ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng: ರೋಹಿತ್ ಶರ್ಮಾಗೆ ಕೊರೊನಾ; ಇಂಗ್ಲೆಂಡ್‌ಗೆ ಹಾರಿದ ಕರ್ನಾಟಕ ಆಟಗಾರ

 India vs England 5th test : Mayank Agarwal to join Indian Test squad as cover for Rohit Sharma
Rohit ಅಲಭ್ಯತೆಯಲ್ಲಿ ಇಂಗ್ಲೆಂಡ್ ನಲ್ಲಿ‌ ಮಿಂಚುತ್ತಾರಾ ಮಯಾಂಕ್ ಅಗರ್ವಾಲ್ | *Cricket | OneIndia Kannada

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ನಂತರ ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ 5 ಟೆಸ್ಟ್‌ಗೆ ಅನುಮಾನಾಸ್ಪದವಾಗಿರುವ ನಾಯಕ ರೋಹಿತ್ ಶರ್ಮಾ ಅವರ ಬದಲಿ ಆಟಗಾರನಾಗಿ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರನ್ನು ಇಂಗ್ಲೆಂಡ್‌ನಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಸೇರಲು ಕರೆ ನೀಡಲಾಗಿದೆ.

ರೋಹಿತ್ ಶರ್ಮಾ ಲೀಸೆಸ್ಟರ್‌ಶೈರ್ ವಿರುದ್ಧ ಡ್ರಾಗೊಂಡ ಏಕೈಕ ಅಭ್ಯಾಸ ಪಂದ್ಯದ ಮೊದಲ ದಿನ ಬ್ಯಾಟಿಂಗ್‌ಗೆ ಇಳಿದು ಆಟವಾಡಿದರು. ನಂತರ ರಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ (ಆರ್‌ಎಟಿ) ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಎರಡನಢ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಲಿಲ್ಲ ಮತ್ತು ಐಸೋಲೇಷನ್‌ಗೆ ಒಳಗಾಗಿದ್ದಾರೆ.

IND vs IRE: ಮೊದಲ ಟಿ20 ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಪಾಂಡ್ಯ ಖುಷಿ ಹಂಚಿಕೊಂಡಿದ್ದು ಹೀಗೆIND vs IRE: ಮೊದಲ ಟಿ20 ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಪಾಂಡ್ಯ ಖುಷಿ ಹಂಚಿಕೊಂಡಿದ್ದು ಹೀಗೆ

ಮರು ನಿಗದಿಪಡಿಸಿದ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯರಾಗುವ ನಿರೀಕ್ಷೆಯಲ್ಲಿ 31 ವರ್ಷದ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವರು ಈ ಮೊದಲು 15 ಜನರ ತಂಡಕ್ಕೆ ಆಯ್ಕೆಯಾಗುವಲ್ಲಿ ತಪ್ಪಿಸಿಕೊಂಡಿದ್ದರು. ಆದರೆ ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಸರಣಿಯ ಮುಂಚೆಯೇ ಕೆಎಲ್ ರಾಹುಲ್ ಗಾಯಗೊಂಡಿದ್ದರಿಂದ ಮತ್ತು ಈಗ ರೋಹಿತ್ ಸೋಂಕಿಗೆ ಒಳಗಾಗಿದ್ದರಿಂದ ಮಯಾಂಕ್‌ಗೆ ಮತ್ತೊಂದು ಅವಕಾಶ ಒಲಿದು ಬಂದಿದೆ.

