ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಲ್ಕನೇ ಟೆಸ್ಟ್: ಹುಮ್ಮಸ್ಸಿನಲ್ಲಿರುವ ಭಾರತಕ್ಕೆ ಮತ್ತೊಂದು ಪರೀಕ್ಷೆ

ಸೌಥಾಂಪ್ಟನ್, ಆಗಸ್ಟ್ 29: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಪೈಪೋಟಿ ನೀಡುವ ಭರವಸೆ ಮೂಡಿಸಿರುವ ಭಾರತಕ್ಕೆ ಸೌಥಾಂಪ್ಟನ್‌ನಲ್ಲಿ ಗುರುವಾರ ಆರಂಭವಾಗಲಿರುವ ನಾಲ್ಕನೆ ಟೆಸ್ಟ್‌ನಲ್ಲಿ ಮತ್ತೊಂದು ಸವಾಲು ಎದುರಾಗಲಿದೆ.

ಸರಣಿಯನ್ನು ಉಳಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಸಹ ಗೆಲ್ಲಲೇಬೇಕಾಗಿದೆ. ಕಳೆದ ಪಂದ್ಯವನ್ನು ಸೋತಿರುವ ಇಂಗ್ಲೆಂಡ್, ತನ್ನ ನೆಲದಲ್ಲಿ ಸೆಟೆದು ನಿಲ್ಲುವ ಛಾತಿ ಹೊಂದಿದೆ. ಹೀಗಾಗಿ ಭಾರತ ಗೆಲುವಿನ ಗುಂಗಿನಲ್ಲಿ ಮೈಮರೆಯದೆ ಆಡಬೇಕು.

ಮೂರು ತಿಂಗಳೊಳಗೆ ಬಿಸಿಸಿಐ ಚುನಾವಣೆ: ಸಿಒಎಮೂರು ತಿಂಗಳೊಳಗೆ ಬಿಸಿಸಿಐ ಚುನಾವಣೆ: ಸಿಒಎ

ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಜಯದ ಬಳಿಕ ಭಾರತದ ಆಟಗಾರರಲ್ಲಿ ಆತ್ಮವಿಶ್ವಾಸ ಮರುಕಳಿಸಿದೆ. ಅತ್ತ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸೂಕ್ತ ಸಂಯೋಜನೆಯ ಕೊರತೆ ಎದುರಾಗಿದೆ. ಇಂಗ್ಲೆಂಡ್ ಮೇಲಿನ ಒತ್ತಡದ ಸ್ಥಿತಿಯನ್ನು ಭಾರತ ಬಳಸಿಕೊಂಡರೆ ಈ ಟೆಸ್ಟ್‌ನಲ್ಲಿಯೂ ಮೇಲುಗೈ ಸಾಧಿಸಲು ಸಾಧ್ಯ.

ಅಶ್ವಿನ್ ಆಡುವರೇ?

ಅಶ್ವಿನ್ ಆಡುವರೇ?

ನಾಯಕ ವಿರಾಟ್ ಕೊಹ್ಲಿ ಹಿಂದಿನ ಪಂದ್ಯದ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ ಗಾಯಗೊಂಡಿರುವ ಅಶ್ವಿನ್ ಅವರ ಫಿಟ್ನೆಸ್ ಭಾರತಕ್ಕೆ ಕಳವಳ ಮೂಡಿಸಿದೆ.

ಅಶ್ವಿನ್ ಅವರಿಗೆ ಆಗಿರುವ ಗಾಯ ಅಷ್ಟೇನೂ ಅಪಾಯಕಾರಿಯಲ್ಲ ಎಂದು ಮೂಲಗಳು ತಿಳಿಸಿವೆ. ಈ ಪಂದ್ಯದ ವೇಳೆಗೆ ಅವರು ಚೇತರಿಸಿಕೊಳ್ಳುವ ಭರವಸೆ ಇದೆ. ಒಂದು ವೇಳೆ ಅಶ್ವಿನ್ ಆಡದೇ ಇದ್ದರೆ ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.

ಮುರಳಿ ವಿಜಯ್ ಮತ್ತು ಕುಲದೀಪ್ ಯಾದವ್ ಅವರ ಸ್ಥಾನದಲ್ಲಿ ತಂಡಕ್ಕೆ ಸೇರ್ಪಡೆಯಾಗಿರುವ ಹೊಸ ಪ್ರತಿಭೆಗಳಾದ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಂಭವ ಕಡಿಮೆ.

