ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ: 2ನೇ ಟಿ20ಯಲ್ಲಿ ಆಡಲಿರುವ ಭಾರತ ಸಂಭಾವ್ಯ XI

India vs Bangladesh: 2nd T20I: India probable XI for the Rajkot match

ರಾಜ್‌ಕೋಟ್, ನವೆಂಬರ್ 6: ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 7) ಭಾರತ ಮತ್ತು ಪ್ರವಾಸಿ ಬಾಂಗ್ಲಾದೇಶ ತಂಡಗಳು ದ್ವಿತೀಯ ಟಿ20 ಪಂದ್ಯವನ್ನಾಡಲಿದೆ. ಮೊದಲ ಪಂದ್ಯವನ್ನು ಸೋತಿರುವ ರೋಹಿತ್ ಶರ್ಮಾ ಪಡೆ, ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಉಳಿಸಿಕೊಳ್ಳಬೇಕಿದೆ.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ನಮ್ಮ ಶಿವಮೊಗ್ಗ ತಂಡದ ನಿಶಾಂತ್ ಸಿಂಗ್ ಬಂಧನಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ನಮ್ಮ ಶಿವಮೊಗ್ಗ ತಂಡದ ನಿಶಾಂತ್ ಸಿಂಗ್ ಬಂಧನ

2019ರ ವಿಶ್ವಕಪ್ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಅಲ್ಲಿ ಏಕದಿನ, ಟಿ20, ಟೆಸ್ಟ್ ಎಲ್ಲದರಲ್ಲೂ ಪಾರಮ್ಯ ಮೆರೆದಿತ್ತು. ಅನಂತರ ದಕ್ಷಿಣ ಆಫ್ರಿಕಾ ವಿರುದ್ಧವೂ ಮೇಲುಗೂ ಸಾಧಿಸಿತ್ತು. ಆದರೆ ಭಾರತ ಗೆಲುವಿನೋಟಕ್ಕೆ ಬಾಂಗ್ಲಾ ತಂಡ ಚೊಚ್ಚಲ ಟಿ20 ವಿಜಯದೊಂದಿಗೆ ಬ್ರೇಕ್ ಒತ್ತಿತ್ತು.

ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!ವೈರಲ್ ಆಗ್ತಿದೆ ಕೆಎಲ್ ರಾಹುಲ್ ಪ್ರೀತಿ ಗುಟ್ಟು ಪಿಸುಗುಟ್ಟೋ ಫೋಟೋ!

ಈ ಹಿಂದೆ ಆಡಿದ 8 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ, ದೆಹಲಿ ಪಂದ್ಯದ ಸೋಲಿನೊಂದಿಗೆ ಬಾಂಗ್ಲಾ, ಗೆಲುವಿನ ಇತಿಹಾಸ ಬರೆಯಲು ಕಾರಣವಾಗಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಮೊದಲ ಟಿ೦20ಯಲ್ಲಿ ಭಾರತದ ಕೆಲವೊಂದು ತಪ್ಪುಗಳನ್ನು ಮಾಡಿತ್ತು. ಹೊಸ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡಿದ್ದರಿಂದ ಸಹಜವಾಗೇ ತಂಡದಲ್ಲಿ ಅನುಭವದ ಕೊರತೆಯಿದ್ದಂತೆ ಕಾಣಿಸಿತ್ತು. ದ್ವಿತೀಯ ಪಂದ್ಯದಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡರೆ ಪಂದ್ಯದ ಗೆಲುವು ಖಂಡಿತಾ ದೇಸಿ ತಂಡದ್ದಾಗಲಿದೆ. ಆರಂಭಿಕರಾಗಿ ತಂಡದ ಎಂದಿನ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಆಡಲಿದ್ದಾರೆ. 3ನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಇರಲಿದ್ದಾರೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಹಿಂದಿನ ಪಂದ್ಯದಲ್ಲಿ 22 ರನ್‌ ಕೊಡುಗೆ ನೀಡಿದ್ದ ಶ್ರೇಯಸ್ ಐಯ್ಯರ್ 4ನೇ ಸ್ಥಾನದಲ್ಲಿ, 27 ರನ್ ನೀಡಿದ್ದ ರಿಷಬ್ ಪಂತ್ 5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಯುವುದನ್ನು ನಿರೀಕ್ಷಿಸಲಾಗಿದೆ. ಇನ್ನು 6ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಆಡುವುದನ್ನು ನಿರೀಕ್ಷಿಸಲಾಗಿದೆ.

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

7ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಬರಲಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೃನಾಲ್ ಬಿಟ್ಟ ಕ್ಯಾಚ್ ಫಲಿತಾಂಶದಲ್ಲಿ ದುಬಾರಿಯಾಗಿ ಪರಿಣಮಿಸಿತ್ತು. ಇನ್ನು 8ನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಮೈದಾನಕ್ಕಿಳಿಯುವ ಸಾಧ್ಯತೆಯಿದೆ.

ಬೌಲರ್‌ಗಳ ಬಣ

ಬೌಲರ್‌ಗಳ ಬಣ

ಟೀಮ್ ಇಂಡಿಯಾ ಬೌಲರ್‌ಗಳ ಬಣದಲ್ಲಿರುವ ಯುಜುವೇಂದ್ರ ಚಾಹಲ್ 9ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ, ದೀಪಕ್ ಚಾಹರ್ 10 ಕ್ರಮಾಂಕದಲ್ಲಿ ಮತ್ತು ಶಾರ್ದೂಲ್ ಠಾಕೂರ್ 11ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿರುವುದನ್ನು ನಿರೀಕ್ಷಿಸಬಹುದು.

Story first published: Wednesday, November 6, 2019, 19:49 [IST]
Other articles published on Nov 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X