ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಜೋ ರೂಟ್ ಹೊಸ ದಾಖಲೆ, ಸ್ಯಾಮ್ ಕರನ್ ಹೊಸ ಮೈಲಿಗಲ್ಲು!

India vs England 1st test: Joe Root’s new record, Sam Curran’s milestone and other stats

ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರ ಬುಧವಾರದಂದು ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲನೇ ದಿನವೇ ಇಂಗ್ಲೆಂಡ್ ಹಿನ್ನಡೆ ಅನುಭವಿಸಿದೆ. ಟಾಸ್ ಗೆದ್ದ ಕೂಡಲೇ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ಜೋ ರೂಟ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳುಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿರುವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳು

ಆದರೆ ಜೋ ರೂಟ್ ನಿರೀಕ್ಷಿಸಿದಂತೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು 183 ರನ್‌ಗಳಿಗೆ ಆಲ್ಔಟ್ ಆದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಮೊಹಮ್ಮದ್ ಶಮಿ 3 ವಿಕೆಟ್, ಯುವ ಆಟಗಾರ ಶಾರ್ದೂಲ್ ಠಾಕೂರ್ 2 ವಿಕೆಟ್ ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಆಟಗಾರರನ್ನು 183 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಎರಡನೇ ದಿನ ಮಳೆ ಅಡ್ಡಿಯಿರುತ್ತಾ? ಇಲ್ಲಿದೆ ಹವಾಮಾನ ವರದಿಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಎರಡನೇ ದಿನ ಮಳೆ ಅಡ್ಡಿಯಿರುತ್ತಾ? ಇಲ್ಲಿದೆ ಹವಾಮಾನ ವರದಿ

ಪಂದ್ಯದ ಮೊದಲ ಓವರ್‌ನಲ್ಲಿಯೇ ಜಸ್ ಪ್ರೀತ್ ಬುಮ್ರಾಗೆ ಯಾವುದೇ ರನ್ ಗಳಿಸದೆ ರೊರಿ ಬರ್ನ್ಸ್ ವಿಕೆಟ್ ಒಪ್ಪಿಸಿದರು. ನಂತರ ಡೊಮಿನಿಕ್ ಸಿಬ್ಲೆ ಮತ್ತು ಜ್ಯಾಕ್ ಕ್ರಾವ್ಲೆ ಉತ್ತಮ ಆಟ ಆಡುವ ಯತ್ನ ಮಾಡಿದರೂ ಸಹ ಹೆಚ್ಚು ಹೊತ್ತು ಮೈದಾನದಲ್ಲಿ ಇರಲಿಲ್ಲ. ಇಂಗ್ಲೆಂಡ್ ತಂಡದ ಪರ ನಾಯಕ ಜೋ ರೂಟ್ 64 ರನ್ ಬಾರಿಸುವುದರ ಮೂಲಕ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್‍ಗೆ ತಂಡದ ಮತ್ತೊಬ್ಬ ಆಟಗಾರ ಜಾನಿ ಬೈರ್‌ಸ್ಟೋ ಜತೆಯಾದ ಜೋ ರೂಟ್ 62 ರನ್ ಜತೆಯಾಟ ಆಡುವುದರ ಮೂಲಕ ಉತ್ತಮ ಇನ್ನಿಂಗ್ಸ್ ನಿರ್ಮಿಸುವ ಪ್ರಯತ್ನ ಪಟ್ಟರೂ ಸಹ ಮೊಹಮ್ಮದ್ ಶಮಿ ಎಸೆತದಲ್ಲಿ 29 ರನ್ ಗಳಿಸಿದ್ದಾಗ ಜಾನಿ ಬೈರ್‌ಸ್ಟೋ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆ ನಡೆದರು. ನಂತರ ಬಂದ ಯಾವುದೇ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ಆಟವನ್ನಾಡಲು ಭಾರತ ತಂಡದ ಬೌಲರ್‌ಗಳು ಅವಕಾಶವನ್ನು ನೀಡಲೇ ಇಲ್ಲ. ಕೊನೆಯ ಹಂತದಲ್ಲಿ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್ ಅಜೇಯ 27 ರನ್ ಗಳಿಸಿ ಮಿಂಚಿದರು.

