ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಯಾಮ್ ಕರ್ರನ್ ಕೆಚ್ಚೆಯ ಪ್ರದರ್ಶನ, ಅಂತಿಮ ಹಂತದವರಗೂ ಪಟ್ಟು ಸಡಿಲಿಸದ ಇಂಗ್ಲೆಂಡ್

India vs England 3rd ODI India survive Sam Curran scare in thrilling decider

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ರೋಚಕವಾಗಿ ಗೆಲುವು ಕಂಡಿದೆ. ಮತ್ತೊಂದು ಬೃಹತ್ ಮೊತ್ತದ ಕಾದಾಟದಲ್ಲಿ ಇಂಗ್ಲೆಂಡ್ ಕೊನೆಯ ಹಂತದವರೆಗೂ ಹೋರಾಡಿ ಸೋಲು ಕಂಡಿದ್ದು ಭಾರತ ರೋಚಕವಾಗಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ 2-1 ಅಂತರದಿಂದ ಸರಣಿ ಗೆಲುವು ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 329 ರನ್‌ಗಳನ್ನು ಬಾರಿಸಿತ್ತು. ಭಾರತ ನೀಡಿದ ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೊನೆಯ ಹಂತದವರೆಗೂ ಹೋರಾಡಿ ಸೋಲು ಕಂಡಿದೆ.

ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಅಗ್ರ ಕ್ರಮಾಂಕದಿಂದ ಬೆಂಬಲದೊರೆಯಲಿಲ್ಲ. ಆರಂಭಿಕರಿಬ್ಬರೂ ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು. 28 ರನ್‌ಗಳಿಗೆ ಆರಂಭಿಕರಿಬ್ಬರನ್ನೂ ಇಂಗ್ಲೆಂಡ್ ಕಳೆದುಕೊಂಡಿತು. ಬಳಿಕ ಮತ್ತೊಂದು ಬೃಹತ್ ಇನ್ನಿಂಗ್ಸ್‌ನ ಮುನ್ಸೂಚನೆ ನೀಡಿದ ಬೆನ್ ಸ್ಟೋಕ್ಸ್ ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ನಾಯಕ ಜೋಸ್ ಬಟ್ಲರ್ ಕೂಡ ಈ ಪಂದ್ಯದಲ್ಲೂ ವಿಫಲರಾದರು. ಅಲ್ಲಿಗೆ 95 ರನ್‌ಗಳನ್ನು ಗಳಿಸಿ ಇಂಗ್ಲೆಂಡ್ ಸಂಕಷ್ಟವನ್ನು ಎದುರಿಸಿತ್ತು.

ಬಳಿಕ ಡೇವಿಡ್ ಮಲನ್ ಹಾಗೂ ಲಿವಿಂಗ್‌ಸ್ಟನ್ 60 ರನ್‌ಗಳ ಜೊತೆಯಾಟವನ್ನು ನೀಡಿ ಇಂಗ್ಲೆಂಡ್‌ಗೆ ಸಣ್ಣ ಚೇತರಿಕೆಯನ್ನು ನೀಡಿದರು. ಆದರೆ ಮೊಯೀನ್ ಅಲಿಗೆ ಜೊತೆಯಾದ ಯುವ ಆಟಗಾರ ಸ್ಯಾಮ್ ಕರ್ರನ್ ಇಂಗ್ಲೆಂಡ್‌ಗೆ ನಿಧಾನಕ್ಕೆ ಭರವಸೆಯನ್ನು ಮೂಡಿದರು. ಅಂತಿಮ ಹಂತದ ವರೆಗೂ ಏಕಾಂಗಿಯಾಗಿ ಹೋರಾಡಿದ ಸ್ಯಾಮ್ ಕರ್ರನ್ 95 ರನ್ ಗಳಿಸಿ ಅಜೇಯವಾಗುಳಿದರು. ಅಂತಿಮವಾಗಿ ಇಂಗ್ಲೆಂಡ್ 7 ರನ್‌ಗಳಿಂದ ಸೋಲು ಕಂಡಿತು.

Story first published: Monday, March 29, 2021, 10:17 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X