ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಸಮಯ, ಹವಾಮಾನ ವರದಿ, ಸಂಭಾವ್ಯ ತಂಡ ಹಾಗೂ ಪಿಚ್ ರಿಪೋರ್ಟ್

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಮೊದಲನೇ ಆವೃತ್ತಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಫೈನಲ್ ಪಂದ್ಯದಲ್ಲಿ ಮಣಿಸುವುದರ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಮೊದಲನೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆವೃತ್ತಿ ಯಶಸ್ಸು ಕಂಡ ನಂತರ ಇದೀಗ ಎರಡನೇ ಆವೃತ್ತಿ ಆರಂಭವಾಗುತ್ತಿದೆ. ಹೌದು ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆರಂಭದ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!ಹಾಕಿ: ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ತಂಡ!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆರಂಭವಾಗುತ್ತಿದ್ದು ಮೊದಲನೇ ಪಂದ್ಯ ಇಂಗ್ಲೆಂಡ್‌ನ ನಾಟಿಂಗ್‍ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಒಟ್ಟು 5 ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಒಂದು ಪಂದ್ಯದಲ್ಲಿ ಜಯ ಸಾಧಿಸಿದರೆ 12 ಅಂಕಗಳು ದೊರೆಯಲಿವೆ, ಒಂದುವೇಳೆ ಪಂದ್ಯ ಟೈ ಆದರೆ 6 ಅಂಕಗಳು ಎರಡೂ ತಂಡಗಳಿಗೂ ದೊರಕಲಿದೆ ಮತ್ತು ಪಂದ್ಯ ಸ್ಥಗಿತಗೊಂಡರೆ ಎರಡೂ ತಂಡಗಳಿಗೂ ತಲಾ 4 ಅಂಕಗಳನ್ನು ನೀಡಲಾಗುತ್ತದೆ.

ಆಸ್ಟ್ರೇಲಿಯಾಗೆ ಬಂದಿದ್ದ ಪರಿಸ್ಥಿತಿಯೇ ಇಂಗ್ಲೆಂಡ್‌ಗೂ ಬರಲಿದೆ; ಎಚ್ಚರಿಕೆ ನೀಡಿದ ಭಾರತದ ಯುವ ಆಟಗಾರಆಸ್ಟ್ರೇಲಿಯಾಗೆ ಬಂದಿದ್ದ ಪರಿಸ್ಥಿತಿಯೇ ಇಂಗ್ಲೆಂಡ್‌ಗೂ ಬರಲಿದೆ; ಎಚ್ಚರಿಕೆ ನೀಡಿದ ಭಾರತದ ಯುವ ಆಟಗಾರ

ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಅಂಕಗಳನ್ನು ಹೊರತುಪಡಿಸಿದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪಟೌಡಿ ಟ್ರೋಫಿಗಾಗಿ ಸೆಣಸಾಡಲಿವೆ. 2007ರಲ್ಲಿ ಆರಂಭವಾಗಿದ್ದ ಈ ಪಟೌಡಿ ಟ್ರೋಫಿಯನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು. ತದನಂತರ 2011, 2014 ಮತ್ತು 2018ನೇ ಸಾಲಿನ ಪಟೌಡಿ ಟ್ರೋಫಿಗಳನ್ನು ಸತತವಾಗಿ 3 ಬಾರಿಯೂ ಇಂಗ್ಲೆಂಡ್ ಗೆದ್ದುಕೊಂಡಿದೆ. ಹೀಗಾಗಿ ಒಟ್ಟು 4 ಬಾರಿ ಈ ಪಟೌಡಿ ಟ್ರೋಫಿ ನಡೆದಿದ್ದು 3 ಬಾರಿ ಇಂಗ್ಲೆಂಡ್ ಜಯ ಗಳಿಸಿದ್ದರೆ, ಕೇವಲ ಒಂದೇ ಒಂದು ಬಾರಿ ಮಾತ್ರ ಭಾರತ ಜಯ ಸಾಧಿಸಿದೆ. ಇದೀಗ ಐದನೇ ಬಾರಿಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಪಟೌಡಿ ಟ್ರೋಫಿ ಆಯೋಜನೆಯಾಗಿದ್ದು ಯಾರು ಈ ಟ್ರೋಫಿಯನ್ನು ವಶಪಡಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ನಾಟಿಂಗ್‍ಹ್ಯಾಮ್‌ ಹವಾಮಾನ & ಪಿಚ್ ವರದಿ

