ರೋಹಿತ್ ಅಲಭ್ಯರಾದರೆ ಇಂಗ್ಲೆಂಡ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುಬಹುದಾದ 3 ಆರಂಭಿಕ ಜೋಡಿ; ಯಾರು ಬೆಸ್ಟ್?

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಇಂಗ್ಲೆಂಡ್ ತಲುಪಿದ್ದು ಆತಿಥೇಯ ಆಂಗ್ಲರ ವಿರುದ್ಧ 1 ಟೆಸ್ಟ್ ಪಂದ್ಯ, 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟವನ್ನು ನಡೆಸಲಿದೆ.

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಪ್ರಮುಖ ಎಚ್ಚರಿಕೆ ನೀಡಿದ ಅಜಿತ್ ಅಗರ್ಕರ್ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಮುನ್ನ ಪ್ರಮುಖ ಎಚ್ಚರಿಕೆ ನೀಡಿದ ಅಜಿತ್ ಅಗರ್ಕರ್

ಕಳೆದ ವರ್ಷ ಆಯೋಜನೆಯಾಗಿದ್ದ ಇತ್ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಪಂದ್ಯ ಕೊರೊನಾ ವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟು ಈ ಬಾರಿಯ ಪ್ರವಾಸದಲ್ಲಿ ಮರು ಆಯೋಜನೆಯಾಗಿದ್ದು, ಜುಲೈ 1ರಿಂದ ಆರಂಭಗೊಳ್ಳುತ್ತಿದೆ. ಇನ್ನು ಈ ಪಂದ್ಯದ ಸಲುವಾಗಿ ಟೀಮ್ ಇಂಡಿಯಾ ಲೀಸೆಸ್ಟರ್ ಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನು ಕೂಡ ಆಡಿದ್ದು, ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು ಆದರೆ, ನಂತರ ರೋಹಿತ್ ಶರ್ಮಾ ಆರೋಗ್ಯ ವರದಿಯಲ್ಲಿ ಕೊರೋನಾವೈರಸ್ ದೃಢಪಟ್ಟ ಕಾರಣ ರೋಹಿತ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿಯಲಿಲ್ಲ.

ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಯೋಜಿಸಲು ಸಜ್ಜಾದ ಪಾಕಿಸ್ತಾನ: ವರದಿಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಯೋಜಿಸಲು ಸಜ್ಜಾದ ಪಾಕಿಸ್ತಾನ: ವರದಿ

ಹೀಗೆ ಕೊರೊನಾ ಸೋಂಕಿಗೆ ಒಳಗಾಗಿರುವ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಗಳು ಹೆಚ್ಚಿದ್ದು, ರೋಹಿತ್ ಶರ್ಮಾ ಬದಲಾಗಿ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯ ಜತೆಗೆ ರೋಹಿತ್ ಶರ್ಮಾ ಬದಲಾಗಿ ತಂಡದ ಪರ ಆರಂಭಿಕ ಆಟಗಾರರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ಸಹ ನಡೆಯುತ್ತಿವೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಈ ಕೆಳಕಂಡ 3 ಆರಂಭಿಕ ಜೋಡಿ ಲಭ್ಯವಿವೆ.

1. ಶುಭ್ ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್

1. ಶುಭ್ ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್

ತಂಡದಲ್ಲಿ ಕೆಎಲ್ ರಾಹುಲ್ ಅಲಭ್ಯರಾಗಿರುವ ಕಾರಣ ಈ ಪಂದ್ಯದಲ್ಲಿ ಶುಬ್ ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಸಬೇಕಿತ್ತು. ಆದರೆ ಇದೀಗ ರೋಹಿತ್ ಶರ್ಮಾ ಕೂಡ ಅಲಭ್ಯರಾಗಿರುವ ಕಾರಣ ಶುಬ್ ಮನ್ ಗಿಲ್ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಹಾಗೂ ಇದು ಒಂದನೇ ಆಯ್ಕೆಯಷ್ಟೇ. ಶುಬ್ ಮನ್ ಗಿಲ್ ಇಂಗ್ಲೆಂಡ್ ನೆಲದಲ್ಲಿ ಬ್ಯಾಟ್ ಬೀಸಿರುವ ಅನುಭವವನ್ನು ಹೊಂದಿದ್ದರೂ ಸಹ ಇತ್ತೀಚೆಗಷ್ಟೇ ನಡೆದ ಅಭ್ಯಾಸ ಪಂದ್ಯದಲ್ಲಿ 21 ಹಾಗೂ 38 ರನ್ ಕಲೆಹಾಕಿ ಸಾಧಾರಣ ಬ್ಯಾಟಿಂಗ್ ನಡೆಸಿದ್ದಾರೆ. ಇನ್ನು ಮಯಾಂಕ್ ಅಗರ್ವಾಲ್ ರೋಹಿತ್ ಶರ್ಮಾ ಕೊರೊನಾ ಸೋಂಕಿಗೆ ಒಳಗಾದ ನಂತರ ತಂಡ ಸೇರಿದ್ದು, ಅನುಭವಿ ಆಟಗಾರ ಎನಿಸಿಕೊಂಡಿದ್ದಾರೆ.