ರೋಹಿತ್ ಶರ್ಮಾಗೆ ಬ್ಯಾಕ್‌ಅಪ್ ಬ್ಯಾಟ್ಸ್‌ಮನ್

ರೋಹಿತ್ ಶರ್ಮಾಗೆ ಬ್ಯಾಕ್‌ಅಪ್ ಬ್ಯಾಟ್ಸ್‌ಮನ್

"ಕರ್ನಾಟಕದ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಇಂದು ರೋಹಿತ್ ಶರ್ಮಾಗೆ ಬ್ಯಾಕ್‌ಅಪ್ ಬ್ಯಾಟ್ಸ್‌ಮನ್ ಆಗಿ ಹೋಗುತ್ತಿದ್ದಾರೆ ಮತ್ತು ಅಗತ್ಯವಿದ್ದರೆ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುತ್ತಾರೆ. ಏಕೆಂದರೆ ಇಂಗ್ಲೆಂಡ್‌ನ ಕೋವಿಡ್ ಪ್ರೋಟೋಕಾಲ್‌ಗಳು ಆರ್‌ಟಿ-ಪಿಸಿಆರ್ ಪರೀಕ್ಷೆಯು ನೆಗೆಟಿವ್ ಆಗಿದ್ದರೆ, ಅಲ್ಲಿ ಯಾವುದೇ ಕ್ವಾರಂಟೈನ್ ಅವಧಿಯ ಅಗತ್ಯವಿಲ್ಲ," ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.

ಐದನೇ ಟೆಸ್ಟ್ ಕಳೆದ ವರ್ಷದ ಅಪೂರ್ಣ ಸರಣಿಯ ಭಾಗ

ಐದನೇ ಟೆಸ್ಟ್ ಕಳೆದ ವರ್ಷದ ಅಪೂರ್ಣ ಸರಣಿಯ ಭಾಗ

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಕಳೆದ ವರ್ಷದ ಅಪೂರ್ಣ ಸರಣಿಯಿಂದ ಕೂಡಿದ್ದು, ಕಳೆದ ವರ್ಷವೂ ಭಾರತೀಯ ಶಿಬಿರದಲ್ಲಿ ಕೋವಿಡ್-19 ಏಕಾಏಕಿ ಕಾಣಿಸಿಕೊಂಡಿದ್ದರಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿತ್ತು. ಅದೇ ರೀತಿ ಈ ವರ್ಷವೂ ಪಂದ್ಯಕ್ಕೂ ಮುನ್ನ ಮೂರು ಆಟಗಾರರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಕಾಕತಾಳೀಯವಾಗಿದೆ.

ಈಗಾಗಲೇ ಸರಣಿಯ ನಾಲ್ಕು ಪಂದ್ಯಗಳು ಮುಗಿದಿದ್ದು, ಒಂದು ಡ್ರಾ ಪಂದ್ಯ ಸೇರಿ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಸರಣಿ ಜಯಿಸಬೇಕೆಂದರೆ ಕೊನೆಯ ಪಂದ್ಯವನ್ನು ಗೆಲ್ಲಬೇಕು, ಇಲ್ಲವಾದರೆ ಕಡೆಯ ಪಕ್ಷ ಡ್ರಾ ಅದರೂ ಮಾಡಿಕೊಳ್ಳಬೇಕು.

ಮಯಾಂಕ್ ಅಗರ್ವಾ 41.33 ಸರಾಸರಿಯಲ್ಲಿ 1488 ರನ್

ಮಯಾಂಕ್ ಅಗರ್ವಾ 41.33 ಸರಾಸರಿಯಲ್ಲಿ 1488 ರನ್

ಇನ್ನು ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಇದುವರೆಗೆ 21 ಟೆಸ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದು, 41.33 ಸರಾಸರಿಯಲ್ಲಿ 1488 ರನ್ ಗಳಿಸಿದ್ದಾರೆ. ಅವರು ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್ ಕ್ರಿಕೆಟ್ ಆಡಿದ್ದರು. ಕೊನೆಯ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಅವರು ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 59 ರನ್‌ಗಳನ್ನು (33, 4, 22) ಗಳಿಸಿದ್ದಾರೆ.

ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ 196 ರನ್

ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ 196 ರನ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮುನ್ನಡೆಸುತ್ತಿರುವಾಗಲೂ ಅವರು ಕಳಪೆ ಪ್ರದರ್ಶನ ನೀಡಿದ್ದರು. 13 ಪಂದ್ಯಗಳಲ್ಲಿ 196 ರನ್ ಗಳಿಸಿದರು. ಅಲ್ಲದೇ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು 10 ತಂಡಗಳ ಲೀಗ್‌ನಲ್ಲಿ ಆರನೇ ಸ್ಥಾನವನ್ನು ಗಳಿಸಿತು.

Story first published: Monday, June 27, 2022, 13:03 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X