ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಟೆಸ್ಟ್: ಮೊದಲ ದಿನ ಇಂಗ್ಲೆಂಡ್ 7 ಕ್ಕೆ 198 ರನ್

India V/S England Test criscket: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ | Oneindia kannada
India vs England 5th Test Day 1 Live Updates

ಲಂಡನ್, ಸೆಪ್ಟೆಂಬರ್ 7: ಭಾರತ vs ಇಂಗ್ಲೆಂಡ್ ಕ್ರಿಕೆಟ್ ತಂಡಗಳು ಲಂಡನ್ ನ ಕೆನ್ನಿಂಗ್ಟನ್ ನಲ್ಲಿರುವ ಓವಲ್ ಕ್ರಿಕೆಟ್ ಮೈದಾನದಲ್ಲಿ 5ನೇ ಟೆಸ್ಟ್ ಪಂದ್ಯಕ್ಕಾಗಿ ಮುಖಾಮುಖಿಯಾಗಿದ್ದು, ಮೊದಲ ಇನ್ನಿಂಗ್ಸ್ ನ ಮೊದಲ ದಿನದಾಂತ್ಯಕ್ಕೆ ಇಂಗ್ಲೆಂಡ್ 90 ಓವರ್ ಗೆ 7 ವಿಕೆಟ್ ಕಳೆದು 198 ರನ್ ಪೇರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ನ ಆರಂಭಿಕರಲ್ಲಿ ಕೆ. ಜೆನ್ನಿಂಗ್ಸ್ 23 ರನ್ ನೊಂದಿಗೆ ನಿರ್ಗಮಿಸಿದರು. ಕೊಂಚ ವಿಕೆಟ್ ಗೆ ಅಂಟಿಕೊಂಡ ಅಲಾಸ್ಟೇರ್ ಕುಕ್ 71ರನ್ ಸೇರಿಸಿದರು. ಇನ್ನು ಜೋ ರೂಟ್ 0, ಜಾನಿ ಬೇರ್ಸ್ಟೋವ್ 0 ರನ್ ನೊಂದಿಗೆ ವಿಕೆಟ್ ಒಪ್ಪಿಸಿದ್ದು ಇಂಗ್ಲೆಂಡ್ ರನ್ ಕದಿಯುವಿಕೆಗೆ ಸ್ವಲ್ಪ ಹಿನ್ನಡೆಯೆನಿಸಿತು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42378

ತಂಡದ ಬೆಂಬಲಕ್ಕೆ ನಿಂತ ಮೋಯೀನ್ ಆಲಿ ಅವರು ಭರ್ತಿ ಅರ್ಧ ಶತಕ ಪೂರೈಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. 5ನೇ ಟೆಸ್ಟ್ ಮೊದಲ ದಿನದಾಟದ ಅಂತ್ಯಕ್ಕೆ ಜೋಸ್ ಬಟ್ಲರ್ (11) ಮತ್ತು ಆದಿಲ್ ರಶೀದ್ (4) ಕ್ರೀಸ್ ನಲ್ಲಿದ್ದರು. ಇಶಾಂತ್ 3, ಬುಮ್ರಾ ಮತ್ತು ಜಡೇಜಾಗೆ ತಲಾ ಎರಡು ವಿಕೆಟ್ ಲಭಿಸಿತ್ತು.

ಇಂಗ್ಲೆಂಡ್ ನ ಪ್ರತಿಭಾನ್ವಿತ ಆಟಗಾರ ಅಲಾಸ್ಟೇರ್ ಕುಕ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎನ್ನುವುದಕ್ಕೂ ಈ ಪಂದ್ಯ ಮಹತ್ವದ್ದು. ಕೊನೆಯ ಟೆಸ್ಟ್ ಬಳಿಕ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ.

ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಕಳೆದುಕೊಂಡಿರುವ ಭಾರತಕ್ಕೆ ಹಿನ್ನಡೆಯ ಅಂತರವನ್ನು ಕಿರಿದುಗೊಳಿಸಿಕೊಳ್ಳಲು ಅವಕಾಶವಿದೆ. ತಂಡದಲ್ಲಿ ಸಣ್ಣ ಬದಲಾವಣೆಯೂ ಆಗಿದ್ದು, ಭಾರತ ಕೊನೆಯ ಪಂದ್ಯವನ್ನಾದರೂ ಗೆದ್ದುಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತ: ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಶಬ್ ಪಂತ್ (ವಿಕೆ), ಹನುಮಾ ವಿಹಾರಿ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ.

ಇಂಗ್ಲೆಂಡ್: ಅಲಾಸ್ಟೇರ್ ಕುಕ್, ಕೀಟನ್ ಜೆನ್ನಿಂಗ್ಸ್, ಮೊಯಿನ್ ಅಲಿ, ಜೋ ರೂಟ್ (ಕ್ಯಾಪ್ಟನ್), ಜಾನಿ ಬೇರ್ಸ್ಟೋವ್ (ವಿಕ್), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರಾನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

Story first published: Friday, September 7, 2018, 23:30 [IST]
Other articles published on Sep 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X