ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ

India vs England: BCCI hoping to get in fans at Motera, Pune

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕ್ರಿಕೆಟ್ ಅಭಿಮಾನಿಗಳಿಗೆ ಸ್ಟೇಡಿಯಂ ಒಳಗೆ ಪ್ರವೇಶ ನೀಡಲು ಸಿದ್ಧತೆ ನಡೆಸುತ್ತಿದೆ. ಕೊರೊನಾವೈರಸ್ ಭೀತಿ ಶುರುವಾದಾಗಿನಿಂದ ಭಾರತದಲ್ಲಿ ಹೆಚ್ಚಿನ ಕ್ರೀಡಾಸ್ಪರ್ಧೆಗಳು ಖಾಲಿ ಸ್ಟೇಡಿಯಂನಲ್ಲೇ ನಡೆಯುತ್ತಿವೆ.

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮುಂದೂಡಿದ ಐಸಿಸಿವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮುಂದೂಡಿದ ಐಸಿಸಿ

ಮುಂಬರಲಿರುವ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ ಸರಣಿ ವೇಳೆ ಅಹ್ಮದಾಬಾದ್ ಮತ್ತು ಪೂಣೆ ಸ್ಟೇಡಿಯಂ ಒಳಗೆ ಕ್ರಿಕೆಟ್ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಬಿಸಿಸಿಐ ಯೋಚಿಸುತ್ತಿದೆ. ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಸಿಕ್ಕರೆ ಕೊರೊನಾ ಬಳಿಕ ಮತ್ತೆ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದು ಪಂದ್ಯ ಕಣ್ತುಂಬಿಕೊಳ್ಳಬಹುದಾಗಿದೆ.

ಇಂಗ್ಲೆಂಡ್ ವಿರುದ್ಧ ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಚೆನ್ನೈನಲ್ಲಿ ನಡೆಯಲಿದ್ದ ಮೊದಲ ಎರಡು ಪಂದ್ಯಗಳ ವೇಳೆ ಸ್ಟೇಡಿಯಂ ಒಳಗೆ ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಬಿಸಿಸಿಐ ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್ (ಟಿಎನ್‌ಸಿಎ) ಅನ್ನು ಕೋರಿಕೊಂಡಿತ್ತು. ಆದರೆ ತಮಿಳುನಾಡು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಭಾರತ-ಭಾರತ 'ಎ' ಮಧ್ಯೆ ಪಂದ್ಯಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಭಾರತ-ಭಾರತ 'ಎ' ಮಧ್ಯೆ ಪಂದ್ಯ

ಹೀಗಾಗಿ ಮುಂದಿನ ಎರಡು ಟೆಸ್ಟ್ ಪಂದ್ಯಗಳ ವೇಳೆ ಸ್ಟೇಡಿಯಂ ಒಳಗೆ ಅಭಿಮಾನಿಗಳನ್ನು ಕರೆತರು ಬಿಸಿಸಿಐ ಯೋಚಿಸುತ್ತಿದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳು ಮತ್ತು ಐದು ಪಂದ್ಯಗಳ ಟಿ20ಐ ನಡೆಯುವ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂ ಮತ್ತು ಮೂರು ಏಕದಿನ ಪಂದ್ಯಗಳು ನಡೆಯುವ ಪೂಣೆ ಸ್ಟೇಡಿಯಂನಲ್ಲಿ ಶೇ. 50ರಷ್ಟು ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.

Story first published: Thursday, January 28, 2021, 10:55 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X