ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng ಟೆಸ್ಟ್: ಯುಕೆಗೆ ಪ್ರಯಾಣ ಬೆಳೆಸಿದ ಭಾರತ ತಂಡದ ಜೊತೆ ರೋಹಿತ್ ಶರ್ಮಾ ಹೋಗಿಲ್ಲವೇಕೆ?

India vs England 5th Test: Rohit Sharma Is Set To Leave For England On June 20

ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಅಪೂರ್ಣವಾಗಿ ಉಳಿದಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಂತಿಮ ಪಂದ್ಯವನ್ನಾಡಲು ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದೆ. ಜುಲೈ 1ರಿಂದ 5ರವರೆಗೆ ಈ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಕಳೆದ ವರ್ಷ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಭಾರತೀಯ ತಂಡದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂತಿಮ ಪಂದ್ಯವನ್ನು ಮುಂದೂಡಲಾಗಿತ್ತು.

ಗುರುವಾರ ಮುಂಬೈನಿಂದ ಇಂಗ್ಲೆಂಡ್‌ಗೆ ತೆರಳಿದ್ದ ಬ್ಯಾಚ್‌ನಲ್ಲಿ ರೋಹಿತ್ ಶರ್ಮಾ ಅನುಪಸ್ಥಿತಿಯು ಅವರ ಫಿಟ್‌ನೆಸ್ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ಆದಾಗ್ಯೂ, ರೋಹಿತ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಜೂನ್ 20ರಂದು ಬೆಂಗಳೂರಿನಿಂದ ವೈಟ್-ಬಾಲ್ ತಜ್ಞರು ಮತ್ತು ಇತರ ಕೆಲವು ಟೆಸ್ಟ್ ಆಟಗಾರರೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ ಎಂದು ಸ್ಪೋರ್ಟ್ಸ್ ಟುಡೇ ವರದಿ ಮಾಡಿದೆ.

ಜೂನ್ 20ರಂದು ಇಂಗ್ಲೆಂಡ್‌ಗೆ ತೆರಳಲು ಸಜ್ಜು

ಜೂನ್ 20ರಂದು ಇಂಗ್ಲೆಂಡ್‌ಗೆ ತೆರಳಲು ಸಜ್ಜು

ರೋಹಿತ್ ಶರ್ಮಾ ಜೂನ್ 20ರಂದು ಇಂಗ್ಲೆಂಡ್‌ಗೆ ತೆರಳಲು ಸಿದ್ಧರಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಟಿ20 ಸರಣಿಯನ್ನು ಪೂರ್ಣಗೊಳಿಸಿದ ನಂತರ ಯುಕೆಗೆ ತೆರಳುವ ಆಟಗಾರರ ಗುಂಪಿನೊಂದಿಗೆ ತೆರಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಭಾರತವನ್ನು ಮುನ್ನಡೆಸಲಿದ್ದಾರೆ. ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕೊನೆಯ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ.

ಭಾರತದ ಬಹುತೇಕ ಟೆಸ್ಟ್ ಆಟಗಾರರು ಯುಕೆಗೆ ತೆರಳಿದ್ದಾರೆ

ಭಾರತದ ಬಹುತೇಕ ಟೆಸ್ಟ್ ಆಟಗಾರರು ಯುಕೆಗೆ ತೆರಳಿದ್ದಾರೆ

ಗುರುವಾರ ಜೂನ್ 16ರಂದು ಬೆಳಿಗ್ಗೆ ಮುಂಬೈನಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಚೇತೇಶ್ವರ ಪೂಜಾರ ಮತ್ತು ಆರಂಭಿಕ ಆಟಗಾರ ಶುಭಮನ್ ಗಿಲ್, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಸೇರಿದಂತೆ ಭಾರತದ ಬಹುತೇಕ ಟೆಸ್ಟ್ ಆಟಗಾರರು ಯುಕೆಗೆ ತೆರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಭಾಗವಾಗಿರುವ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್ ತಂಡವನ್ನು ರೋಹಿತ್ ಶರ್ಮಾರೊಂದಿಗೆ ಸೇರಿಕೊಳ್ಳಲಿದ್ದಾರೆ. ಇದೇ ವೇಳೆ ಗುರುವಾರ ಮುಂಬೈನಿಂದ ನಿರ್ಗಮಿಸಿದ ಟೆಸ್ಟ್ ಆಟಗಾರರ ಬ್ಯಾಚ್‌ನೊಂದಿಗೆ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಕೂಡ ಕಾಣಿಸಿಕೊಂಡಿಲ್ಲ.

