ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್‌ಗೆ ಭಾರತೀಯ ಆಟಗಾರರ ಸಂಭಾವ್ಯ ಪಟ್ಟಿ

By Manjunatha
India v/s England test cricket 2018: ಐದನೇ ಟೆಸ್ಟ ಪಂದ್ಯಕ್ಕೆ ವಿರಾಟ್ ಕೊಹ್ಲಿ ಪಡೆ ಸಜ್ಜು
India Vs England, 5th Test: Probable India XI for Oval Test

ಓವಲ್‌, ಸೆಪ್ಟೆಂಬರ್ 06: ಇಂಗ್ಲೆಂಡ್ ವಿರುದ್ಧ ಈಗಾಗಲೇ 3-1 ರಲ್ಲಿ ಸರಣಿ ಸೋತಿರುವ ಭಾರತ ತಂಡ ನಾಳೆ (ಸೆಪ್ಟೆಂಬರ್ 07) ಕ್ಕೆ ಕೊನೆಯ ಟೆಸ್ಟ್‌ ಪಂದ್ಯ ಆಡಲಿದೆ.

ಈಗಾಗಲೇ ಸರಣಿ ಸೋತಿರುವ ಈ ಪಂದ್ಯ ಇಂಗ್ಲೆಂಡ್ ಪಾಲಿಗೆ ಔಪಚಾರಿಕವಾಗಿದ್ದರೆ ಸರಣಿ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಭಾರತಕ್ಕೆ ಇರುವ ಅವಕಾಶ ಹಾಗಾಗಿ ಎರಡೂ ತಂಡಗಳಲ್ಲೂ ಕೆಲವು ಪ್ರಮುಖ ಬದಲಾವಣೆಗಳು ಆಗಲಿವೆ.

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡ ಪ್ರಕಟ, ಕುಕ್ ಕೊನೇ ಆಟ! ಭಾರತ-ಇಂಗ್ಲೆಂಡ್ 5ನೇ ಟೆಸ್ಟ್: ಇಂಗ್ಲೆಂಡ್ ತಂಡ ಪ್ರಕಟ, ಕುಕ್ ಕೊನೇ ಆಟ!

ಈ ವರೆಗಿನ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯವೇ ಭಾರತವನ್ನು ಕಾಡಿದ್ದು, ವಿರಾಟ್ ಕೊಹ್ಲಿ, ಪೂಜಾರ, ಅಜಿಂಕ್ಯಾ ರಹಾನೆ ಬಿಟ್ಟರೆ ಮತ್ಯಾರು ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳು ಮತ್ತು 5-6 ನೇ ಡೌನ್‌ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ನೆಲಕಚ್ಚಿದ ಕಾರಣ ಭಾರತ ಟೂರ್ನಿಯಲ್ಲಿ ಹಿಂದೆ ಬಿದ್ದಿತು.

ಹೊಸ ಮುಖ ಪೃಥ್ವಿ ಶಾಗೆ ಅವಕಾಶ

ಹೊಸ ಮುಖ ಪೃಥ್ವಿ ಶಾಗೆ ಅವಕಾಶ

ಈಗಾಗಲೇ ದೇಸಿ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸಿರುವ ಭಾರತ ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಅವರು ಈ ಪಂದ್ಯದಿಂದ ಭಾರತ ತಂಡಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಟೂರ್ನಿಯಲ್ಲಿ ಸಂಪೂರ್ಣ ವಿಫಲರಾಗಿರುವ ಕರ್ನಾಟಕದ ಕೆ.ಎಲ್.ರಾಹುಲ್ ಅವರ ಬದಲಿಗೆ ಪೃಥ್ವಿ ಶಾ ಅವರು ಆಡುವ ಸಾಧ್ಯತೆ ಇದೆ.

ಹನುಮ ವಿಹಾರಿಗೆ ಅವಕಾಶ

ಹನುಮ ವಿಹಾರಿಗೆ ಅವಕಾಶ

ಭಾರತವು ಇಂಗ್ಲೆಂಡ್‌ನಲ್ಲಿ ಐದು ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕಿಳಿಯುವ ತಂತ್ರ ಅನುಸರಿಸಿತ್ತು. ಆದರೆ ಈಗ ಕೊನೆಯ ಪಂದ್ಯ ಆದ್ದರಿಂದ ಕಳೆದುಕೊಳ್ಳಲು ಏನೂ ಇಲ್ಲ ಹಾಗಾಗಿ ಪ್ರಯೋಗಕ್ಕಾಗಿ ಆರು ಬ್ಯಾಟ್ಸ್‌ಮನ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಹಾಗಾದಲ್ಲಿ ಹನುಮ ವಿಹಾರಿ ಅಥವಾ ಕರುಣ್ ನಾಯರ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಅನಧಿಕೃತ ಟೆಸ್ಟ್: ಭಾರತ 'ಎ' ವಿರುದ್ಧ ಆಸ್ಟ್ರೇಲಿಯಾ 'ಎ'ಗೆ 98 ರನ್ ಜಯ

