ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಭರ್ಜರಿ ಗೆಲುವಿಗೆ ದಿಗ್ಗಜರ ಪ್ರತಿಕ್ರಿಯೆ ಹೇಗಿದೆ ನೋಡಿ!

India vs England: Cricketing world lauds Indias Test Win at Lords
ಲಾರ್ಡ್ಸ್ ಬಾಲ್ಕನಿಯಲ್ಲಿ ನಾಗಿನ್ ಡ್ಯಾನ್ಸ್ ಮಾಡಿ ನಕ್ಕು ನಲಿಸಿದ ಕೊಹ್ಲಿ | Oneindia Kannada

ಲಂಡನ್: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಅನೇಕ ಕ್ರಿಕೆಟ್‌ ತಾರೆಯರು ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಭಾರತದ ಗೆಲುವಿಗೆ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಸೋಮವಾರ (ಆಗಸ್ಟ್ 16) ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ 151 ರನ್ ಗೆಲುವಿಗೆ ಕ್ರಿಕೆಟ್ ಕ್ಷೇತ್ರದ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ಸಚಿನ್, ಕೊಹ್ಲಿ, ಪಾಂಟಿಂಗ್, ಎಬಿಡಿ; ಯಾರೂ ಮಾಡಿರದ ಸಾಧನೆ ಮಾಡಿದ ಮೊಹಮ್ಮದ್ ಶಮಿ!ಸಚಿನ್, ಕೊಹ್ಲಿ, ಪಾಂಟಿಂಗ್, ಎಬಿಡಿ; ಯಾರೂ ಮಾಡಿರದ ಸಾಧನೆ ಮಾಡಿದ ಮೊಹಮ್ಮದ್ ಶಮಿ!

ಅಸಲಿಗೆ ಭಾರತ ಸೋಲುವುದರಲ್ಲಿದ್ದ ಪಂದ್ಯವದು. ದ್ವಿತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ 27 ರನ್ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತದ ಬ್ಯಾಟಿಂಗ್‌ ವಿಭಾಗದಿಂದ ಗಮನಾರ್ಹ ರನ್ ಬಂದಿರಲಿಲ್ಲ. ಆದರೆ ಭಾರತೀಯ ತಂಡದ ವೀರೋಚಿತ ಹೋರಾಟದಿಂದ ವಿರಾಟ್ ಕೊಹ್ಲಿ ಪಡೆ ದ್ವಿತೀಯ ಪಂದ್ಯ ಗೆದ್ದು ಐದು ಪಂದ್ಯಗಳ ಈ ಟೆಸ್ಟ್‌ ಸರಣಿಯಲ್ಲಿ 1-0ಯ ಮುನ್ನಡೆ ಪಡೆದುಕೊಂಡಿದೆ.

ಪಂದ್ಯದ ಪ್ರತೀ ಕ್ಷಣವನ್ನೂ ಸಂಭ್ರಮಿಸಿದೆ

ಟೀಮ್ ಇಂಡಿಯಾದ ಅಭೂತಪೂರ್ವ ಗೆಲುವಿಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. 'ಇದು ಅದ್ಭುತ ಟೆಸ್ಟ್‌ ಪಂದ್ಯಗಳಲ್ಲಿ ಒಂದು. ಪಂದ್ಯದ ಪ್ರತೀ ಕ್ಷಣವನ್ನೂ ನಾನು ಎಂಜಾಯ್ ಮಾಡಿದೆ. ಕಷ್ಟದ ಸಮಯದಲ್ಲೂ ಪ್ರತಿರೋಧ ಒಡ್ಡಿ ಪಂದ್ಯ ಗೆದ್ದ ಟೀಮ್ ಇಂಡಿಯಾ ನನಗೆ ಸ್ಫೂರ್ತಿ ತುಂಬುತ್ತಿದೆ. ತುಂಬಾ ಚೆನ್ನಾಗಿ ಆಡಿದ್ದೀರಿ' ಎಂದು ಟೀಮ್ ಇಂಡಿಯಾ ಆಟಗಾರರು ಸಂಭ್ರಮಾಚರಿಸುತ್ತಿರುವ ಚಿತ್ರ ಹಾಕಿಕೊಂಡಿರುವ ಸಚಿನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ತಂಡದ ಸಂಕ್ಷಿಪ್ತ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 109.3 ಓವರ್‌ಗೆ 8 ವಿಕೆಟ್ ಕಳೆದು 298 ರನ್ ಗಳಿಸಿತ್ತು. ಇಂಗ್ಲೆಂಡ್ ಗೆಲುವಿಗೆ 272 ರನ್ ಗುರಿ ನೀಡಲಾಗಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ನಲ್ಲಿ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 51.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 120 ರನ್ ಬಾರಿಸಿ 151 ರನ್‌ನಿಂದ ಶರಣಾಯ್ತು. ಭಾರತದ ಗೆಲುವಿಗೆ ಮುಖ್ಯ ಕಾರಣವೆನಿಸಿದ್ದು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳಾದ ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬೂಮ್ರಾ ಅದ್ಭುತ ಜೊತೆಯಾಟದೊಂದಿಗೆ 90 ರನ್ ಕೊಡುಗೆ ನೀಡಿತ್ತು. ಇದರಿಂದ ಒತ್ತಡಕ್ಕೀಡಾದ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೇಗನೆ ವಿಕೆಟ್‌ಗಳನ್ನು ಕಳೆದುಕೊಂಡಿತು.
(ಮೇಲೆ ಭಾರತದ ಕ್ರಿಕೆಟರ್ ದಿನೇಶ್ ಕಾರ್ತಿಕ್ ಟ್ವೀಟ್ ಇದೆ)