ಭಾರತ vs ಇಂಗ್ಲೆಂಡ್: ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳುಭಾರತ vs ಇಂಗ್ಲೆಂಡ್: ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು

ಹೀಗೆ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನ ಸಾಧಾರಣ ಆಟವನ್ನಾಡಿದ ಇಂಗ್ಲೆಂಡ್ ತಂಡ 183 ರನ್‌ಗಳಿಗೆ ಆಲ್ಔಟ್ ಆಯಿತು. ಆದರೆ ಇಂಗ್ಲೆಂಡ್ ತಂಡದ ಕೆಲವೊಂದಷ್ಟು ಆಟಗಾರರು ತಮ್ಮದೇ ಆದ ವೈಯಕ್ತಿಕ ದಾಖಲೆ ಮತ್ತು ಮೈಲಿಗಲ್ಲುಗಳನ್ನು ಇದೇ ಇನ್ನಿಂಗ್ಸ್ ಮೂಲಕ ನಿರ್ಮಿಸಿದ್ದಾರೆ. ಆ ದಾಖಲೆ ಮತ್ತು ಮೈಲಿಗಲ್ಲುಗಳ ವಿವರ ಈ ಕೆಳಕಂಡಂತಿದೆ ನೋಡಿ..

ಅಲಸ್ಟೈರ್ ಕುಕ್ ದಾಖಲೆ ಮುರಿದ ಜೋ ರೂಟ್!

ಅಲಸ್ಟೈರ್ ಕುಕ್ ದಾಖಲೆ ಮುರಿದ ಜೋ ರೂಟ್!

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 64 ರನ್ ಬಾರಿಸಿ ಮಿಂಚಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 15,780 ರನ್ ಗಳಿಸುವುದರ ಮೂಲಕ ಇಂಗ್ಲೆಂಡ್ ತಂಡದ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಈ ಹಿಂದೆ ಇಂಗ್ಲೆಂಡ್ ತಂಡದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ್ದ ಅಲೈಸ್ಟರ್ ಕುಕ್‌ನ್ನು ಜೋ ರೂಟ್ ಹಿಂದಿಕ್ಕಿದ್ದಾರೆ.

ಸ್ಯಾಮ್ ಕರನ್ ಮೈಲಿಗಲ್ಲು

ಸ್ಯಾಮ್ ಕರನ್ ಮೈಲಿಗಲ್ಲು


ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಭಾರತದ ಬೌಲರ್‌ಗಳನ್ನು ಕೆಲ ಸಮಯ ಕಾಡಿದ ಸ್ಯಾಮ್ ಕರನ್ ಅಜೇಯ 27 ರನ್ ಬಾರಿಸಿ ಗಮನ ಸೆಳೆದರು. ಈ ಮೂಲಕ ಸ್ಯಾಮ್ ಕರನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ನಲ್ಲಿ 1000 ರನ್ ಪೂರೈಸುವ ಮೂಲಕ ಹೊಸ ಮೈಲಿಗಲ್ಲನ್ನು ಮುಟ್ಟಿದ್ದಾರೆ.

ನಾಟಿಂಗ್‍ಹ್ಯಾಮ್ ಪಿಚ್‌ನಲ್ಲಿ ಮತ್ತೊಂದು ಕೆಟ್ಟ ದಾಖಲೆ ಬರೆದ ಇಂಗ್ಲೆಂಡ್

ನಾಟಿಂಗ್‍ಹ್ಯಾಮ್ ಪಿಚ್‌ನಲ್ಲಿ ಮತ್ತೊಂದು ಕೆಟ್ಟ ದಾಖಲೆ ಬರೆದ ಇಂಗ್ಲೆಂಡ್

ನಾಟಿಂಗ್‍ಹ್ಯಾಮ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಕೆಟ್ಟ ದಾಖಲೆಗಳನ್ನು ಹೊಂದಿದ್ದು ಇದೀಗ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ಹೌದು ಭಾರತದ ವಿರುದ್ಧ ನಾಟಿಂಗ್‍ಹ್ಯಾಮ್ ಕ್ರೀಡಾಂಗಣದಲ್ಲಿ ಅತೀ ಕಡಿಮೆ ಮೊತ್ತವನ್ನು ಇಂಗ್ಲೆಂಡ್ ದಾಖಲಿಸಿದೆ. ನಾಟಿಂಗ್‍ಹ್ಯಾಮ್ ಕ್ರೀಡಾಂಗಣದಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಇದುವರೆಗೂ 2011ರಲ್ಲಿ 221, 2007ರಲ್ಲಿ 198 ಹಾಗೂ ಪ್ರಸ್ತುತ ಪಂದ್ಯದಲ್ಲಿ 183 ರನ್ ಗಳಿಸಿ ಅತಿ ಕಡಿಮೆ ಮೊತ್ತದ ಕೆಟ್ಟ ದಾಖಲೆ ಬರೆದುಕೊಂಡಿದೆ.

Story first published: Thursday, August 5, 2021, 16:15 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X