ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ರಿಷಭ್ ಪಂತ್, 72 ವರ್ಷಗಳ ಹಳೆಯ ದಾಖಲೆ ನೆಲಸಮ

Rishabh pant

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಮರುನಿಗದಿತ ಐದನೇ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾಕ್ಕೆ ಆಧಾರವಾಗುವುದಲ್ಲದೆ ವಿಶ್ವದಾಖಲೆಯನ್ನ ಕೂಡ ನಿರ್ಮಿಸಿದ್ದಾರೆ.

ರಿಷಭ್ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ದಾಖಲಿಸುವ ಮೂಲಕ ತಂಡದ ಸ್ಕೋರ್ 400ರ ಗಡಿದಾಟುವಂತೆ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 111 ಎಸೆತಗಳಲ್ಲಿ 146 ರನ್ ಸಿಡಿಸಿದ ಪಂತ್ ಇನ್ನಿಂಗ್ಸ್‌ನಲ್ಲಿ 20 ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ಗಳಿದ್ದವು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲೂ ಟೀಂ ಇಂಡಿಯಾಕ್ಕೆ ಆಧಾರವಾದ ರಿಷಭ್ 86 ಎಸೆತಗಳಲ್ಲಿ 57 ರನ್ ಕಲೆಹಾಕುವ ಮೂಲಕ ತಂಡದ ಲೀಡ್‌ 300ರ ಗಡಿದಾಟುವಂತೆ ಮಾಡಿದ್ದಾರೆ. ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಇದೀಗ ಅರ್ಧಶತಕದ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

72 ವರ್ಷಗಳ ಹಳೆಯ ದಾಖಲೆ ಮುರಿದ ರಿಷಭ್ ಪಂತ್

72 ವರ್ಷಗಳ ಹಳೆಯ ದಾಖಲೆ ಮುರಿದ ರಿಷಭ್ ಪಂತ್

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ವಿದೇಶಿ ವಿಕೆಟ್ ಕೀಪರ್‌ ಎಂಬ ಸಾಧನೆಯನ್ನ ರಿಷಭ್ ಪಂತ್ ತಮ್ಮ ಹೆಸರಿಗೆ ದಾಖಲಿಸಿದ್ದಾರೆ. ಈ ಮೂಲಕ 72 ವರ್ಷಗಳ ಹಳೆಯ ದಾಖಲೆಯನ್ನ ಪಂತ್ ಮುರಿದಿದ್ದಾರೆ.

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 1950 ರಲ್ಲಿ ವೆಸ್ಟ್ ಇಂಡೀಸ್‌ನ ಕ್ಲೈಡ್ ವಾಲ್ಕಾಟ್ ಅವರ ದಾಖಲೆಯನ್ನು ಭಾರತದ ಉಪನಾಯಕ ಹಿಂದೆ ಹಾಕಿದನು. ಈ ಟೆಸ್ಟ್‌ನಲ್ಲಿ ವಾಲ್ಕಾಟ್ 14 ಮತ್ತು ಔಟಾಗದೆ 168 ರನ್ ಗಳಿಸಿದ್ದರು. ಆದ್ರೀಗ ಪಂತ್ 203 ರನ್ ಸಿಡಿಸಿದ್ದಾರೆ.

IND vs ENG: ಅಪರೂಪದ ದಾಖಲೆ ಬರೆಯಲು ಸಜ್ಜಾದ ಕೋಚ್ ರಾಹುಲ್ ದ್ರಾವಿಡ್

ಶತಕ ಮತ್ತು ಅರ್ಧಶತಕ ದಾಖಲಿಸಿದ ಭಾರತದ ಎರಡನೇ ವಿಕೆಟ್ ಕೀಪರ್

ಶತಕ ಮತ್ತು ಅರ್ಧಶತಕ ದಾಖಲಿಸಿದ ಭಾರತದ ಎರಡನೇ ವಿಕೆಟ್ ಕೀಪರ್

ರಿಷಭ್ ಪಂತ್ ಮತ್ತೊಂದು ವಿಶೇಷ ದಾಖಲೆಯನ್ನ ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಫಾರೂಖ್ ಇಂಜಿನಿಯರ್ ಬಳಿಕ ಟೆಸ್ಟ್ ಪಂದ್ಯದಲ್ಲಿ ಶತಕ ಮತ್ತು ಅರ್ಧಶತಕ ದಾಖಲಿಸಿದ ಭಾರತದ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. ಫಾರೂಕ್ 1973ರಲ್ಲಿ ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ 121 ಮತ್ತು 66 ರನ್ ಬಾರಿಸಿದ್ದರು.

ಇಷ್ಟಲ್ಲದೆ ಎಂ.ಎಸ್ ಧೋನಿ ದಾಖಲೆಯು ಈ ಮೂಲಕ ಪತನಗೊಂಡಿದೆ. 2011 ರಲ್ಲಿ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ಹ್ಯಾಮ್ ಟೆಸ್ಟ್‌ನಲ್ಲಿ MS ಧೋನಿ ಗಳಿಸಿದ 151 ರನ್‌ಗಳ ದಾಖಲೆಯನ್ನು ಕೂಡ ಮುರಿದರು. ಭಾರತ ಮಾಜಿ ನಾಯಕ ಧೋನಿ ಎರಡು ಇನ್ನಿಂಗ್ಸ್‌ಗಳಲ್ಲಿ 77 ಮತ್ತು 74 ರನ್ ಗಳಿಸಿದ್ದು, ಟೀಂ ಇಂಡಿಯಾ ಆ ಪಂದ್ಯದಲ್ಲಿ ಸೋಲನ್ನ ಅನುಭವಿಸಿತ್ತು.

IND vs ENG 5ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಮತ್ತೊಂದು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಭಾರತದ ಆಚೆಗೆ 200 ರನ್ ಕಲೆಹಾಕಿದ ಮೊದಲ ವಿಕೆಟ್ ಕೀಪರ್

ಭಾರತದ ಆಚೆಗೆ 200 ರನ್ ಕಲೆಹಾಕಿದ ಮೊದಲ ವಿಕೆಟ್ ಕೀಪರ್

ರಿಷಭ್ ಪಂತ್ ಒಟ್ಟಾರೆ ಪಂದ್ಯದಲ್ಲಿ 203ರನ್‌ ಕಲೆಹಾಕುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್ ಕೀಪರ್ ಆಗಿದ್ದು, ಭಾರತದ ಆಚೆಗೆ ಟೆಸ್ಟ್ ಪಂದ್ಯದಲ್ಲಿ 200ರನ್ ಕಲೆಹಾಕಿದೆ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 98ರನ್‌ಗೆ ಐದು ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾಗೆ ಆಧಾರವಾಗಿದ್ದ ಪಂತ್, ಆರನೇ ವಿಕೆಟ್‌ಗೆ ಜಡೇಜಾ ಜೊತೆಗೂಡಿ 222ರನ್‌ಗಳ ಅಮೋಘ ಜೊತೆಯಾಟವಾಡಿದರು. ಈ ಮೂಲಕ ಟೀಂ ಇಂಡಿಯಾ 416ರನ್‌ಗಳನ್ನ ಕಲೆಹಾಕಲು ಸಾಧ್ಯವಾಯಿತು.

Story first published: Monday, July 4, 2022, 18:39 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X