ರಣಜಿ ಟ್ರೋಫಿ 2018-19 : ಕರ್ನಾಟಕದ ವೇಳಾಪಟ್ಟಿ

ತಂಡದಲ್ಲಿ ಬದಲಾವಣೆ ಇಲ್ಲ

ತಂಡದಲ್ಲಿ ಬದಲಾವಣೆ ಇಲ್ಲ

ಬೌಲಿಂಗ್ ವಿಭಾಗವು ಕಳೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಅಲ್ಲಿಯೂ ಯಾವ ಬದಲಾವಣೆ ಮಾಡುವ ಪ್ರಯತ್ನಕ್ಕೆ ಕೊಹ್ಲಿ ಮುಂದಾಗುವುದು ಅನುಮಾನ.

ವಿಕೆಟ್ ಕೀಪರ್ ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ಮಿಂಚದಿದ್ದರೂ, ಆತ್ಮವಿಶ್ವಾಸದಿಂದ ಆಡುವ ಭರವಸೆ ಮೂಡಿಸಿದ್ದಾರೆ.

ಆರಂಭಿಕರಾದ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ದೊಡ್ಡ ಮೊತ್ತ ಪೇರಿಸದಿದ್ದರೂ ಮೂರನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಜತೆಯಾಟ ನೀಡಿದ್ದಾರೆ. ಇಬ್ಬರೂ ವೈಯಕ್ತಿಕವಾಗಿಯೂ ಇನ್ನಷ್ಟು ಉತ್ತಮ ಆಟ ಪ್ರದರ್ಶಿಸಿದರೆ ಭಾರತಕ್ಕೆ ಮೇಲುಗೈ ಸಿಗಲಿದೆ.

ಈ ಪಂದ್ಯದಲ್ಲಿ ವಿಫಲರಾದರೆ ಮುಂದಿನ ಪಂದ್ಯದಲ್ಲಿ ಪೃಥ್ವಿ ಶಾಗೆ ದಾರಿ ಮಾಡಿಕೊಡಬೇಕಾದ ಒತ್ತಡ ಇರುವುದರಿಂದ ಇಬ್ಬರಿಗೂ ಎಚ್ಚರಿಕೆಯ ಆಟವಾಡುವುದು ಅಗತ್ಯ.

ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಟ್ರೆಂಟ್ ಬ್ರಿಡ್ಜ್‌ನಲ್ಲಿ ಅರ್ಧ ಶತಕ ಗಳಿಸಿದ್ದರು. ನಾಯಕ ವಿರಾಟ್ ಕೊಹ್ಲಿ ಜತೆಗೆ ಅವರಿಂದ ಸ್ಥಿರ ಪ್ರದರ್ಶನ ಸಿಗುವ ನಿರೀಕ್ಷೆಯಿದೆ.

ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಒಳಗೊಂಡ ವೇಗದ ಬೌಲಿಂಗ್ ಪಡೆ ಗಮನ ಸೆಳೆದಿದೆ.

ಕೆಪಿಎಲ್ 2018: ಶಿವಮೊಗ್ಗ ವಿರುದ್ಧ ಮೈಸೂರಿಗೆ 6 ವಿಕೆಟ್ ಭರ್ಜರಿ ಜಯ

ಬೈರ್‌ಸ್ಟೋ ಅನುಮಾನ

ಬೈರ್‌ಸ್ಟೋ ಅನುಮಾನ

ಇಂಗ್ಲೆಂಡ್ ತಂಡ ಬದಲಾವಣೆಗೆ ಮುಂದಾಗುವ ಸಾಧ್ಯತೆ ಇದೆ. ಗಾಯಗೊಂಡಿರುವ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋ ಅವರ ಸ್ಥಾನದಲ್ಲಿ ಜೇಮ್ಸ್ ವಿನ್ಸ್ ಆಡಬಹುದು. ಬೈರ್‌ಸ್ಟೋ ಅವರ ಬೆರಳಿನ ಗಾಯ ಸಂಪೂರ್ಣ ಗುಣವಾಗಿಲ್ಲ ಎನ್ನಲಾಗಿದೆ. ಆದರೆ, ಅವರು ಬ್ಯಾಟಿಂಗ್ ಮಾಡಲು ತೊಂದರೆಯಿಲ್ಲ. ಬೈರ್‌ಸ್ಟೋ ಬ್ಯಾಟಿಂಗ್ ಮಾಡುವಷ್ಟು ಫಿಟ್ ಆದರೆ, ಜೋಸ್ ಬಟ್ಲರ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಇನ್ನು ಮೊದಲ ಎರಡು ಟೆಸ್ಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಮೂರನೇ ಟೆಸ್ಟ್‌ನಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿ ಆಡದಿದ್ದ ಸ್ಯಾಮ್ ಕುರ್ರನ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಹಿರಿಯ ಆಟಗಾರ ಅಲೆಸ್ಟರ್ ಕುಕ್ ಅವರ ಬದಲು ಕುರ್ರನ್ ಸ್ಥಾನ ಗಿಟ್ಟಿಸಿಕೊಳ್ಳಬಹುದು.