ಬಂಗಾಳ ಹುಲಿ ಸೌರವ್ ಗಂಗೂಲಿ ಟ್ವೀಟ್

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷರಾಗಿರುವ, ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಟ್ವೀಟ್ ಮೂಲಕ ಭಾರತದ ಗೆಲುವಿಗೆ ಖುಷಿ ತೋರಿಕೊಂಡಿದ್ದಾರೆ. 'ಭಾರತದಿಂದ ಅದ್ಭುತ ಗೆಲುವಿದು. ಟೀಮ್ ಇಂಡಿಯಾದಿಂದ ಅದೇನು ವಿರೋಚಿತ ನಡತೆ, ಜಿದ್ದು ಕಾಣಸಿಕ್ಕಿತು. ಹತ್ತಿರದಿಂದ ಪ್ರತಿಯೊಬ್ಬರನ್ನೂ ನೋಡೋದು ಒಂದು ಖುಷಿಯ ಕ್ಷಣವಾಗಿತ್ತು' ಎಂದು ದಾದಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಪಂದ್ಯ ನಡೆಯುವಾಗ ಗಂಗೂಲಿ ಸ್ಟೇಡಿಯಂನಲ್ಲೇ ಉಪಸ್ಥಿತರಿದ್ದರು. ಗಂಗೂಲಿ ಜೊತೆಗೆ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಕೂಡ ಇದ್ದರು.
(ಇದೇ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ನ ದ್ವಿತೀಯ ಅರ್ಧ ಶತಕವನ್ನು ಮೊಹಮ್ಮದ್ ಶಮಿ ಸಿಕ್ಸ್ ಬಾರಿಸುವ ಮೂಲಕ ಪೂರೈಸಿದ್ದಾರೆ. ಪಂದ್ಯದಲ್ಲಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಶಮಿ ಅದ್ಭುತ ಜೊತೆಯಾಟಕ್ಕಾಗಿಯೂ ದಾಖಲೆ ನಿರ್ಮಿಸಿದ್ದಾರೆ. ಇಬ್ಬರೂ 90 ರನ್‌ಗಳ ಜೊತೆಯಾಟ ನೀಡಿದ ಬಳಿಕ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಅಂದ್ಹಾಗೆ ಇದಕ್ಕೂ ಮುನ್ನ ಶಮಿ 2014ರಲ್ಲಿ ನ್ಯಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ 51 ರನ್ ಬಾರಿಸಿದ್ದರು. ಇದು ಟೆಸ್ಟ್‌ನಲ್ಲಿ ಶಮಿ ಬಾರಿಸಿದ್ದ ಮೊದಲನೇ ಶತಕವಾಗಿತ್ತು.)

