ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರಿಸ್ಟಲ್‌ನಲ್ಲಿ ಇಂದು ಕೊನೆಯ ಪಂದ್ಯ: ಯಾರ ವಶವಾಗಲಿದೆ ಸರಣಿ?

ಬ್ರಿಸ್ಟಲ್, ಜುಲೈ 8: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಭಾನುವಾರ ನಡೆಯಲಿದ್ದು, ಸರಣಿ ಯಾರ ಕೈವಶವಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದಿರುವುದರಿಂದ ಕೊನೆಯ ಪಂದ್ಯ ಹೆಚ್ಚು ರೋಚಕತೆ ಪಡೆದುಕೊಂಡಿದೆ. ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ಇಂಗ್ಲೆಂಡ್‌ನ ವಿರುದ್ಧ ಸೆಣಸಾಡಲು ಭಾರತಕ್ಕೆ ಈ ಪಂದ್ಯ ಹಾಗೂ ಸರಣಿಯನ್ನು ಗೆಲ್ಲುವುದು ಮಹತ್ವದ್ದಾಗಿದೆ.

ಇಂಗ್ಲೆಂಡ್‌ಗೆ ಕುಲದೀಪ್ ಭಯವನ್ನು ನಿವಾರಿಸಿದ್ದು 'ಮೆರ್ಲಿನ್' ತಂತ್ರ!ಇಂಗ್ಲೆಂಡ್‌ಗೆ ಕುಲದೀಪ್ ಭಯವನ್ನು ನಿವಾರಿಸಿದ್ದು 'ಮೆರ್ಲಿನ್' ತಂತ್ರ!

ಮೊದಲ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್ ಪಡೆ, ಎರಡನೆಯ ಪಂದ್ಯದಲ್ಲಿ ಅದಕ್ಕೆ ತಾವು ಸನ್ನದ್ಧರಾಗಿದ್ದೇವೆ ಎಂಬ ಸಂದೇಶ ನೀಡಿದೆ.

ಶ್ರೀಲಂಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಕುಲದೀಪ್ ಯಾದವ್ ಮತ್ತು ಯಜುರ್ವೇಂದ್ರ ಚಾಹಲ್ ಸ್ಪಿನ್ ಜೋಡಿ ಎದುರು ಮಂಕಾಗಿದ್ದವು. ಆದರೆ, ಇಂಗ್ಲೆಂಡ್ ಈ ಇಬ್ಬರನ್ನೂ ಎದುರಿಸಲು ಬಹುಬೇಗನೆ ತನ್ನ ಆಟದ ಶೈಲಿಯನ್ನು ಬದಲಿಸಿಕೊಂಡಿದೆ.

ಚೂಯಿಂಗ್ ಗಮ್‌ ತಿನ್ನಲು ಅನುಮತಿಯಿದೆಯೇ: ಡುಪ್ಲೆಸಿಸ್ ಪ್ರಶ್ನೆಚೂಯಿಂಗ್ ಗಮ್‌ ತಿನ್ನಲು ಅನುಮತಿಯಿದೆಯೇ: ಡುಪ್ಲೆಸಿಸ್ ಪ್ರಶ್ನೆ

ಸ್ಪಿನ್ ಬೌಲಿಂಗ್ ಬಲವನ್ನೇ ನೆಚ್ಚಿಕೊಂಡಿರುವ ಭಾರತಕ್ಕೆ ಇಂಗ್ಲೆಂಡ್ ನಡೆಸಿರುವ ತಯಾರಿ ತುಸು ಆಘಾತ ನೀಡಿದೆ. ಆದರೆ, ಲೆಗ್‌ಸ್ಪಿನ್ ಹಾಗೂ ಮಣಿಕಟ್ಟಿನ ಸ್ಪಿನ್ ಜೋಡಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲಿದೆ ಎಂಬ ಭರವಸೆಯನ್ನು ನಾಯಕ ವಿರಾಟ್ ಕೊಹ್ಲಿ ಹೊಂದಿದ್ದಾರೆ.

ಬ್ಯಾಟಿಂಗ್‌ನಲ್ಲಿಯೂ ಸವಾಲು

ಬ್ಯಾಟಿಂಗ್‌ನಲ್ಲಿಯೂ ಸವಾಲು

ಇಂಗ್ಲೆಂಡ್ ವೇಗದ ಬೌಲಿಂಗ್ ಪಡೆ ಭಾರತಕ್ಕೆ ಸವಾಲು ಎಸೆದಿದೆ. ಬೌನ್ಸಿ ಪಿಚ್‌ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಪರದಾಡಿದ್ದರು.