ಪಂದ್ಯದ ಮಾಹಿತಿ

ಪಂದ್ಯದ ಮಾಹಿತಿ

ಪಂದ್ಯದ ದಿನಾಂಕ: ಆಗಸ್ಟ್ 30ರಿಂದ ಸೆಪ್ಟೆಂಬರ್ 3
ಪಂದ್ಯದ ಸಮಯ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)
ಸ್ಥಳ: ದಿ ರೋಸ್ ಬೌಲ್, ಸೌಥಾಂಪ್ಟನ್, ಇಂಗ್ಲೆಂಡ್

ಮುಖಾಮುಖಿ

ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್ ಇಲ್ಲಿಯವರೆಗೂ 120 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 26 ಟೆಸ್ಟ್‌ಗಳಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ 45ರಲ್ಲಿ ಜಯಭೇರಿ ಬಾರಿಸಿದೆ. ಇನ್ನು 49 ಟೆಸ್ಟ್‌ಗಳು ಡ್ರಾ ಆಗಿವೆ.

ಇಂಗ್ಲೆಂಡ್ ನೆಲದಲ್ಲಿ ಮುಖಾಮುಖಿ

ಇಂಗ್ಲೆಂಡ್ ನೆಲದಲ್ಲಿ ಮುಖಾಮುಖಿ

ಇಂಗ್ಲೆಂಡ್ ನೆಲದಲ್ಲಿ ಭಾರತ ಮತ್ತು ಇಂಗ್ಲೆಂಡ್ 59 ಪಂದ್ಯಗಳಲ್ಲಿ ಸೆಣಸಿವೆ. ಅವುಗಳಲ್ಲಿ ಭಾರತ ಕೇವಲ ಆರರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ 32 ಟೆಸ್ಟ್‌ಗಳಲ್ಲಿ ಗೆದ್ದಿದೆ. 21 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.

ಇಶಾಂತ್ 250ರ ಗುರಿ

ಇಶಾಂತ್ 250ರ ಗುರಿ

ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಸಾಧನೆ ಮಾಡಲು ಇಶಾಂತ್ ಶರ್ಮಾಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ. ಇದನ್ನು ಸಾಧಿಸಿದರೆ ಟೆಸ್ಟ್‌ನಲ್ಲಿ 250 ಮತ್ತು ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಏಳನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಆಂಡರ್ಸನ್ ಮೈಲುಗಲ್ಲು

ಆಂಡರ್ಸನ್ ಮೈಲುಗಲ್ಲು

ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಇನ್ನು ಮೂರು ವಿಕೆಟ್ ಪಡೆದರೆ 560ರ ಗಡಿ ಮುಟ್ಟಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ವೇಗದ ಬೌಲರ್ ಎಂಬ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್‌ಗ್ರಾತ್ (563) ಅವರ ದಾಖಲೆ ಮುರಿಯಲು ಅವರಿಗೆ ಆರು ವಿಕೆಟ್‌ಗಳು ಬೇಕಿವೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟೆಸ್ಟ್‌ನಲ್ಲಿ 6 ಸಾವಿರ ರನ್ ಗಡಿ ಮುಟ್ಟಲು ನಾಯಕ ವಿರಾಟ್ ಕೊಹ್ಲಿಗೆ 6 ರನ್ ಅವಶ್ಯಕತೆಯಿದೆ. 69 ಟೆಸ್ಟ್ 118 5994 ರನ್ ಬಾರಿಸಿದ್ದಾರೆ. ಮೂರು ಟೆಸ್ಟ್‌ಗಳಲ್ಲಿ ಎರಡು ಶತಕದೊಂದಿಗೆ 440 ರನ್ ಗಳಿಸಿರುವ ಕೊಹ್ಲಿ, ಈ ಸರಣಿಯ ಅಧಿಕ ಸ್ಕೋರರ್ ಎನಿಸಿದ್ದಾರೆ.

Story first published: Wednesday, August 29, 2018, 13:12 [IST]
Other articles published on Aug 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X