ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೆಸ್ಟ್ ಇತಿಹಾಸದಲ್ಲಿ ಯಾರದ್ದು ಮೇಲುಗೈ? ಬಲಿಷ್ಠರಾರು ಗೊತ್ತಾ?

 India vs England 1st Test: Date, Timings, Head to Head record & Live streaming

ಆಗಸ್ಟ್ 4ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸುಮಾರು ನಲವತ್ತಕ್ಕೂ ಹೆಚ್ಚು ದಿನಗಳ ಕಾಲ ಸತತ ಮನರಂಜನೆ ಸಿಗುವುದಂತೂ ಖಚಿತ. ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿತ್ತು. 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದು ಬೀಗಿದ್ದ ಟೀಂ ಇಂಡಿಯಾ ಮತ್ತೆ ಇಂಗ್ಲೆಂಡ್ ನೆಲದಲ್ಲಿಯೂ ಜಯ ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!

ಅತ್ತ ಭಾರತ ನೆಲದಲ್ಲಿ ಟೆಸ್ಟ್ ಸರಣಿಯನ್ನು ಸೋತಿದ್ದ ಇಂಗ್ಲೆಂಡ್ ತಂಡ ಈ ಬಾರಿ ಟೆಸ್ಟ್ ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳುವುದರ ಮೂಲಕ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಯೋಜನೆಯಲ್ಲಿದೆ. ಹಾಗೂ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಸರಣಿಯ ಮೂಲಕ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಕೂಡ ಆರಂಭವಾಗುತ್ತಿದ್ದು ಮೊದಲನೇ ಪಂದ್ಯದಿಂದಲೇ ಅಂಕಪಟ್ಟಿ ಶುರುವಾಗಲಿದೆ. ಪಂದ್ಯ ಗೆದ್ದ ತಂಡಕ್ಕೆ 12 ಅಂಕಗಳು ಲಭಿಸಲಿದ್ದು, ಪಂದ್ಯ ಟೈ ಆದರೆ ಎರಡೂ ತಂಡಗಳಿಗೂ 6 ಅಂಕಗಳು ಸಿಗಲಿವೆ ಮತ್ತು ಪಂದ್ಯ ಡ್ರಾ ಆದರೆ 4 ಅಂಕಗಳು ಇತ್ತಂಡಗಳಿಗೂ ಲಭಿಸಲಿದೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಸಮಯ, ಹವಾಮಾನ ವರದಿ, ಸಂಭಾವ್ಯ ತಂಡ ಹಾಗೂ ಪಿಚ್ ರಿಪೋರ್ಟ್ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಸಮಯ, ಹವಾಮಾನ ವರದಿ, ಸಂಭಾವ್ಯ ತಂಡ ಹಾಗೂ ಪಿಚ್ ರಿಪೋರ್ಟ್

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಗಳನ್ನು ಹೊರತುಪಡಿಸಿದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪಟೌಡಿ ಟ್ರೋಫಿಗಾಗಿ ಸೆಣಸಾಡಲಿವೆ. 2007ರಲ್ಲಿ ಆರಂಭವಾಗಿರುವ ಈ ಪಟೌಡಿ ಟ್ರೋಫಿ ಇದುವರೆಗೂ 4 ಬಾರಿ ನಡೆದಿದೆ. ಪಟೌಡಿ ಟ್ರೋಫಿ ಆರಂಭವಾದ ವರ್ಷದಲ್ಲಿ ಭಾರತ ತಂಡ ಟ್ರೋಫಿಯನ್ನು ಜಯಗಳಿಸಿತ್ತು. ಆದರೆ ನಂತರ ನಡೆದ 3 ಬಾರಿಯೂ ಪಟೌಡಿ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡ ಜಯಗಳಿಸಿದೆ. 2011, 2014 ಮತ್ತು 2018ರ ಪಟೌಡಿ ಟ್ರೋಫಿಗಳನ್ನು ಇಂಗ್ಲೆಂಡ್ ತಂಡ ಜಯಗಳಿಸಿದ್ದರೆ, 2007ರಲ್ಲಿ ನಡೆದಿದ್ದ ಪಟೌಡಿ ಟ್ರೋಫಿಯನ್ನು ಮಾತ್ರ ಭಾರತ ತಂಡ ಜಯಗಳಿಸಿದೆ. ಇನ್ನು ಟೆಸ್ಟ್ ಇತಿಹಾಸದಲ್ಲಿ ಎರಡೂ ತಂಡಗಳೂ ಉತ್ತಮ ಪೈಪೋಟಿ ನೀಡಿದ್ದು 2 ತಂಡಗಳ ನೇರಾನೇರ ಹಣಾಹಣಿಯಲ್ಲಿ ಯಾರು ಎಷ್ಟು ಪಂದ್ಯಗಳನ್ನು ಗೆದ್ದಿದ್ದಾರೆ ಎಂಬ ಮಾಹಿತಿ ಮುಂದೆ ಇದೆ ಓದಿ..