ಮೊದಲ ಪಂದ್ಯದ ಹೀರೋ ಕೆ.ಎಲ್. ರಾಹುಲ್ ಕೂಡ ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ರನ್ ಗಳಿಸಲು ವಿಫಲರಾಗಿದ್ದರು. ಕೊನೆಯಲ್ಲಿ ಸ್ಪಿನ್ನರ್‌ಗಳು ಸಹ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಪರೀಕ್ಷೆಗೆ ಒಡ್ಡಿದ್ದರು.

ಆದರೆ, ಭಾರತದ ವೇಗದ ಬೌಲಿಂಗ್ ವಿಭಾಗ ಇಲ್ಲಿನ ಪಿಚ್‌ಗಳಲ್ಲಿನ ಬೌನ್ಸ್ ಮತ್ತು ಸ್ವಿಂಗ್ ಅನುಕೂಲಕತೆಯನ್ನು ಬಳಸಿಕೊಳ್ಳುತ್ತದೆ ಎಂಬ ವಿಶ್ವಾಸ ಇಲ್ಲ.

ಎರಡೂ ಪಂದ್ಯಗಳಲ್ಲಿ ವೇಗದ ಬೌಲರ್‌ಗಳು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವಲ್ಲಿ ಸಫಲರಾಗಿಲ್ಲ.

ಕೊನೆಯ ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಬಲ್ಲ ಬೌಲರ್ ಜಸ್‌ ಪ್ರೀತ್ ಬೂಮ್ರಾ ಅನುಪಸ್ಥಿತಿಯನ್ನು ತುಂಬಿಕೊಳ್ಳುವುದು ಭಾರತಕ್ಕೆ ಸಾಧ್ಯವಾಗುತ್ತಿಲ್ಲ.

ಭಾರತದ ಭರವಸೆಯ ಬೌಲರ್ ಭುವನೇಶ್ವರ್ ಕುಮಾರ್ ನಿರೀಕ್ಷೆಗಳನ್ನು ಹುಸಿಗೊಳಿಸುತ್ತಿದ್ದಾರೆ. ಉಮೇಶ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಕಡೆಯಿಂದ ಕಾಣಿಕೆ ನೀಡಿದರೆ ಸ್ಪಿನ್ನರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಗೆದ್ದರೆ ಸತತ ಆರನೇ ಸರಣಿ

ಗೆದ್ದರೆ ಸತತ ಆರನೇ ಸರಣಿ

ಭಾರತದ ಸತತ ಏಳು ಪಂದ್ಯಗಳ ಗೆಲುವಿನ ಓಟಕ್ಕೆ ಇಂಗ್ಲೆಂಡ್ ಬ್ರೇಕ್ ಹಾಕಿದೆ. ಸತತ ಆರನೇ ಟಿ20 ಸರಣಿಯನ್ನು ಗೆಲ್ಲುವ ಭಾರತದ ಬಯಕೆಗೆ ತಡೆ ಹಾಕುತ್ತದೆಯೇ ಎಂಬುದನ್ನು ಕಾದುನೋಡಬೇಕು.

2017ರ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡು ದೇಶಗಳ ಟಿ20 ಸ್ಪರ್ಧೆಯಲ್ಲಿ ಭಾರತ ಸೋತಿತ್ತು. ಅದು ಏಕೈಕ ಪಂದ್ಯವಾಗಿತ್ತು.

ಅದಕ್ಕೂ ಮುನ್ನ ಟಿ20 ಸರಣಿ ಸೋತಿದ್ದು 2016ರ ಆಗಸ್ಟ್‌ನಲ್ಲಿ. ಆಗಲೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಾಗಿತ್ತು. ಅಲ್ಲಿಂದ ಇದುವರೆಗೂ ಸತತವಾಗಿ ಭಾರತ ಸರಣಿ ಗೆಲುವಿನ ಓಟ ನಡೆಸಿದೆ.

ಮೊದಲ ಪಂದ್ಯದಲ್ಲಿ ಸೋಲಿನ ಸೇಡನ್ನು ತೀರಿಸಿಕೊಂಡಿರುವ ಇಂಗ್ಲೆಂಡ್, ಸರಣಿ ವಶಮಾಡಿಕೊಳ್ಳುವ ಮೂಲಕ ಭಾರತದ ಮೇಲೆ ಒತ್ತಡ ಹೆಚ್ಚಿಸುವ ಪ್ರಯತ್ನದಲ್ಲಿದೆ.