ಲೀಸೆಸ್ಟರ್‌ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ

ಲೀಸೆಸ್ಟರ್‌ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ

ಜೂನ್ 26 ಮತ್ತು 28ರಂದು ಐರ್ಲೆಂಡ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಟಿ20 ತಂಡವು 2 ಟಿ20 ಪಂದ್ಯಗಳನ್ನು ಆಡಲಿರುವಂತೆಯೇ ಭಾರತವು ಜೂನ್ 24ರಿಂದ 27ರವರೆಗೆ ಲೀಸೆಸ್ಟರ್‌ಶೈರ್ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತವು ಲಾರ್ಡ್ಸ್ ಮತ್ತು ಓವಲ್‌ನಲ್ಲಿ ಗೆದ್ದು 2-1 ಮುನ್ನಡೆ ಸಾಧಿಸಿದಾಗ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಗ್ರ ಕ್ರಮಾಂಕ ಬ್ಯಾಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು. ರೋಹಿತ್ ಶರ್ಮಾ 4 ಟೆಸ್ಟ್‌ಗಳಲ್ಲಿ 368 ರನ್ ಗಳಿಸಿದರು. ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಅವರು 564 ರನ್‌ ಗಳಿಸಿದ್ದಾರೆ.

ಸುಮ್ನೆ ಬೌಲ್ ಮಾಡದೆ ಕೆಣಕಿದ ತಬ್ರೇಜ್ ಶಮ್ಸಿ ವಿರುದ್ಧ ಇಶಾನ್ ಕಿಶನ್ ಸೇಡು ತೀರಿಸಿಕೊಂಡಿದ್ದು ಹೀಗೆ. *Cricket
ಏಕೈಕ ಟೆಸ್ಟ್‌ಗೆ ರಾಹುಲ್ ಭಾರತ ತಂಡದ ಭಾಗವಾಗುವ ಸಾಧ್ಯತೆ ಕಡಿಮೆ

ಏಕೈಕ ಟೆಸ್ಟ್‌ಗೆ ರಾಹುಲ್ ಭಾರತ ತಂಡದ ಭಾಗವಾಗುವ ಸಾಧ್ಯತೆ ಕಡಿಮೆ

ಮುಂಬೈ ಇಂಡಿಯನ್ಸ್‌ನೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಅಭಿಯಾನವನ್ನು ಪೂರ್ಣಗೊಳಿಸಿದ ನಂತರ ರೋಹಿತ್ ಶರ್ಮಾ ಮಾಲ್ಡೀವ್ಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಿಶ್ರಾಂತಿ ಮುಗಿಸಿದ ನಂತರ ಭಾರತಕ್ಕೆ ಮರಳಿದರು. ರಿಷಭ್ ಪಂತ್ ನಾಯಕತ್ವದಲ್ಲಿ ಟಿ20 ಸರಣಿ ಆಡುತ್ತಿರುವ ತಂಡದಿಂದ ರೋಹಿತ್, ಕೊಹ್ಲಿ, ಬುಮ್ರಾ, ಶಮಿ ಮತ್ತು ಜಡೇಜಾ ಮುಂತಾದವರಿಗೆ ವಿಶ್ರಾಂತಿ ನೀಡಲಾಗಿದೆ.

ಈ ಮಧ್ಯೆ, ಗಾಯದಿಂದ ಹೊರಗುಳಿಯುವ ಮೊದಲು ದಕ್ಷಿಣ ಆಫ್ರಿಕಾ ಸರಣಿಯ ಟಿ20 ತಂಡದ ನಾಯಕರಾಗಿ ಹೆಸರಿಸಲ್ಪಟ್ಟ ಕೆಎಲ್ ರಾಹುಲ್ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಏಕೈಕ ಟೆಸ್ಟ್‌ಗೆ ಭಾರತ ತಂಡದ ಭಾಗವಾಗುವ ಸಾಧ್ಯತೆ ಕಡಿಮೆ ಇದ್ದು, ಭಾರತಕ್ಕೆ ಅಲ್ಪ ಹಿನ್ನಡೆಯಾದಂತಿದೆ.

Story first published: Friday, June 17, 2022, 9:50 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X