2. ಶುಬ್ ಮನ್ ಗಿಲ್ ಮತ್ತು ಕೆಎಸ್ ಭರತ್

2. ಶುಬ್ ಮನ್ ಗಿಲ್ ಮತ್ತು ಕೆಎಸ್ ಭರತ್

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಸಬಹುದಾದ ಆರಂಭಿಕ ಜೋಡಿಯ ಎರಡನೇ ಆಯ್ಕೆ ಶುಭ್ ಮನ್ ಗಿಲ್ ಮತ್ತು ಕೆಎಸ್ ಭರತ್. ಕೆ ಎಸ್ ಭರತ್ ಇನ್ನೂ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಆದರೆ ಅಭ್ಯಾಸ ಪಂದ್ಯದಲ್ಲಿ ತೋರಿದ ಉತ್ತಮ ಪ್ರದರ್ಶನ ಆತನಿಗೆ ಟೆಸ್ಟ್ ಪದಾರ್ಪಣೆ ಮಾಡುವ ಅವಕಾಶವನ್ನು ನೀಡುವಂತದ್ದಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 70 ರನ್ ಕಲೆಹಾಕಿ ತಂಡಕ್ಕೆ ಆಸರೆಯಾದ ಭರತ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಶುಬ್ ಮನ್ ಗಿಲ್ ಜತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 98 ಎಸೆತಗಳಲ್ಲಿ 43 ರನ್ ಕಲೆ ಹಾಕಿದರು. ಹೀಗೆ ಸಿಕ್ಕ ಅಭ್ಯಾಸ ಪಂದ್ಯದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿರುವ ಭರತ್ ಅವರನ್ನು ಟೀಮ್ ಇಂಡಿಯಾ ರೋಹಿತ್ ಅಲಭ್ಯತೆಯಲ್ಲಿ ಆರಂಭಿಕನಾಗಿ ಕಣಕ್ಕಿಳಿಸಬಹುದಾಗಿದೆ.

ಉಮ್ರಾನ್ ಮಲ್ಲಿಕ್ ಗೆ ಕೊನೆ ಓವರನ್ನ ಕೊಡದೇ ಇದ್ದಿದ್ರೆ ಟೀಮ್ ಇಂಡಿಯಾ ಸೋಲ್ತಿತ್ತಾ?| OneIndia Kannada
3. ಮಯಾಂಕ್ ಅಗರ್ವಾಲ್ ಮತ್ತು ಕೆ ಎಸ್ ಭರತ್

3. ಮಯಾಂಕ್ ಅಗರ್ವಾಲ್ ಮತ್ತು ಕೆ ಎಸ್ ಭರತ್

ರೋಹಿತ್ ಅಲಭ್ಯತೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಸಲು ಟೀಮ್ ಇಂಡಿಯಾಗೆ ಇರುವ ಮೂರನೇ ಆಯ್ಕೆ ಮಯಾಂಕ್ ಅಗರ್ವಾಲ್ ಮತ್ತು ಕೆಎಸ್ ಭರತ್ ಜೋಡಿ. ಅನುಭವಿ ಮಯಾಂಕ್ ಅಗರ್ವಾಲ್ ಜತೆ ಅಭ್ಯಾಸ ಪಂದ್ಯದಲ್ಲಿ ಮಿಂಚಿರುವ ಕೆಎಸ್ ಭರತ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕಿಳಿಸಿದರೆ ತಂಡ ಉತ್ತಮ ಆರಂಭ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೂ ಶುಬ್ ಮನ್ ಗಿಲ್ ಮಧ್ಯಮ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿಯಬಹುದಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 29, 2022, 17:40 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X