ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಮೊದಲ ಟಿ20ಯಲ್ಲಿ ಜೋಫ್ರಾ ಆರ್ಚರ್ ಆಡುವುದು ಬಹುತೇಕ ಖಚಿತ

India vs Engand: Jofra Archer ready to play 1st T20 against India

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಿಂದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆರ್ಚರ್‌ಗೆ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಕಾಡಿದ ಗಾಯದ ಸಮಸ್ಯೆಯ ಕಾರಣದಿಂದಾಗಿ ಚುಟುಕು ಸರಣಿಯಿಂದ ಹೊರಗುಳಿಯುವ ಆತಂಕವನ್ನು ಎದುರಿಸಿದ್ದರು. ಆದರೆ ಆರ್ಚರ್ ಮೊದಲ ಟಿ20 ಪಂದ್ಯದಲ್ಲಿ ಆಡಲು ಸಮರ್ಥರಾಗಿದ್ದಾರೆ ಎನ್ನಲಾಗಿದೆ.

ಜೋಫ್ರಾ ಆರ್ಚರ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಲಭ್ಯರಾಗುವ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ. ಆದರೆ ಕಳೆದ ಭಾನುವಾರ ಹಾಗೂ ಸೋಮವಾರ ಜೋಫ್ರಾ ಆರ್ಚರ್ ಅವರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವಾಗ ಅವರ ಚೇತರಿಕೆಯ ಮೇಲೆ ವೈದ್ಯಕೀಯ ತಂಡ ನಿಗಾವಹಿಸಿತ್ತು.

ಧವನ್/ರಾಹುಲ್, ಚಾಹರ್/ಭುವನೇಶ್ವರ್, ಶ್ರೇಯಸ್/ಸೂರ್ಯರಲ್ಲಿ ಆಡೋದ್ಯಾರು?!ಧವನ್/ರಾಹುಲ್, ಚಾಹರ್/ಭುವನೇಶ್ವರ್, ಶ್ರೇಯಸ್/ಸೂರ್ಯರಲ್ಲಿ ಆಡೋದ್ಯಾರು?!

ಮೊಣಕೈ ಗಾಯಕ್ಕೆ ಒಳಗಾಗಿದ್ದ ಆರ್ಚರ್

ಮೊಣಕೈ ಗಾಯಕ್ಕೆ ಒಳಗಾಗಿದ್ದ ಆರ್ಚರ್

25ರ ಹರೆಯದ ಆಲ್‌ರೌಂಡರ್ ಭಾರತದ ವಿರುದ್ಧಧ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನು ಗಾಯದ ಕಾರಣದಿಂದಾಗಿ ತಪ್ಪಿಸಿಕೊಂಡಿದ್ದರು. ಮೊಣಕೈ ನೋವಿಗೆ ಒಳಗಾಗಿದ್ದ ಆರ್ಚರ್ ಒಳಗಾಗಿದ್ದರು. ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯನ್ನು ಭಾರತ 3-1 ಅಂತರದಿಂದ ಗೆದ್ದು ಬೀಗಿದೆ.

ಮಾರ್ಗನ್ ನಾಯಕತ್ವದಲ್ಲಿ ಸಜ್ಜಾದ ಇಂಗ್ಲೆಂಡ್

ಮಾರ್ಗನ್ ನಾಯಕತ್ವದಲ್ಲಿ ಸಜ್ಜಾದ ಇಂಗ್ಲೆಂಡ್

ಪ್ರವಾಸಿ ಇಂಗ್ಲೆಂಡ್ ತಂಡ ಈಗ ಸಂಪೂರ್ಣ ಪ್ರಮಾಣದ ತಂಡದೊಂದಿಗೆ ಸೀಮಿತ ಓವರ್‌ಗಳ ಸರಣಿಗೆ ಸಿದ್ದವಾಗುತ್ತಿದೆ. ಈ ಸರಣಿಗಾಗಿ ಇಂಗ್ಲೆಂಡ್ ತಂಡದ ಚಿಕ್ಕಾಣಿಯನ್ನು ಇಯಾನ್ ಮಾರ್ಗನ್ ವಹಿಸಿಕೊಳ್ಳಲಿದ್ದಾರೆ. ಐದು ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಭಾರತದ ವಿರುದ್ಧ ಇಂಗ್ಲೆಂಡ್ ಆಡಲಿದೆ.

ಆರ್‌ಆರ್ ತಂಡಕ್ಕೂ ನಿರಾಳತೆ

ಆರ್‌ಆರ್ ತಂಡಕ್ಕೂ ನಿರಾಳತೆ

ಜೋಫ್ರಾ ಆರ್ಚರ್ ಗಾಯ ರಾಜಸ್ಥಾನ್ ರಾಯಲ್ಸ್ ತಂಡಕ್ಕೂ ಆತಂಕವನ್ನುಂಟು ಮಾಡಿದೆ. ಆರ್‌ಆರ್ ತಂಡದ ಪ್ರಮುಖ ವೇಗಿಯಾಗಿರುವ ಆರ್ಚರ್ ಈ ಬಾರಿಯ ಐಪಿಎಲ್‌ನಲ್ಲಿಯೂ ಆಡುವ ಬಗ್ಗೆ ಅನುಮಾನಗಳು ಳುವಂತೆ ಮಾಡಿತ್ತು. ಆದರೆ ಭಾರತದ ವಿರುದ್ಧದ ಟಿ20 ಸರಣಿಗೆ ಲಭ್ಯರಾಗಲಿದ್ದಾರೆ ಎಂಬ ಸುದ್ಧಿ ಒಂದಷ್ಟು ನಿರಾಳತೆ ಮೂಡುವಂತೆ ಮಾಡಿದೆ.

Story first published: Tuesday, March 9, 2021, 21:03 [IST]
Other articles published on Mar 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X