ಒಟ್ಟಾರೆ ಟೆಸ್ಟ್ ಹಣಾಹಣಿಯಲ್ಲಿ ಭಾರತದ ಮೇಲುಗೈ

ಒಟ್ಟಾರೆ ಟೆಸ್ಟ್ ಹಣಾಹಣಿಯಲ್ಲಿ ಭಾರತದ ಮೇಲುಗೈ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಇದುವರೆಗೂ ಒಟ್ಟು 126 ಟೆಸ್ಟ್ ಪಂದ್ಯಗಳು ನಡೆದಿವೆ. ಈ 126 ಟೆಸ್ಟ್ ಪಂದ್ಯಗಳ ಪೈಕಿ ಇಂಗ್ಲೆಂಡ್ ಕೇವಲ 29 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದ್ದರೆ ಭಾರತ 48 ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ ಇಂಗ್ಲೆಂಡ್ ವಿರುದ್ಧದ ನೇರಾ ನೇರ ಹಣಾಹಣಿಯಲ್ಲಿ ಮೇಲುಗೈ ಸಾಧಿಸಿದೆ. ಇನ್ನು ಎರಡೂ ತಂಡಗಳ ನಡುವಿನ 49 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಇಂಗ್ಲೆಂಡ್ ನೆಲದಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೆ!!

ಇಂಗ್ಲೆಂಡ್ ನೆಲದಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೆ!!

ಒಟ್ಟಾರೆ ಟೆಸ್ಟ್ ಹಣಾಹಣಿಯಲ್ಲಿ ಇಂಗ್ಲೆಂಡ್‌ಗಿಂತ ಭಾರತ ತಂಡ ಮೇಲುಗೈ ಸಾಧಿಸಿದೆ. ಆದರೆ ಇಂಗ್ಲೆಂಡ್ ನೆಲದಲ್ಲಿ ನಡೆದಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 62 ಪಂದ್ಯಗಳು ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದು ಈ ಪಂದ್ಯಗಳ ಪೈಕಿ 34 ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಿದ್ದರೆ ಕೇವಲ 7 ಪಂದ್ಯಗಳಲ್ಲಿ ಮಾತ್ರ ಟೀಮ್ ಇಂಡಿಯಾ ಜಯ ಸಾಧಿಸಿದೆ. ಹಾಗೂ 21 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿವೆ.

ಪ್ಲೇಯಿಂಗ್ ಇಲೆವೆನ್ಗೊಸ್ಕರ ಕಾಯುತ್ತಿರುವ ಅಭಿಮಾನಿಗಳು! | Oneindia Kannada
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮಾಹಿತಿ:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮಾಹಿತಿ:

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ನೇರಪ್ರಸಾರ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್ ಚಾನೆಲ್‌ಗಳಲ್ಲಿ ಲಭ್ಯವಿರಲಿದೆ.

Story first published: Tuesday, August 3, 2021, 17:33 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X