂರ್ಣವಾಗಿ ಆಫ್ರಿಕನ್ನರನ್ನು ಕಂಗೆಡಿಸಿದ್ರು. ಉಮೇಶ್ ಯಾದವ್ 2ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್ ಕಿತ್ತು ಗ್ರೇಟ್ ಕಂಬ್ಯಾಕ್ ಮಾಡಿದ್ರು.

Story first published: Thursday, November 14, 2019, 10:05 [IST]
Other articles published on Nov 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X