ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 
ಭಾರತ vs ಇಂಗ್ಲೆಂಡ್: ಒಂದು ವಿಕೆಟ್‌ನಿಂದ ದೊಡ್ಡ ದಾಖಲೆ ತಪ್ಪಿಸಿಕೊಂಡ ಅಕ್ಷರ್ ಪಟೇಲ್

India vs England: Axar patel missed record by 1 wicket

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ ತಾನಾಡಿದ ಪ್ರತಿಯೊಂದು ಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದಾರೆ. ಮೂರನೇ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ ಅದ್ಭುತ ದಾಖಲೆಯನ್ನು ತನ್ನದಾಗಿಸಿಕೊಳ್ಳುವ ಅವಕಾಶವನ್ನು ಹೊಂದಿದ್ದರು. ಆದರೆ ಕೇವಲ ಒಂದು ವಿಕೆಟ್‌ನಿಂದ ಆ ಅವಕಾಶ ಅಕ್ಷರ್ ಪಟೇಲ್ ಕೈ ತಪ್ಪಿದೆ.

ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧ ಆಡಿದ ಅಂತಿಮ ಮೂರು ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದುಕೊಂಡಿದುಕೊಂಡಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡುವ ಅಪೂರ್ವ ಅವಕಾಶ ಅಕ್ಷರ್ ಪಟೇಲ್ ಮುಂದಿತ್ತು. ಆದರೆ ನಾಲ್ಕು ವಿಕೆಟ್‌ ಕಬಳಿಸಿದ ಅಕ್ಷರ್ ಪಟೇಲ್‌ಗೆ ಮತ್ತೊಂದು ವಿಕೆಟ್ ತನ್ನದಾಗಿಸಲು ಸಾಧ್ಯವಾಗಲಿಲ್ಲ.

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

ಸ್ವಲ್ಪದರಲ್ಲಿ ಕೈ ತಪ್ಪಿದ ದಾಖಲೆ

ಸ್ವಲ್ಪದರಲ್ಲಿ ಕೈ ತಪ್ಪಿದ ದಾಖಲೆ

ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧ ಆಡಿದ ಅಂತಿಮ ಮೂರು ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದುಕೊಂಡಿದುಕೊಂಡಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡುವ ಅಪೂರ್ವ ಅವಕಾಶ ಅಕ್ಷರ್ ಪಟೇಲ್ ಮುಂದಿತ್ತು. ಆದರೆ ನಾಲ್ಕು ವಿಕೆಟ್‌ ಕಬಳಿಸಿದ ಅಕ್ಷರ್ ಪಟೇಲ್‌ಗೆ ಮತ್ತೊಂದು ವಿಕೆಟ್ ತನ್ನದಾಗಿಸಲು ಸಾಧ್ಯವಾಗಲಿಲ್ಲ.

ಸತತ 4 ಇನ್ನಿಂಗ್ಸ್‌ಗಳಲ್ಲಿ ಭಜ್ಜಿ ಸಾಧನೆ

ಸತತ 4 ಇನ್ನಿಂಗ್ಸ್‌ಗಳಲ್ಲಿ ಭಜ್ಜಿ ಸಾಧನೆ

2001 ರಲ್ಲಿ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆಯನ್ನು ಮಾಡಿದ್ದರು. ಸ್ಟೀವ್ ವಾ ನೇತೃತ್ವದ ಬಲಿಷ್ಠ ತಂಡಕ್ಕೆ ಹರ್ಭಜನ್ ಸಿಂಗ್ ಅಕ್ಷರಶಃ ಕಂಟಕವಾಗಿ ಪರಿಣಮಿಸಿದ್ದರು. ಆ ಸರಣಿಯ ನಾಲ್ಕು ಪಂದ್ಯಗಳಲ್ಲಿ ಹರ್ಭಜನ್ ಸಿಂಗ್ 28 ವಿಕೆಟ್ ಪಡೆದುಕೊಂಡಿದ್ದರು. ಇದರಲ್ಲಿ ಸತತ 4 ಐದು ವಿಕೆಟ್‌ಗಳ ಗೊಂಚಲು ಸೇರಿತ್ತು.

ಏಕೈಕ ಬೌಲರ್ ಎಂಬ ಹೆಗ್ಗಳಿಕೆ

ಏಕೈಕ ಬೌಲರ್ ಎಂಬ ಹೆಗ್ಗಳಿಕೆ

ಈ ಮೂಲಕ ಸತತ ನಾಲ್ಕು ಐದು ವಿಕೆಟ್‌ಗಳ ಗೊಂಚಲು ಪಡೆದ ಏಕೈಕ ಬೌಲರ್ ಎನಿಸಿದ್ದಾರೆ ಹರ್ಭಜನ್ ಸಿಂಗ್. ಕೊಲ್ಕತ್ತಾ ಟೆಸ್ಟ್‌ನ ಎರಡು ಇನ್ನಿಂಗ್ಸ್‌ಗಳಲ್ಲಿ 7/123 ಹಾಗೂ 6/73 ಮತ್ತು ಚೆನ್ನೈ ಪಂದ್ಯದಲ್ಲಿ 7/133 ಹಾಗೂ 8/84 ವಿಕೆಟ್ ಪಡೆದು ಸಾಧನೆ ಮಾಡಿದ್ದರು.

Story first published: Thursday, March 4, 2021, 17:25 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X