ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ ಬಾಂಗ್ಲಾದೇಶ ಫೈನಲ್ ಫೈಟ್, ತಂಡ, ಟಿವಿ ಸಮಯ

India Vs Bangladesh, Asia Cup 2018 Final: Squads, Timings, TV Channel Information

ದುಬೈ, ಸೆಪ್ಟೆಂಬರ್ 27: 14ನೇ ಆವೃತ್ತಿಯ ಏಷ್ಯಾಕಪ್ ನ ಅಂತಿಮ ಹಣಾಹಣಿಯಲ್ಲಿ ಆಡಲಿರುವ ತಂಡಗಳು ನಿಗದಿಯಾಗಿವೆ. ಹಾಲಿ ಚಾಂಪಿಯನ್​ಭಾರತ ಹಾಗೂ ಬಾಂಗ್ಲಾ ತಂಡಗಳು ಸೆಪ್ಟೆಂಬರ್ 28ರಂದು ಸೆಣಸಾಡಲಿವೆ.

ಬುಧವಾರದಂದು ನಡೆದ ಸೂಪರ್-4 ಹಂತದ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶವು 37 ರನ್ ಅಂತರದ ರೋಚಕ ಗೆಲುವು ದಾಖಲಿಸಿ, ಫೈನಲ್‌ ಆಡುವ ಅರ್ಹತೆ ಪಡೆದುಕೊಂಡಿತು.

ಏಷ್ಯಾಕಪ್ ಕ್ರಿಕೆಟ್ ನಿಮಗೆ ಗೊತ್ತಿರದ ರೋಚಕ ಸಂಗತಿಗಳು ಏಷ್ಯಾಕಪ್ ಕ್ರಿಕೆಟ್ ನಿಮಗೆ ಗೊತ್ತಿರದ ರೋಚಕ ಸಂಗತಿಗಳು

239 ರನ್ ಗಳಿಸಿದ್ದರು ಪಾಕಿಸ್ತಾನವನ್ನು 202ರನ್ ಗಳಿಗೆ ಕಟ್ಟಿ ಹಾಕುವ ಮೂಲಕ ಬಾಂಗ್ಲಾದೇಶ ಅರ್ಹ ಜಯ ಪಡೆಯಿತು. 2016ರ ಏಷ್ಯಾಕಪ್​ ಫೈನಲ​ ಪಂದ್ಯದಲ್ಲಿ ಭಾರತ-ಬಾಂಗ್ಲಾ ತಂಡಗಳು ಮುಖಾಮುಖಿಯಾಗಿದ್ದವು. ಎರಡು ವರ್ಷಗಳ ಬಳಿಕ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಂಗ್ಲಾ ಸಜ್ಜಾಗುತ್ತಿದೆ.

ಭಾರತ ಹಾಗೂ ಬಾಂಗ್ಲಾದೇಶವಲ್ಲದೆ ಈ ಟೂರ್ನಮೆಂಟ್ ನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ಹಾಂಗ್ ಕಾಂಗ್ ತಂಡಗಳು ಕಣದಲ್ಲಿದ್ದವು. ಭಾರತ ಹಾಗೂ ಬಾಂಗ್ಲಾದೇಶ ತಂಡಗಳು 34 ಬಾರಿ ಪರಸ್ಪರ ಎದುರಾಗಿದ್ದು, 28 ಬಾರಿ ಭಾರತ ಗೆಲುವು ಸಾಧಿಸಿದ್ದರೆ, ಬಾಂಗ್ಲಾದೇಶ 5 ಬಾರಿ ಗೆದ್ದಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ

ಪಾಕ್‌ಗೆ ಮಣ್ಣುಮುಕ್ಕಿಸಿದ ಬಾಂಗ್ಲಾ ಹುಲಿಗಳು: ಟ್ವಿಟ್ಟಿಗರಲ್ಲಿ ಸಂಭ್ರಮವೋ ಸಂಭ್ರಮ ಪಾಕ್‌ಗೆ ಮಣ್ಣುಮುಕ್ಕಿಸಿದ ಬಾಂಗ್ಲಾ ಹುಲಿಗಳು: ಟ್ವಿಟ್ಟಿಗರಲ್ಲಿ ಸಂಭ್ರಮವೋ ಸಂಭ್ರಮ

ಇಲ್ಲಿ ತನಕ ಪ್ರಮುಖ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿಲ್ಲ. ಈ ಬಾರಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಲು ಮೊರ್ತಜಾ ಪಡೆ ಸಿದ್ಧವಾಗಿದೆ.

ಕ್ರಿಕೆಟ್ : ಏಷ್ಯಾಕಪ್ ಇತಿಹಾಸ 1984ರಿಂದ ಇಲ್ಲಿ ತನಕದ ವಿಜೇತರು ಕ್ರಿಕೆಟ್ : ಏಷ್ಯಾಕಪ್ ಇತಿಹಾಸ 1984ರಿಂದ ಇಲ್ಲಿ ತನಕದ ವಿಜೇತರು

ದಿನ/ ದಿನಾಂಕ : ಶುಕ್ರವಾರ(ಸೆಪ್ಟೆಂಬರ್ 28)
ಸ್ಥಳ : ದುಬೈ-ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನ, ಯುನೈಟೆಡ್ ಅರಬ್ ಎಮಿರೇಟ್ಸ್.
ಸಮಯ: 5 ಗಂಟೆ (ಭಾರತೀಯ ಕಾಲಮಾನ ಪ್ರಕಾರ),
ನೇರ ಪ್ರಸಾರ : ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್, ಹಾಟ್ ಸ್ಟಾರ್, ಡಿಡಿ ನ್ಯಾಷನಲ್

ಏಷ್ಯಾಕಪ್ 2018 ವಿಶೇಷ ಪುಟ | ಆಟಗಾರರ ಸಾಧನೆ ಅಂಕಿ ಅಂಶ

ಭಾರತ ತಂಡ:
ರೋಹಿತ್ ಶರ್ಮ(ನಾಯಕ), ಶಿಖರ್ ಧವನ್ (ಉಪ ನಾಯಕ), ಕೆಎಲ್ ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್.

ಬಾಂಗ್ಲಾದೇಶ ತಂಡ ಮಸ್ರಾಫೆ ಬಿನ್ ಮೊರ್ತಾಜೋ(ನಾಯಕ​), ಶಕೀಬ್ ಅಲ್ ಹಸನ್ (ಉಪ ನಾಯಕ)(ಗಾಯಾಳು), ತಮೀಮ್ ಇಕ್ಬಾಲ್(ಗಾಯಾಳು), ಮೊಹಮ್ಮದ್ ಮಿಥುನ್, ಲಿಟ್ಟೊನ್ ಕುಮಾರ್ ದಾಸ್, ಮುಷ್ಫಿಕರ್ ರಹೀಮ್, ಅರಿಫುಲ್ ಹಕ್, ಮಹಮೂದುಲ್ಲಾ, ಮೊಸಡೆಕ್ ಹುಸೇನ್,ನಜ್ಮುಲ್ ಹುಸೇನ್​, ಮೆಹಿದ್ ಹಸನ್ ಮಿರಾಜ್, ನಜ್ಮುಲ್ ಇಸ್ಲಾಂ ಅಪು, ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್, ಅಬು ಹೈದರ್ ರೋನಿ.

Story first published: Thursday, September 27, 2018, 13:33 [IST]
Other articles published on Sep 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X