ಸ್ಟೋಕ್ಸ್ ಆಡುವ ಸಾಧ್ಯತೆ

ಸ್ಟೋಕ್ಸ್ ಆಡುವ ಸಾಧ್ಯತೆ

ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಗಾಯದಿಂದ ಗುಣಮುಖರಾಗಿದ್ದು, ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ.

ಮಾಜಿ ನಾಯಕ ಜೋ ರೂಟ್ ಮತ್ತು ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್ ವೈಫಲ್ಯ ಇಂಗ್ಲೆಂಡ್ ತಂಡಕ್ಕೆ ತಲೆನೋವಾಗಿದೆ. ಆದರೆ ಹನ್ನೊಂದನೆಯ ಆಟಗಾರನವರೆಗೂ ಬ್ಯಾಟ್ಸ್‌ಮನ್‌ಗಳ ಪಡೆ ಹೊಂದಿರುವ ಆಂಗ್ಲರ ಬ್ಯಾಟಿಂಗ್ ಬಲ ದೊಡ್ಡದಾಗಿದೆ. ಜೋ ರೂಟ್ ಬದಲು ಸ್ಟೋಕ್ಸ್ ಆಡಿದರೂ ಅಚ್ಚರಿಯಿಲ್ಲ.

ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ಕುಲದೀಪ್ ಅವರನ್ನು ಸಮರ್ಥವಾಗಿ ಎದುರಿಸಿದ್ದರೂ ಸ್ಪಿನ್ ದ್ವಯರ ಕುರಿತ ಅಳುಕು ಇನ್ನೂ ಮಾಯವಾಗಿಲ್ಲ.

ಅಂಕಿ ಅಂಶಗಳ ವಿವರ

ಟಿ20ಯಲ್ಲಿ ಕೊಹ್ಲಿ ಬಳಿಕ 2000 ರನ್ ಗಡಿ ಮುಟ್ಟಿದ ಎರಡನೆಯ ಭಾರತೀಯ ಎನಿಸಿಕೊಳ್ಳಲು ರೋಹಿತ್ ಶರ್ಮಾ ಅವರಿಗೆ 14 ರನ್‌ಗಳ ಅವಶ್ಯಕತೆಯಿದೆ.

ಒಂದು ವೇಳೆ ಭಾರತ ಪಂದ್ಯವನ್ನು ಸೋತರೆ, ಇದೇ ಮೊದಲ ಬಾರಿಗೆ ಮೂರು ಪಂದ್ಯಗಳ ದ್ವಿ ರಾಷ್ಟ್ರೀಯ ಸರಣಿಯನ್ನು ಸೋತಂತೆ ಆಗಲಿದೆ.

ಇಂತಹ ಸರಣಿಗಳಲ್ಲಿ ಭಾರತ ಇದುವರೆಗೂ ಮೂರನೇ ಪಂದ್ಯವನ್ನು ಸೋತಿಲ್ಲ.

ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆರಂಭಿಕ ಜೋಡಿ ಎನಿಸಿಕೊಳ್ಳಲು ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರಿಗೆ 38 ರನ್‌ಗಳ ಅವಶ್ಯಕತೆ ಇದೆ.

ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್ 1154 ರನ್ ಕಲೆ ಹಾಕಿ ಮೊದಲ ಸ್ಥಾನದಲ್ಲಿದೆ.

ಬ್ರಿಸ್ಟಲ್ ಅಂಗಳದಲ್ಲಿ ಆಡಿದ ಎಲ್ಲ ಮೂರು ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಇದು ಭಾರತಕ್ಕೆ ಈ ನೆಲದಲ್ಲಿ ಮೊದಲ ಟಿ20 ಪಂದ್ಯವಾಗಿದೆ. ಇಂಗ್ಲೆಂಡ್ ಬ್ರಿಸ್ಟಲ್‌ನಲ್ಲಿ ಆಡಿದ ಎರಡೂ ಟಿ20 ಪಂದ್ಯಗಳಲ್ಲಿ ಗೆಲುವು ಕಂಡಿದೆ.

ಪಂದ್ಯ ಯಾವಾಗ, ಎಲ್ಲಿ?

ಪಂದ್ಯ: ಭಾರತ ಮತ್ತು ಇಂಗ್ಲೆಂಡ್, ಮೂರನೇ ಟಿ20 ಪಂದ್ಯ
ಎಲ್ಲಿ, ಯಾವಾಗ?: ಬ್ರಿಸ್ಟಲ್, ಸಂಜೆ 6.30
ನೇರ ಪ್ರಸಾರ: ಸೋನಿ ಸಿಕ್ಸ್, ಸೋನಿ ಲೈವ್ ಆಪ್.

Story first published: Sunday, July 8, 2018, 13:07 [IST]
Other articles published on Jul 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X