ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ

India vs Bangladesh: Please leave Rishabh Pant alone - Rohit Sharma

ನವದೆಹಲಿ, ನವೆಂಬರ್ 9: ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ, ಯುವ ಬ್ಯಾಟ್ಸ್‌ಮನ್-ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಬೆಂಬಲಿಸಿದ್ದಾರೆ. ಪಂತ್‌ ಬಗೆಗಿನ ಟೀಕೆಗಳಿಗೆ ಪ್ರತಿಕ್ರಿಯಿಸಿದ ಶರ್ಮಾ, 'ಆತನನ್ನು (ಪಂತ್‌) ಅವನಷ್ಟಕ್ಕೆ ಬಿಟ್ಟುಬಿಡಿ,' ಎಂದಿದ್ದಾರೆ.

ಭಾರತ ಪರ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ ಹಿಟ್‌ಮ್ಯಾನ್ ರೋಹಿತ್ಭಾರತ ಪರ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ ಹಿಟ್‌ಮ್ಯಾನ್ ರೋಹಿತ್

ಮೈದಾನಕ್ಕಿಳಿಯುವ ಪಂತ್‌, ಪ್ರತೀಬಾರಿಯೂ ಕ್ರಿಕೆಟ್ ವೀಕ್ಷಕರ ಆಕರ್ಷಣೆಯ ಬಿಂದುವಾಗಿರುತ್ತಾರೆ. ಕೆಟ್ಟ ಹೊಡೆತಗಳಿಗೆ ಮುಂದಾಗೋದು, ಕೀಪಿಂಗ್‌ನಲ್ಲಿ ಎಡವೋದು ಇಂಥದ್ದಕ್ಕೆಲ್ಲ ಪಂತ್‌ ಚರ್ಚೆಗೊಳಗಾಗುತ್ತಲೇಯಿರುತ್ತಾರೆ.

ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!

ಆದರೆ ಪಂತ್‌ ಬೆನ್ನಿಗೆ ನಿಂತಿರುವ ರೋಹಿತ್, ರಿಷಬ್ ಬಗ್ಗೆ ಪ್ರಮುಖವೆನ್ನುವ, ಅಮೂಲ್ಯ ಅನ್ನಿಸುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಔಟ್ ತೀರ್ಪೆ ಬರಲಿಲ್ಲ

ಔಟ್ ತೀರ್ಪೆ ಬರಲಿಲ್ಲ

ರಾಜ್‌ಕೋಚ್‌ನಲ್ಲಿ ನಡೆದಿದ್ದ ಭಾರತ-ಬಾಂಗ್ಲಾ ದ್ವಿತೀಯ ಟಿ20ಯಲ್ಲಿ ಪಂತ್‌, ಲಿಟನ್ ದಾಸ್ ಅವರನ್ನು ಸ್ಟಂಪ್ಡ್ ಮಾಡಿದ್ದಕ್ಕೆ ಔಟ್ ತೀರ್ಪೆ ಬರಲಿಲ್ಲ. ಯಾಕೆಂದರೆ ಬ್ಯಾಟ್ಸ್‌ಮನ್ ದಾಟಿ ಬಂದ ಚೆಂಡು ವಿಕೆಟ್‌ಗಳನ್ನೂ ದಾಟಿ, ಕೀಪರ್‌ನಿಂದ ಸ್ಟಂಪ್ಡ್ ಎನಿಸದರೆ ಮಾತ್ರ ಬ್ಯಾಟ್ಸ್‌ಮನ್ ಔಟ್ ಎನಿಸಿಕೊಳ್ಳುತ್ತಾನೆ.

ಆತ ಅವನದ್ದೇ ಆಟ ಆಡಲು ಬಿಡಿ

ಆತ ಅವನದ್ದೇ ಆಟ ಆಡಲು ಬಿಡಿ

'ಪ್ರತಿ ದಿನ, ಪ್ರತೀ ನಿಮಿಷವೂ ಪಂತ್‌ ಬಗ್ಗೆ ಚರ್ಚೆಗಳಾಗುತ್ತಿರುತ್ತವೆ ಅನ್ನೋದು ನಿಮಗೆ ಗೊತ್ತಿದೆ. ನನಗನ್ನಿಸುವಂತೆ ಆತ ಮೈದಾನದಲ್ಲಿ ಏನು ಮಾಡಲು ಬಯಸುತ್ತಾನೋ ಅದನ್ನು ಮಾಡಲು ನಾವು ಬಿಡಬೇಕು. ನಾನು ನಿಮ್ಮೆಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ; ಪಂತ್‌ನನ್ನು ಕೊಂಚಕಾಲ ಅವನಷ್ಟಕೇ ಬಿಟ್ಟುಬಿಡಿ. ಆತ ನಮ್ಮ ತಂತ್ರವನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದ್ದಾನಷ್ಟೆ,' ಎಂದು ರೋಹಿತ್ ಪ್ರತಿಕ್ರಿಯಿಸಿದ್ದಾರೆ.

ನಂ.1 ಆಯ್ಕೆಯ ಆಟಗಾರ

ನಂ.1 ಆಯ್ಕೆಯ ಆಟಗಾರ

'ಪಂತ್ ಒಬ್ಬ ನಿರ್ಭೀತಿಯ ಆಟಗಾರ. ನಮಗೂ ಆತ ಹಾಗೆ ಇರೋದೇ ಬೇಕಾಗಿದೆ. ನೀವು ಆತನ ಬಗ್ಗೆ ಮಾತನಾಡೋದು, ಟೀಕಿಸೋದು ನಿಲ್ಲಿಸಿದರೆ ಆತನಿಗೆ ತನ್ನದೇ ಶೈಲಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯವಾಗುತ್ತದೆ. ಕೆಲವೇ ದಿನಗಳಲ್ಲಿ ಪಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಮೊದಲ ಆಯ್ಕೆಯ ಆಟಗಾರನಾಗುತ್ತನೆ,' ಎಂದು ಹಿಟ್‌ಮ್ಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನಾ-ನೀನಾ ಪಂದ್ಯ!

ನಾನಾ-ನೀನಾ ಪಂದ್ಯ!

ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯ ಸೋತಿದ್ದ ಭಾರತ, ರಾಜ್‌ಕೋಟ್‌ನಲ್ಲಿ ನಡೆದಿದ್ದ ದ್ವಿತೀಯ ಟಿ20ಯಲ್ಲಿ 8 ವಿಕೆಟ್‌ ಗೆಲುವನ್ನಾಚರಿಸಿ 3 ಪಂದ್ಯಗಳ ಟಿ20 ಸರಣಿಯನ್ನು 1-1ರಿಂದ ಸರಿದೂಗಿಸಿಕೊಂಡಿದೆ. ಭಾನುವಾರ (ನವೆಂಬರ್ 10) ನಾಗ್ಪುರದಲ್ಲಿನ ಪಂದ್ಯ ಸರಣಿ ವಿಜೇತರನ್ನು ನಿರ್ಧರಿಸಲಿದೆ.

Story first published: Saturday, November 9, 2019, 18:50 [IST]
Other articles published on Nov 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X