ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್‌ಗೂ ಮುನ್ನವೇ ಬಾಂಗ್ಲಾ ಬೌಲರ್‌ಗಳು ಬೆದರಿದ್ದು ಯಾಕೆ?

India vs Bangladesh: Indore pitch might please Indias fast bowlers

ಇಂದೋರ್: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಇಂದೋರ್‌ಗೆ ಆಗಮಿಸಿದೆ. ಸರಣಿ ಮೇಲೆ ಸರಣಿ ಬಾಚಿಕೊಂಡು ಮುನ್ನುಗ್ಗುತ್ತಿರುವ ಭಾರತ ತಂಡ ಬಾಂಗ್ಲಾ ವಿರುದ್ಧದ ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಿದ್ಧವಾಗಿದೆ. ಅದಕ್ಕೆ ಪೂರಕವಾಗಿ ಈಗ ಮತ್ತೊಂದು ಸುದ್ಧಿ ಬಂದಿದೆ. ಅದೇನೆಂದರೆ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಲಿದೆ ಅನ್ನೋದು. ಇದು ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದೆ.

ಡೇ-ನೈಟ್ ಟೆಸ್ಟ್‌ಗೂ ಮುನ್ನ ವಿಶೇಷ ಮನವಿ ಮಾಡಿದ ವಿರಾಟ್ ಕೊಹ್ಲಿ ಪಡೆಡೇ-ನೈಟ್ ಟೆಸ್ಟ್‌ಗೂ ಮುನ್ನ ವಿಶೇಷ ಮನವಿ ಮಾಡಿದ ವಿರಾಟ್ ಕೊಹ್ಲಿ ಪಡೆ

ಭಾರತೀಯ ವೇಗದ ಬೌಲಿಂಗ್ ದಾಳಿಗೆ ಕಳೆದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವೇ ಸೋತು ಶರಣಾಗಿ ಹೋಗಿತ್ತು. ಭಾರತೀಯ ಬೌಲರ್‌ಗಳು ಸರಣಿಯುದ್ದಕ್ಕೂ ಸಂಪೂರ್ಣ ಹಿಡಿತ ಸಾಧಿಸಿದ್ರು. ಮಾತ್ರವಲ್ಲ ಕಳೆದ ಹಲವು ಸರಣಿಗಳಲ್ಲಿ ಭಾರತೀಯ ವೇಗದ ಬೌಲರ್‌ಗಳು ಸ್ಪಷ್ಟವಾಗಿ ಮೇಲುಗೈ ಸಾಧಿಸಿ ಪಂದ್ಯಗಳನ್ನ ಗೆಲ್ಲಿಸಿದ್ದಾರೆ. ಹೀಗಾಗಿ ಇಂದೋರ್ ಪಿಚ್‌ನಲ್ಲೂ ಭಾರತೀಯ ಬೌಲರ್‌ಗಳ ಮೇಲಾಟವೇ ನಡೆಯಲಿದೆ ಅನ್ನೋದು ಸ್ಪಷ್ಟವಾಗಿದೆ.

ಇಂದೋರ್ ಪಿಚ್ ಕುರಿತಾಗಿ ಈಗಾಗಲೇ ಅನೇಕ ಪರಿಣತರು ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ. ಕಳೆದ ಎರಡು ರಣಜಿ ಫೈನಲ್‌ಗಳಿಗೆ ಇದೇ ಪಿಚ್ ಅನ್ನು ಬಳಸಲಾಗಿತ್ತು. ಮಧ್ಯ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಮುಖ್ಯ ಪಿಚ್ ಕ್ಯುರೇಟರ್ ಸಮಂಧಾರ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ಪಿಚ್ ಸಿದ್ದವಾಗಿದೆ. ನಾಲ್ಕು ವರ್ಷಗಳ ಕಾಲ ಸಮಯ ತೆಗೆದುಕೊಂಡು ಸಿದ್ಧವಾಗಿರುವ ಈ ಪಿಚ್‌ಗೆ ಕೆಂಪು ಮಣ್ಣನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಇದು ಭಾರತೀಯ ಬೌಲರ್‌ಗಳಿಗೆ ವರದಾನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶ್ರೀಲಂಕಾದಲ್ಲಿ ಇನ್ಮುಂದೆ ಮ್ಯಾಚ್‌ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!ಶ್ರೀಲಂಕಾದಲ್ಲಿ ಇನ್ಮುಂದೆ ಮ್ಯಾಚ್‌ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!

ಮತ್ತೊಂದೆಡೆ ಭಾರತೀಯ ವೇಗಿಗಳು ಈಗ ರೆಡ್‌ಹಾಟ್‌ ಫಾರ್ಮ್‌ನಲ್ಲಿದ್ದಾರೆ. ಹಿಂದೆಲ್ಲಾ ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ವೇಗಿಗಳು ಸ್ಪಿನ್ನರ್‌ಗಳಿವೆ ಬೆಂಬಲವಾಗಿ ಮಾತ್ರ ಇರುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಭಾರತದ ವೇಗದ ಬೌಲಿಂಗ್ ಪಡೆ ಸಂಪೂರ್ಣವಾಗಿ ಬದಲಾಗಿದೆ. ಕಳೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತೀಯ ಬೌಲರ್‌ಗಳು ಚೆಂಡಾಡಿದ್ದರು. ಹೀಗಾಗಿ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ ದಾಳಿಯನ್ನು ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಹೇಗೆ ಎದುರಿಸುತ್ತಾರೆ ಅನ್ನೋದು ಸದ್ಯದ ಕುತೂಹಲ.

Story first published: Tuesday, November 12, 2019, 18:49 [IST]
Other articles published on Nov 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X