ವೆರಿ ವೆರಿ ಸ್ಪೆಶಲ್ ಪ್ರತಿಕ್ರಿಯೆ

ಟೀಮ್ ಇಂಡಿಯಾದ ವೆರಿ ವೆರಿ ಸ್ಪೆಶಲ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಟ್ವೀಟ್‌ನಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಆಟ ಮೆಚ್ಚಿಕೊಳ್ಳಲಾಗಿದೆ. 'ಟೆಸ್ಟ್‌ ಮ್ಯಾಚ್ ಕ್ರಿಕೆಟ್‌ನಲ್ಲಿ ಅದೆಂತ ವಿಶೇಷ ದಿನವಿದು. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಗಳ ಕಾಲ ನೆನಪಿಟ್ಟುಕೊಳ್ಳುವ ಅಪರೂಪದ ಟೆಸ್ಟ್‌ ಕ್ಷಣವೂ ಇದು. ಬೂಮ್ರಾ ಮತ್ತು ಶಮಿ ದಿನದ ಆರಂಭದಲ್ಲಿ ಬ್ಯಾಟ್‌ ಮೂಲಕ ಹೋರಾಡಿದ್ದು, ವೇಗದ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವರ ದಾಳಿ ಎಲ್ಲವೂ ಇಲ್ಲಿ ಉಲ್ಲೇಖಾರ್ಹ. ಅದರಲ್ಲೂ ಶಮಿ ಅವರ ಎಲ್ಲಾ ಪ್ರಯತ್ನವನ್ನು ಭಾರತಕ್ಕೆ ಕೊಟ್ಟರು. ಅಂತೂ ಭಾರತ ಭಾವನಾತ್ಮಕ ಗೆಲುವಿಗೆ ಸಾಕ್ಷಿಯಾಗಿದೆ' ಎಂದು ಲಕ್ಷ್ಮಣ್ ಬರೆದುಕೊಂಡಿದ್ದಾರೆ.

ಸ್ಪಿನ್ ದಂತಕತೆ ಶೇನ್ ವಾರ್ನ್ ಟ್ವೀಟ್

ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಸಹ ಟ್ವೀಟ್‌ ಮೂಲಕ ಭಾರತದ ಗೆಲುವಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಲಾರ್ಡ್ಸ್ ನಲ್ಲಿ ಅದ್ ಯಾವ ಅದ್ಭುತ ಟೆಸ್ಟ್ ಪಂದ್ಯವಿದು. ಉತ್ತಮ ಪಿಚ್, ಉತ್ತಮ ಕ್ರಿಕೆಟ್ ಮತ್ತು ಭಾರತ ತೋರಿಸಿದ ಪಾತ್ರವೂ ಉತ್ತಮವಾಗಿತ್ತು. ನೆನಪಿರಲಿ ಅವರು ಟಾಸ್ ಸೋತರು, ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟರು, (ಇಂಗ್ಲೆಂಡ್) 1ನೇ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡರು. ಭಾರತ ಅಪರೂಪದ ಗೆಲುವು ಸಾಧಿಸಿದೆ! ಭಾರತ ಕಠಿಣ ಹೋರಾಟ ಮಾಡಿ ಗೆಲುವಿಗೆ ಅರ್ಹವಾಗಿದೆ. ಭಾರತ 2-0 ಮುನ್ನಡೆ ಸಾಧಿಸಬೇಕು. ಈ ಟೆಸ್ಟ್‌ ಕ್ರಿಕೆಟ್ ತುಂಬಾ ಇಷ್ಟವಾಯ್ತು. ಎಂದು ವಾರ್ನ್ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್ ಮಾಜಿ ನಾಯಕ ಮೆಚ್ಚುಗೆ

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಅದ್ಭುತ ಕ್ರಿಕೆಟ್ ಪಂದ್ಯ. ಇಂಗ್ಲೆಂಡ್‌ಗಿಂತ ಭಾರತ ಯಾಕೆ ಉತ್ತಮ ತಂಡ ಅನ್ನೋದನ್ನು ಅವರು ತೋರಿಕೊಟ್ಟಿದ್ದಾರೆ. ಗೆಲುವಿನ ಬಗ್ಗೆ ಟೀಮ್ ಇಂಡಿಯಾಕ್ಕಿದ್ದ ನಂಬಿಕೆ ಬೆಲೆಕಟ್ಟಲಾರದ್ದು' ಎಂದು ವಾನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
(9ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಶಮಿ ಮತ್ತು 10ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದ ಜಸ್‌ಪ್ರೀತ್‌ ಬೂಮ್ರಾ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಶಮಿ 70 ಎಸೆತಗಳಲ್ಲಿ 56 ರನ್ ಬಾರಿಸಿದ್ದರೆ, ಬೂಮ್ರಾ 64 ಎಸೆತಗಳಲ್ಲಿ 34 ರನ್ ಬಾರಿಸಿದರು. ಶಮಿ 56 ಎಸೆತಗಳಲ್ಲಿ 6 ಫೋರ್ಸ್, 1 ಸಿಕ್ಸರ್ ಸೇರಿತ್ತು. ಶಮಿ, ಬೂಮ್ರಾ ಬ್ಯಾಟಿಂಗ್‌ನಿಂದಲೇ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 109.3 ಓವರ್‌ಗೆ 8 ವಿಕೆಟ್‌ ನಷ್ಟದಲ್ಲಿ 298 ರನ್ ಗಳಿಸಿತ್ತು).

Story first published: Tuesday, August 17, 2021, 14:52 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X