ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾ, ಡೇ-ನೈಟ್ ಟೆಸ್ಟ್: ಕೊಹ್ಲಿ, ಪೂಜಾರ ಅರ್ಧ ಶತಕದಾಟ

Pink Ball Test ; Bangladesh 73/6 at lunch on Day 1 | Oneindia kannada
India vs Bangladesh, 2nd Test - Live Cricket Score

ಕೋಲ್ಕತ್ತಾ, ನವೆಂಬರ್ 22: ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಆತಿಥೇಯ ಭಾರತದ ವಿರುದ್ಧ ಚೊಚ್ಚಲ ಡೇ-ನೈಟ್ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಮೊದಲ ಇನ್ನಿಂಗ್ಸ್‌ ಆಡಿದ ಬಾಂಗ್ಲಾ ತಂಡ ಇರುಳಿನಲ್ಲಿ ಆಡಲು ಭಯವೆಂಬಂತೆ ಸಂಜೆ ವೇಳೆಗಾಗಲೇ 106 ರನ್‌ ಬಾರಿಸಿ ಇನ್ನಿಂಗ್ಸ್‌ ಮುಗಿಸಿತ್ತು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ಆಡುತ್ತಿದೆ.

ಇನ್ನಿಂಗ್ಸ್ ಆರಂಭಿಸಿರುವ ಭಾರತ, ಮಯಾಂಕ್ ಅಗರ್ವಾಲ್ (14), ರೋಹಿತ್ ಶರ್ಮಾ (21), ಚೇತೇಶ್ವರ ಪೂಜಾರ (55) ವಿಕೆಟ್‌ಗಳನ್ನು ಕಳೆದುಕೊಂಡಿದೆ. ಶುಕ್ರವಾರ (ನವೆಂಬರ್ 22) ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 46 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 174 ರನ್ ಮಾಡಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ಶಾಡ್ಮನ್ ಇಸ್ಲಾಂ 29, ಇಮ್ರುಲ್ ಕಾಯೆಸ್ 4, ಮೊಮಿನುಲ್ ಹಕ್ 0, ಮೊಹಮ್ಮದ್ ಮಿಥುನ್ 0, ಮುಶ್ಫಿಕರ್ ರಹೀಮ್ 0, ಮೊಹಮದುಲ್ಲ 6, ಲಿಟನ್ ದಾಸ್ 24, ನಯೀಮ್ ಹಸನ್ 19, ಮೆಹಿದಿ ಹಸನ್ 8 ರನ್‌ನೊಂದಿಗೆ 30.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 106 ಬಾರಿಸಿತು. ಇಶಾಂತ್ ಶರ್ಮಾ 5, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

ಭಾರತ vs ಬಾಂಗ್ಲಾ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!ಭಾರತ vs ಬಾಂಗ್ಲಾ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!

2 ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಸಹಿತ 130 ರನ್ ಜಯ ಗಳಿಸಿತ್ತು. ಈ ಪಂದ್ಯದಲ್ಲೂ ಟೀಮ್ ಇಂಡಿಯಾ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಟಾಸ್ ಬಳಿಕ ಇತ್ತಂಡಗಳ ಆಟಗಾರರ ಪರಿಚಯ ಮಾಡಿಕೊಂಡರು.

ಭಾರತ vs ಬಾಂಗ್ಲಾದೇಶ, ಡೇ-ನೈಟ್ ಟೆಸ್ಟ್, Live ಸ್ಕೋರ್‌ಕಾರ್ಡ್

1
46120

ಭಾರತ ಪ್ಲೇಯಿಂಗ್ XI: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (c), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ.

ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!

ಬಾಂಗ್ಲಾ ಪ್ಲೇಯಿಂಗ್ XI: ಶಾಡ್ಮನ್ ಇಸ್ಲಾಂ, ಇಮ್ರುಲ್ ಕಾಯೆಸ್, ಮೊಮಿನುಲ್ ಹಕ್ (ಸಿ) ಮೊಹಮ್ಮದ್ ಮಿಥುನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಲಿಟಾನ್ ದಾಸ್ (ವಿಕೆ), ನಯೀಮ್ ಹಸನ್, ಅಬು ಜಯೀದ್, ಅಲ್-ಅಮೀನ್ ಹೊಸೈನ್, ಎಬಾದತ್ ಹುಸೈನ್.

Story first published: Friday, November 22, 2019, 21:16 [IST]
Other articles published on Nov 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X