IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಡುವ ಬಳಗ ಘೋಷಿಸಿದ ಇಂಗ್ಲೆಂಡ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಶುಕ್ರವಾರ ಆರಂಭವಾಗಲಿದೆ. ಈ ಪಂದ್ಯದ ಆರಂಭಕ್ಕೆ ಒಂದು ದಿನ ಮುನ್ನ ಇಂಗ್ಲೆಂಡ್ ತಂಡ ತನ್ನ ಆಡುವ ಬಳಗವನ್ನು ಘೋಷಣೆ ಮಾಡಿದೆ. ನ್ಯೂಜಿಲೆಂಡ್ ತಂಡದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆದಿರುವ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡ ಭಾರತದ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ.

ಈ ಟೆಸ್ಟ್ ಪಂದ್ಯದಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಇಂಗ್ಲೆಂಡ್ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸರಣಿಯನ್ನು ಸಮಬಲಗೊಳಿಸಲು ಯಶಸ್ವಿಯಾಗುತ್ತದೆ. ಆದರೆ ಭಾರತ ತಂಡ ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಗೊಳಿಸಿದರೂ ಸರಣಿಯನ್ನು ವಶಕ್ಕೆ ಪಡೆಯುವ ಅವಕಾಶವಿದೆ.

IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!

ತಂಡಕ್ಕೆ ಮರಳಿದ ಅನುಭವಿ ಆಂಡರ್ಸನ್

ತಂಡಕ್ಕೆ ಮರಳಿದ ಅನುಭವಿ ಆಂಡರ್ಸನ್

ಐದನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧ ಆಡಲಿರುವ 11 ಆಟಗಾರರ ತಂಡವನ್ನು ಘೋಷಣೆ ಮಾಡಿದೆ. ಈ ಆಡುವ ಬಳಗದಲ್ಲಿ ಅನುಭವಿ ಆಟಗಾರ ಜೇಮ್ಸ್ ಆಂಡರ್ಸನ್ ಮತ್ತೆ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆಂಡರ್ಸನ್ ಆಡುವ ಬಳಗದಿಂದ ಹೊರಗುಳಿದಿದ್ದರು.

ಇಂಗ್ಲೆಂಡ್ ಆಡುವ ಬಳಗ ಹೀಗಿದೆ

ಇಂಗ್ಲೆಂಡ್ ಆಡುವ ಬಳಗ ಹೀಗಿದೆ

ಇಂಗ್ಲೆಂಡ್ XI: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ಭಾರತ ತಂಡಕ್ಕೆ ಸವಾಲು

ಭಾರತ ತಂಡಕ್ಕೆ ಸವಾಲು

ಇನ್ನು ಭಾರತ ತಂಡದ ಆಡುವ ಬಳಗ ಅಂತಿಮ ಗೊಳಿಸಲು ಮ್ಯಾನೇಜ್‌ಮೆಂಟ್ ಗುರುವಾರ ಸಂಜೆಯವರೆಗೂ ಕಾದುನೋಡುವ ತಂತ್ರದ ಮೊರೆ ಹೋಗಿದೆ. ನಾಯಕ ರೋಹಿತ್ ಶರ್ಮಾ ಕೋವಿಡ್‌ಗೆ ತುತ್ತಾಗಿರುವ ಕಾರಣ ಇನ್ನೂ ಗುರುವಾರ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ರೋಹಿತ್ ಶರ್ಮಾ ಒಳಗಾಗಲಿದ್ದು ನೆಗೆಟಿವ್ ವರದಿ ಪಡೆದರೆ ಈ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇಲ್ಲವಾದಲ್ಲಿ ಜಸ್ಪ್ರೀತ್ ಬೂಮ್ರಾ ನಾಯಕನಾಗಿ ಮುನ್ನಡೆಸುವ ಸಾಧ್ಯತೆಯಿದೆ.

ಭಾರತ ಟೆಸ್ಟ್ ಸ್ಕ್ವಾಡ್

ಭಾರತ ಟೆಸ್ಟ್ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

For Quick Alerts
ALLOW NOTIFICATIONS
For Daily Alerts
Story first published: Thursday, June 30, 2022, 17:41 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X