ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!

ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನಾಡಿ ಸೋಲನುಭವಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್‌ನಲ್ಲಿಯೇ ಬೀಡುಬಿಟ್ಟಿರುವ ಟೀಮ್ ಇಂಡಿಯಾ ಆಟಗಾರರು ಆಗಸ್ಟ್ 4ರಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದ್ದಾರೆ.

ಆಸ್ಟ್ರೇಲಿಯಾಗೆ ಬಂದಿದ್ದ ಪರಿಸ್ಥಿತಿಯೇ ಇಂಗ್ಲೆಂಡ್‌ಗೂ ಬರಲಿದೆ; ಎಚ್ಚರಿಕೆ ನೀಡಿದ ಭಾರತದ ಯುವ ಆಟಗಾರಆಸ್ಟ್ರೇಲಿಯಾಗೆ ಬಂದಿದ್ದ ಪರಿಸ್ಥಿತಿಯೇ ಇಂಗ್ಲೆಂಡ್‌ಗೂ ಬರಲಿದೆ; ಎಚ್ಚರಿಕೆ ನೀಡಿದ ಭಾರತದ ಯುವ ಆಟಗಾರ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ಆಸೆಯಲ್ಲಿದ್ದರೆ, ಅತ್ತ ಇಂಗ್ಲೆಂಡ್ ತಂಡ ಭಾರತದಲ್ಲಿ ಸರಣಿ ಸೋತಿದ್ದ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಅಷ್ಟೇ ಅಲ್ಲದೆ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆರಂಭದ ಪಂದ್ಯ ಕೂಡ ಇದಾಗಿದ್ದು ಎರಡೂ ತಂಡಗಳಿಗೂ ಈ ಸರಣಿ ಅತ್ಯಮೂಲ್ಯವಾಗಿದೆ.

ಆರ್‌ಸಿಬಿ ಅಭಿಮಾನಿಗಳು ಖುಷಿಪಡುವಂತಾ ಸುದ್ದಿ ಹೇಳಿದ ಎಬಿ ಡಿವಿಲಿಯರ್ಸ್ಆರ್‌ಸಿಬಿ ಅಭಿಮಾನಿಗಳು ಖುಷಿಪಡುವಂತಾ ಸುದ್ದಿ ಹೇಳಿದ ಎಬಿ ಡಿವಿಲಿಯರ್ಸ್

ಇದೆಲ್ಲದರ ನಡುವೆ ಭಾರತದ 3 ಹಿರಿಯ ಆಟಗಾರರಿಗೆ ಪ್ರಸ್ತುತ ಕೈಗೊಂಡಿರುವ ಪ್ರವಾಸ ಕೊನೆಯ ಇಂಗ್ಲೆಂಡ್ ಪ್ರವಾಸವಾಗಬಹುದು. ಹೌದು ಕೆಲ ಪಂದ್ಯಗಳಿಂದ ಉತ್ತಮ ಪ್ರದರ್ಶನವನ್ನು ತೋರದೆ ಮಂಕಾಗಿರುವ ಕೆಳಕಂಡ ಈ ಮೂವರು ಭಾರತೀಯ ಆಟಗಾರರಿಗೆ ಈ ಬಾರಿಯ ಇಂಗ್ಲೆಂಡ್ ಪ್ರವಾಸ ಕೊನೆಯ ಪ್ರವಾಸವಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ

ಭಾರತ ಕ್ರಿಕೆಟ್‍ನ ಜೂನಿಯರ್‌ ವಾಲ್ ಎಂದೇ ಹೆಸರು ಮಾಡಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಾಗೆ ಪ್ರಸ್ತುತ ಕೈಗೊಂಡಿರುವ ಇಂಗ್ಲೆಂಡ್ ಪ್ರವಾಸ ಕೊನೆಯ ಪ್ರವಾಸವಾಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಚೇತೇಶ್ವರ್ ಪೂಜಾರ ಕಳೆದ 18 ಟೆಸ್ಟ್ ಪಂದ್ಯಗಳಿಂದ ಯಾವುದೇ ಶತಕವನ್ನು ಬಾರಿಸದೆ ಮಂಕಾಗಿರುವುದು. ಆಸ್ಟ್ರೇಲಿಯಾ ವಿರುದ್ಧ 2018ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅತ್ಯದ್ಬುತ ಆಟವನ್ನಾಡಿ ಮಿಂಚಿದ್ದ ಚೇತೇಶ್ವರ್ ಪೂಜಾರ ಅದಾದ ನಂತರ ದೊಡ್ಡ ಮೊತ್ತವನ್ನು ಕಲೆ ಹಾಕಿಯೇ ಇಲ್ಲ. ಅಲ್ಲದೆ ಯುವ ಆಟಗಾರರಾದ ಕೆಎಲ್ ರಾಹುಲ್ ಮತ್ತು ಹನುಮ ವಿಹಾರಿಗೆ ತಂಡದಲ್ಲಿ ಸತತವಾಗಿ ಸ್ಥಾನ ನೀಡುವ ಯೋಜನೆಯಲ್ಲಿ ಆಯ್ಕೆಗಾರರಿದ್ದು, ತಂಡದಿಂದ ತನ್ನನ್ನು ಕೈಬಿಡದೆ ಇರಬೇಕಾದರೆ ಚೇತೇಶ್ವರ್ ಪೂಜಾರ ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ ದೊಡ್ಡ ಮೊತ್ತ ಕಲೆ ಹಾಕಲೇಬೇಕಿದೆ. ಇಲ್ಲದಿದ್ದರೆ ಈ ಪ್ರವಾಸ ಚೇತೇಶ್ವರ್ ಪೂಜಾರ ಪಾಲಿಗೆ ಕೊನೆಯ ಪ್ರವಾಸವಾಗಬಹುದು.

