ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೆಸ್ಟ್‌ ಗೆಲುವಿನಲ್ಲಿ ಟೀಮ್ ಇಂಡಿಯಾ ದಾಖಲೆ

India vs England: Biggest Test wins for India (By Runs)-List

ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ 317 ರನ್‌ಗಳ ಭರ್ಜರಿ ರನ್ ಜಯ ಗಳಿಸಿದೆ. ಚೆನ್ನೈಯ ಎಂಎ ಸ್ಟೇಡಿಯಂನಲ್ಲಿ ಮಂಗಳವಾರ (ಫೆಬ್ರವರಿ 16) ಮುಕ್ತಾಯಗೊಂಡ ಎರಡನೇ ಟೆಸ್ಟ್‌ನಲ್ಲಿನ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-1ರ ಸಮಬಲ ಸಾಧಿಸಿದೆ. ದೊಡ್ಡ ಸಂಖ್ಯೆಯ ರನ್‌ನಿಂದ ಪಂದ್ಯ ಗೆದ್ದಿರುವುದರಿಂದ ಭಾರತದ ಹೆಸರಿನಲ್ಲಿ ದಾಖಲೆಯೂ ನಿರ್ಮಾಣವಾಗಿದೆ.

ಗೆಲುವಿನೊಂದಿಗೆ ಐಸಿಸಿ WTC ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತಗೆಲುವಿನೊಂದಿಗೆ ಐಸಿಸಿ WTC ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಭಾರತ

ಚೆನ್ನೈನಲ್ಲೇ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ 227 ರನ್ ಜಯ ಕಂಡಿತ್ತು. ಆ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿದೆ. ತೃತೀಯ ಪಂದ್ಯ ಫೆಬ್ರವರಿ 24ರಿಂದ ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.

ಬದಲಾಗಲಿದೆ ಕಿಂಗ್ಸ್ XI ಪಂಜಾಬ್ ಹೆಸರು: 'ಈ' ಹೆಸರಿನೊಂದಿಗೆ ಕಣಕ್ಕಿಳಿಯಲಿದೆ ಪಂಜಾಬ್ ತಂಡಬದಲಾಗಲಿದೆ ಕಿಂಗ್ಸ್ XI ಪಂಜಾಬ್ ಹೆಸರು: 'ಈ' ಹೆಸರಿನೊಂದಿಗೆ ಕಣಕ್ಕಿಳಿಯಲಿದೆ ಪಂಜಾಬ್ ತಂಡ

ದ್ವಿತೀಯ ಪಂದ್ಯದಲ್ಲಿನ ರನ್‌ ಗೆಲುವು, ಭಾರತದ ಗೆಲುವುಗಳಲ್ಲೇ ಅತ್ಯಧಿಕ 5ನೇ ರನ್ ಗಲುವಾಗಿ ಗುರುತಿಸಿಕೊಂಡಿದೆ.

ರೋಹಿತ್, ಅಶ್ವಿನ್ ಶತಕ

ರೋಹಿತ್, ಅಶ್ವಿನ್ ಶತಕ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಶತಕದೊಂದಿಗೆ 329 ರನ್ ಗಳಿಸಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 134 ರನ್ ಬಾರಿಸಿ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ, ಆರ್‌ ಅಶ್ವಿನ್ ಶತಕದ ಕೊಡುಗೆಯೊಂದಿಗೆ 286 ರನ್ ಬಾರಿಸಿದರೆ ಇಂಗ್ಲೆಂಡ್ 164 ರನ್ ಬಾರಿಸಿ ತಲೆ ಬಾಗಿತ್ತು.

ಅಶ್ವಿನ್, ಅಕ್ಸರ್ ಮಾರಕ ಬೌಲಿಂಗ್

ಅಶ್ವಿನ್, ಅಕ್ಸರ್ ಮಾರಕ ಬೌಲಿಂಗ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲಿಂಗ್ ಆಲ್ ರೌಂಡರ್ ಆರ್ ಅಶ್ವಿನ್ 5 ವಿಕೆಟ್ ಪಡೆದಿದ್ದರು. ಇಶಾಂತ್ ಶರ್ಮಾ 2, ಅಕ್ಸರ್ ಪಟೇಲ್ 2 ವಿಕೆಟ್ ಪಡೆದ್ದರು. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಕ್ಸರ್ ಪಟೇಲ್ 5, ಆರ್ ಅಶ್ವಿನ್ 3, ಕುಲದೀಪ್ ಯಾದವ್ 2 ವಿಕೆಟ್‌ನೊಂದಿಗೆ ಗಮನ ಸೆಳೆದಿದ್ದರು.

ಭಾರತದ ಭರ್ಜರಿ ಗೆಲುವುಗಳ ಪಟ್ಟಿ

ಭಾರತದ ಭರ್ಜರಿ ಗೆಲುವುಗಳ ಪಟ್ಟಿ

* 337 ರನ್ ಜಯ, ದಕ್ಷಿಣ ಆಫ್ರಿಕಾ ವಿರುದ್ಧ, ನವದೆಹಲಿ, 2015/16
* 320 ರನ್ ಜಯ, ನ್ಯೂಜಿಲೆಂಡ್ ವಿರುದ್ಧ, ಇಂದೋರ್, 2016/17
* 320 ರನ್ ಗೆಲುವು, ಆಸ್ಟ್ರೇಲಿಯಾ ವಿರುದ್ಧ, ಮೊಹಾಲಿ, 2008/09
* 318 ರನ್ ವಿಜಯ, ವೆಸ್ಟ್ ಇಂಡೀಸ್ ವಿರುದ್ಧ, ನಾರ್ತ್ ಸೌಂಡ್, 2019
* 317 ರನ್ ಗೆಲುವು, ಇಂಗ್ಲೆಂಡ್ ವಿರುದ್ಧ, ಚೆನ್ನೈ, 2020/21
* 304 ರನ್ ಜಯ, ಶ್ರೀಲಂಕಾ ವಿರುದ್ಧ, ಗ್ಯಾಲೆ, 2017
(ಮೇಲಿನ 6 ಗೆಲುವುಗಳಲ್ಲಿ 5 ಜಯ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಬಂದಿದ್ದು).

Story first published: Tuesday, February 16, 2021, 19:31 [IST]
Other articles published on Feb 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X