ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಬರೆದ ಅಜಿಂಕ್ಯ ರಹಾನೆ

India vs England: Ajinkya Rahane created unique record

ಚೆನ್ನೈ: ಟೀಮ್ ಇಂಡಿಯಾ ಟೆಸ್ಟ್‌ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 1000 ರನ್ ಬಾರಿಸಿದ ಏಷ್ಯಾದ ಮೊದಲನೇ ಬ್ಯಾಟ್ಸ್‌ಮನ್‌ ಆಗಿ ರಹಾನೆ ಗುರುತಿಸಿಕೊಂಡಿದ್ದಾರೆ.

ಮೊಯೀನ್ ಅಲಿ ಮಾರಕ ಸ್ಪಿನ್‌ಗೆ ದಂಗಾದ ವಿರಾಟ್ ಕೊಹ್ಲಿ: ವಿಡಿಯೋಮೊಯೀನ್ ಅಲಿ ಮಾರಕ ಸ್ಪಿನ್‌ಗೆ ದಂಗಾದ ವಿರಾಟ್ ಕೊಹ್ಲಿ: ವಿಡಿಯೋ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ. 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ರಹಾನೆ 46 ಓವರ್‌ ವೇಳೆಗೆ 31 ರನ್ ಬಾರಿಸಿ ಆಡುತ್ತಿದ್ದರು.

ಐಸಿಸಿಯು ಟೆಸ್ಟ್‌ ಕ್ರಿಕೆಟ್‌ಗೆ ಸಂಬಂಧಿಸಿ, 'ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌' ಅನ್ನುವ ಸ್ಪರ್ಧೆ ಪರಿಚಯಿಸಿದೆ. ಅಂದರೆ ಪ್ರವಾಸ ಸರಣಿಗಳಂಥ ಅಧಿಕೃತ ಟೆಸ್ಟ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ, ಗೆಲ್ಲುವ ತಂಡಗಳ ಚಾಂಪಿಯನ್‌ಶಿಪ್‌ ಇದು. ಟೆಸ್ಟ್‌ ಚಾಂಪಿಯನ್‌ಶಿಪ್‌ ಪಾಯಿಂಟ್‌ ಟೇಬಲ್‌ನಲ್ಲಿ ಭಾರತ ಸದ್ಯ 4ನೇ ಸ್ಥಾನದಲ್ಲಿದೆ.

ಐಪಿಎಲ್ 2021: ಹರಾಜು ಪಟ್ಟಿಯಿಂದ ಹೊರಬಿದ್ದರೂ 'ಅಚ್ಚರಿಯ ಕರೆ'ಯ ನಿರೀಕ್ಷೆಯಲ್ಲಿ ಶ್ರೀಶಾಂತ್ಐಪಿಎಲ್ 2021: ಹರಾಜು ಪಟ್ಟಿಯಿಂದ ಹೊರಬಿದ್ದರೂ 'ಅಚ್ಚರಿಯ ಕರೆ'ಯ ನಿರೀಕ್ಷೆಯಲ್ಲಿ ಶ್ರೀಶಾಂತ್

2019-21ರ ವರೆಗಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿ ಕೊನೇ ಕ್ಷಣದಲ್ಲಿದೆ. ಈ ಅವಧಿಯಲ್ಲಿ ನಡೆದ ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ 1000 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿ ಈ ಸೀಸನ್‌ನ ಫೈನಲ್‌ ಸ್ಪರ್ಧಿಯನ್ನು ನಿರ್ಧರಿಸಲಿದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್‌ ಪ್ರವೇಶಿಸಿದೆ.

Story first published: Saturday, February 13, 2021, 13:57 [IST]
Other articles published on Feb 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X