ವೃದ್ಧಿಮಾನ್ ಸಹಾ

ವೃದ್ಧಿಮಾನ್ ಸಹಾ

36 ವರ್ಷದ ವೃದ್ದಿಮಾನ್ ಸಹಾ ಇತ್ತೀಚಿನ ಕೆಲ ಟೆಸ್ಟ್ ಸರಣಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಎಡವುತ್ತಿರುವ ವೃದ್ದಿಮಾನ್ ಸಹಾ ಇತ್ತೀಚೆಗೆ ನಡೆದ ಕೆಲ ಸರಣಿಗಳ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿಯೂ ಸಹ ವಿಫಲರಾಗಿದ್ದಾರೆ. ಅತ್ತ ರಿಷಭ್ ಪಂತ್ ಉತ್ತಮ ಫಾರ್ಮ್‌ನಲ್ಲಿರುವುದು ವೃದ್ಧಿಮಾನ್ ಸಹಾಗೆ ತಂಡದಲ್ಲಿ ಅವಕಾಶ ಸಿಗದಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ಸಿಕ್ಕರೆ ಅದನ್ನು ವೃದ್ದಿಮಾನ್ ಸಹ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ, ಇಲ್ಲದಿದ್ದರೆ ಮುಂದಿನ ಸರಣಿಗಳಲ್ಲಿ ವೃದ್ದಿಮಾನ್ ಸಹಾಗೆ ಅವಕಾಶ ಸಿಗುವುದು ಕಷ್ಟ ಎಂದೇ ಹೇಳಬಹುದು. ಅಲ್ಲದೆ ವೃದ್ಧಿಮಾನ್ ಸಾಹಗೆ ವಯಸ್ಸಿನ ಪಟ್ಟಿ ಕೂಡ ಉಂಟಾಗಬಹುದಾಗಿದ್ದು, ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ನಂತರ ಯಾವುದೇ ಪಂದ್ಯದಲ್ಲಿಯೂ ವೃದ್ದಿಮಾನ್ ಸಹಾ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ.

ಈ ಸರಣಿಯಲ್ಲೂ ಕೈ ಕೊಡ್ತಾರಾ ಅಥವಾ ಕೈ ಹಿಡೀತಾರಾ ಜಡ್ಡು & ಅಶ್ವಿನ್ | Oneindia Kannada
ಇಶಾಂತ್ ಶರ್ಮಾ

ಇಶಾಂತ್ ಶರ್ಮಾ

ಭಾರತದ ವೇಗಿ ಇಶಾಂತ್ ಶರ್ಮಾಗೂ ಕೂಡ ಈ ಬಾರಿಯ ಇಂಗ್ಲೆಂಡ್ ಪ್ರವಾಸ ಬಹುಮುಖ್ಯವಾಗಿದೆ. ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿಯೂ ಕೂಡ ಇಶಾಂತ್ ಶರ್ಮ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ಹಾಗೂ ಇಶಾಂತ್ ಶರ್ಮಾ ಜಾಗಕ್ಕೆ ಮೊಹಮ್ಮದ್ ಸಿರಾಜ್ ಹೆಸರು ಕೂಡ ಸಾಕಷ್ಟು ಕೇಳಿ ಬರುತ್ತಿದ್ದು ಮುಂದಿನ ಸರಣಿಗಳಲ್ಲಿ ತಂಡದಲ್ಲಿ ಸ್ಥಾನ ಸಿಗಬೇಕೆಂದರೆ ಇಶಾಂತ್ ಶರ್ಮಾ ಈ ಬಾರಿಯ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆ ಇದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, August 3, 2021, 16:29 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X