ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೃನಾಲ್-ಕರನ್ ಮಧ್ಯೆ ಮಾತಿನ ಚಕಮಕಿ, ಗಡ್ಡ ಎಳೆದ ಕೊಹ್ಲಿ: ವಿಡಿಯೋ

India vs England 1st ODI: Krunal Pandya reacts angrily to Tom Curran

ಪೂಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಮುಂಬೈ ಇಂಡಿಯನ್ಸ್ ಆಲ್ ರೌಂಡರ್, ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದರು. ಅರ್ಧ ಶತಕ ಬಾರಿಸಿದ್ದ ಪಾಂಡ್ಯ ತಂಡದ ಗೆಲುವಿಗೂ ಕಾರಣರಾಗಿದ್ದರು. ಆಕರ್ಷಕ ಬ್ಯಾಟಿಂಗ್, ಮಾರಕ ಬಾವಲಿಂಗ್ ಪ್ರದರ್ಶನ ನೀಡಿದ್ದ ಭಾರತ ಪಂದ್ಯದಲ್ಲಿ 66 ರನ್‌ಗಳ ಜಯ ದಾಖಲಿಸಿತ್ತಲ್ಲದೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆಯೂ ಸಾಧಿಸಿತ್ತು.

ಪಾದಾರ್ಪಣೆ ಪಂದ್ಯದಲ್ಲಿ ಸಾಲು ಸಾಲು ದಾಖಲೆಗಳ ಬರೆದ ಕನ್ನಡಿಗ ಕೃಷ್ಣಪಾದಾರ್ಪಣೆ ಪಂದ್ಯದಲ್ಲಿ ಸಾಲು ಸಾಲು ದಾಖಲೆಗಳ ಬರೆದ ಕನ್ನಡಿಗ ಕೃಷ್ಣ

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದ ಕೃನಾಲ್ ಪಾಂಡ್ಯ 31 ಎಸೆತಗಳಲ್ಲಿ ಅಜೇಯ 58 ರನ್ ಚಚ್ಚಿದ್ದರು. ಇದೇ ಪಂದ್ಯದಲ್ಲಿ ಕೃನಾಲ್ ಮತ್ತು ಇಂಗ್ಲೆಂಡ್ ಮಧ್ಯಮ ವೇಗಿ ಟಾಮ್ ಕರನ್ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕೃನಾಲ್-ಕರಣ್ ಮಧ್ಯೆ ವಾಗ್ವಾದ

ಕೃನಾಲ್-ಕರಣ್ ಮಧ್ಯೆ ವಾಗ್ವಾದ

ಆರಂಭಿಕ ಏಕದಿನ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ನಲ್ಲಿ ಕೃನಾಲ್ ಪಾಂಡ್ಯ ಮತ್ತು ಬೌಲಿಂಗ್ ಆಲ್ ರೌಂಡರ್ ಟಾಮ್ ಕರನ್ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಕಾಣಿಸಿತ್ತು. ಟಾಮ್ ಏನೋ ಹೇಳಿದರು ಅನ್ನಿಸುತ್ತೆ, ಅದಕ್ಕೆ ಸಿಟ್ಟಾದ ಪಾಂಡ್ಯ ಮಾತಿನ ಪ್ರತ್ಯುತ್ತರ ನೀಡುತ್ತ ಕರನ್ ಅವರತ್ತ ಬಂದಿದ್ದರು. ಆ ಬಳಿಕ ಅಂಪೈರ್ ಮಧ್ಯೆ ಪ್ರವೇಶಿಸಿ ಪಾಂಡ್ಯ ಅವರನ್ನು ಸಮಾಧಾನಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

ಗಡ್ಡ ಎಳೆದ ವಿರಾಟ್ ಕೊಹ್ಲಿ

ಗಡ್ಡ ಎಳೆದ ವಿರಾಟ್ ಕೊಹ್ಲಿ

ಘಟನೆ ನಡೆದಿದ್ದು ಭಾರತದ ಇನ್ನಿಂಗ್ಸ್‌ನ 49ನೇ ಓವರ್‌ನಲ್ಲಿ. ಸಿಂಗಲ್‌ ತೆಗೆದು ಬೌಲರ್‌ ಎಂಡ್‌ಗೆ ಬಂದ ಕೃನಾಲ್ ಅವರನ್ನುದ್ದೇಶಿಸಿ ಕರನ್ ಏನೋ ಹೇಳಿದರು. ಆಗ ಸಿಟ್ಟಾದ ಕೃನಾಲ್, ಕರನ್ ಅವರತ್ತ ನುಗ್ಗಿ ಹೋದರು. ಸಮಾಧಾನಿಸಲು ಬಂದ ಅಂಪೈರ್ ಬಳಿ ಕೃನಾಲ್ ದೂರು ನೀಡಿದ್ದು ಕಾಣಿಸಿತ್ತು. ಜೋಸ್ ಬಟ್ಲರ್ ಕೂಡ ಕರನ್ ಬಳಿ ಬಂದು ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದರು. ಈ ವೇಳೆ ಪೆವಿಲಿಯನ್‌ನಲ್ಲಿ ಕೂತಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಗಡ್ಡ ಎಳೆದಿದ್ದು ಕಾಣಿಸಿತ್ತು. ಮೈದಾನದಲ್ಲಿದ್ದಿದ್ದರೆ ಅಗ್ರೆಸಿವ್ ಆಗಿ ಇಂಥದ್ದಕ್ಕೆಲ್ಲ ಪ್ರತ್ಯುತ್ತರ ನೀಡುವ ಕೊಹ್ಲಿ ಈ ಬಾರಿ ಪೆವಿಲಿಯನ್‌ನಲ್ಲಿದ್ದು ಘಟನೆಯನ್ನು ಕುತೂಹಲದಿಂದ ವೀಕ್ಷಿಸಿದ್ದು ವಿಡಿಯೋದಲ್ಲಿ ಕಾಣಿಸಿತ್ತು.

ವೇಗದ ಅರ್ಧ ಶತಕ ಮೈಲಿಗಲ್ಲು

ಇದೇ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ವೇಗದ ಅರ್ಧ ಶತಕವೂ ಬಾರಿಸಿ ಗಮನ ಸೆಳೆದಿದ್ದರು. 26 ಎಸೆತಗಳಲ್ಲಿ 50 ರನ್ ಪೂರೈಸಿದ್ದ ಕೃನಾಲ್ ಪಾದಾರ್ಪಣೆ ಮಾಡಿದ ಏಕದಿನ ಪಂದ್ಯದಲ್ಲಿ ವೇಗದ ಅರ್ಧ ಶತಕ ಬಾರಿಸಿದ ವಿಶಿಷ್ಠ ದಾಖಲೆಗೆ ಕಾರಣರಾಗಿದ್ದರು. ಅಷ್ಟೇ ಅಲ್ಲ, 7ನೇ ಕ್ರಮಾಂಕದಲ್ಲಿ ಬಂದು ಚೊಚ್ಚಲ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ಮೈಲಿಗಲ್ಲನ್ನೂ ಕೃನಾಲ್ ಸ್ಥಾಪಿಸಿದ್ದರು.

Story first published: Wednesday, March 24, 2021, 11:30 [IST]
Other articles published on Mar 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X