ನಾಟಿಂಗ್‍ಹ್ಯಾಮ್‌ ಹವಾಮಾನ & ಪಿಚ್ ವರದಿ

ನಾಟಿಂಗ್‍ಹ್ಯಾಮ್‌ ಹವಾಮಾನ ವರದಿ

ಹವಾಮಾನ ವರದಿಯ ಪ್ರಕಾರ ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆಟಗಾರರಿಗೆ ಅನುಕೂಲವಾಗುವಂತಹ ವಾತಾವರಣ ಇರಲಿದೆ ಎನ್ನಲಾಗುತ್ತಿದೆ.ಮೂರನೇ ದಿನ ಮಳೆಯಾಗುವ ಸಂಭವವಿದ್ದು ತದನಂತರ ಸಮಯ ಕಳೆದಂತೆ ವಾತಾವರಣ ಅನುಕೂಲಕರ ಸ್ಥಿತಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಪಿಚ್ ರಿಪೋರ್ಟ್

ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡ ಉತ್ತಮ ರನ್ ಕಲೆ ಹಾಕುವ ಸಾಧ್ಯತೆಯಿದೆ. ಹೆಚ್ಚಾಗಿ ವೇಗದ ಬೌಲರ್‌ಗಳಿಗೆ ಈ ಪಿಚ್ ಅನುಕೂಲಕರವಾಗಲಿದ್ದು, 3 ದಿನಗಳು ಕಳೆದ ಬಳಿಕ ಸ್ಪಿನ್ ಬೌಲರ್‌ಗಳಿಗೂ ಈ ಟ್ರೆಂಡ್ ಬ್ರಿಡ್ಜ್ ಪಿಚ್ ಸಹಕಾರಿಯಾಗಲಿದೆ.

ಸಮಯ ಹಾಗೂ ನೇರ ಪ್ರಸಾರದ ಮಾಹಿತಿ

ಸಮಯ ಹಾಗೂ ನೇರ ಪ್ರಸಾರದ ಮಾಹಿತಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಟಿಂಗ್‍ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆಗಸ್ಟ್ 4ರಂದು ಆರಂಭವಾಗಿ ಆಗಸ್ಟ್ 8ಕ್ಕೆ ಕೊನೆಗೊಳ್ಳಲಿದೆ. ಈ ಪಂದ್ಯ ಭಾರತದ ಕಾಲಮಾನ ಮಧ್ಯಾಹ್ನ 3:30ಕ್ಕೆ ಶುರುವಾಗಲಿದೆ. ಹಾಗೂ ಈ ಪಂದ್ಯ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಸೋನಿ ಲಿವ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.

ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್‌), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

ಈ ಸರಣಿಯಲ್ಲೂ ಕೈ ಕೊಡ್ತಾರಾ ಅಥವಾ ಕೈ ಹಿಡೀತಾರಾ ಜಡ್ಡು & ಅಶ್ವಿನ್ | Oneindia Kannada
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ:

ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ:

ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಜ್ಯಾಕ್ ಕ್ರಾವ್ಲಿ, ಜೋ ರೂಟ್ (ನಾಯಕ), ಒಲ್ಲಿ ಪೋಪ್/ಜಾನಿ ಬೈರ್‌ಸ್ಟೋ, ಜೋಸ್ ಬಟ್ಲರ್ (ವಿಕೆಟ್ ಕೀಪರ್‌), ಸ್ಯಾಮ್ ಕರನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಒಲ್ಲಿ ರಾಬಿನ್ಸನ್ ಮತ್ತು ಜೇಮ್ಸ್ ಆಂಡರ್ಸನ್

For Quick Alerts
ALLOW NOTIFICATIONS
For Daily Alerts
Story first published: Monday, August 2, 2021, 16:37 [IST]
Other articles published on Aug 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X