ಅಶ್ವಿನ್ ಬದಲು ಜಡೇಜಾ

ಅಶ್ವಿನ್ ಬದಲು ಜಡೇಜಾ

ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬದಲಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವಕಾಶ ಪಡೆಯುವ ಸಾಧ್ಯತೆಯೂ ಇದೆ. ಅಶ್ವಿನ್ ಅವರು ಗಾಯಾಳುವಾಗಿರುವ ಕಾರಣ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಉತ್ತಮ ಆಲ್‌ರೌಂಡರ್ ಕೂಡಾ ಆಗಿರುವ ಜಡೇಜಾ ಅವರಿಗೆ ಆಡುವ 11 ರ ಬಳಗದಲ್ಲಿ ಅವಕಾಶ ಸಿಕ್ಕರೆ ಆಶ್ಚರ್ಯವಿಲ್ಲ.

ಬ್ಯಾಟಿಂಗ್ ಆರ್ಡರ್ ಬದಲಾವಣೆ

ಬ್ಯಾಟಿಂಗ್ ಆರ್ಡರ್ ಬದಲಾವಣೆ

ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನದಲ್ಲಿ ಈ ಸರಣಿಯಲ್ಲಿ ಸತತವಾಗಿ ವಿಫಲವಾಗಿರುವ ಕೆ.ಎಲ್.ರಾಹುಲ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಿ ಅಜಿಂಕ್ಯಾ ರಹಾನೆಯನ್ನು ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಕಳುಹಿಸುವ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಹೀಗಾದಲ್ಲಿ ತಮ್ಮ ಫಾರ್ಮ್‌ ಮರಳಿ ಪಡೆಯಲು ಒದ್ದಾಡುತ್ತಿರುವ ರಾಹುಲ್‌ಗೆ ಉತ್ತಮ ಅವಕಾಶ ದೊರೆತಂತಾಗುತ್ತದೆ.

ಬೂಮ್ರಾಗೆ ವಿಶ್ರಾಂತಿ

ಬೂಮ್ರಾಗೆ ವಿಶ್ರಾಂತಿ

ಈ ಸರಣಿಯ ಭಾರತದ ಅತಿಮುಖ್ಯ ಬೌಲಿಂಗ್ ಸಕಾರಾತ್ಮಕ ಅಂಶವಾದ ಜಸ್ಪ್ರೀತ್ ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರು ಗಾಯಗೊಂಡು ಆ ನಂತರ ಸರಣಿಗೆ ಮರಳಿದ್ದರು. ಮುಂದೆ ಏಷ್ಯಾ ಕಪ್‌ಗೂ ಅವರು ಆಯ್ಕೆ ಆಗಿರುವ ಕಾರಣ ಫಿಟ್‌ನೆಸ್‌ಗಾಗಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ರಿಷಬ್ ಪಂಥ್‌ ಹೊರಕ್ಕೆ

ರಿಷಬ್ ಪಂಥ್‌ ಹೊರಕ್ಕೆ

ಉತ್ತಮ ಪ್ರದರ್ಶನ ತೋರಲು ದಿನೇಶ್ ಕಾರ್ತಿಕ್ ವಿಫಲರಾದ ಕಾರಣ ಅವಕಾಶ ಪಡೆದಿದ್ದ ರಿಷಬ್ ಪಂಥ್ ಸಹ ಸಿಕ್ಕ ಅವಕಾಶ ಬಳಸಿಕೊಳ್ಳದೆ ವಿಫಲರಾದ ಕಾರಣ ಅವರ ಸ್ಥಾನಕ್ಕೆ ಮತ್ತೆ ದಿನೇಶ್ ಕಾರ್ತಿಕ್ ಅವರನ್ನೆ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ.

Story first published: Thursday, September 6, 2018, 12:16 [IST]
Other articles published on Sep 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X