ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂತ್ ಬ್ಯಾಟ್ ತಾಗಿದ ಚೆಂಡು ಬೌಂಡರಿ ಹೋದರೂ ರನ್‌ ಇಲ್ಲ, ಇಲ್ಲಿದೆ ಅಸಲಿ ಕಾರಣ!

India vs England: Dead ball clause of DRS under scrutiny after Rishabh Pant denied four runs

ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್‌ಗಳ ಜಯ ದಾಖಲಿಸಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯೀಗ ರೋಚಕ ಹಂತಕ್ಕೆ ತಲುಪಿದೆ. ಸರಣಿಯೀಗ 1-1ರಿಂದ ಸಮಬಲಗೊಂಡಿರುವುದರಿಂದ ಮಾರ್ಚ್ 28ರಂದು ನಡೆಯುವ ತೃತೀಯ ಪಂದ್ಯ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಸ್ಟೇಡಿಯಂನಲ್ಲಿ ನಿರ್ಣಾಯಕ ಪಂದ್ಯ 1.30 pmಗೆ ಆರಂಭಗೊಳ್ಳಲಿದೆ.

ಗ್ರೇಮ್‌ಸ್ಮಿತ್ ದಾಖಲೆ ಸರಿಗಟ್ಟಿದ ಭಾರತದ ನಾಯಕ ವಿರಾಟ್ ಕೊಹ್ಲಿಗ್ರೇಮ್‌ಸ್ಮಿತ್ ದಾಖಲೆ ಸರಿಗಟ್ಟಿದ ಭಾರತದ ನಾಯಕ ವಿರಾಟ್ ಕೊಹ್ಲಿ

ಶುಕ್ರವಾರ ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ವಿವಾದವೊಂದು ಕಾಣಿಸಿಕೊಂಡಿತ್ತು. ಭಾರತದ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಬ್ಯಾಟ್ ತಾಗಿದ ಚೆಂಡು ಬೌಂಡರಿ ಗೆರೆ ದಾಟಿತ್ತಾದರೂ ತಂಡಕ್ಕೆ 4 ರನ್ ಸೇರ್ಪಡೆಯಾಗಿರಲಿಲ್ಲ. ಇದಕ್ಕೆ ಅಸಲಿ ಕಾರಣ ಏನು ಅನ್ನೋದರ ವಿವರಣೆ ಇಲ್ಲಿದೆ.

ಪಂತ್ ಸ್ಫೋಟಕ ಅರ್ಧ ಶತಕ

ಪಂತ್ ಸ್ಫೋಟಕ ಅರ್ಧ ಶತಕ

ದೀರ್ಘ ಸಮಯದ ಬಳಿಕ ಏಕದಿನ ತಂಡದಲ್ಲಿ ಆಡಿದ್ದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ರಿಷಭ್ ಪುಣೆ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. 40 ಎಸೆತಗಳಲ್ಲಿ 77 ರನ್ ಕೊಡುಗೆ ನೀಡಿದ್ದರು. ಇದರಲ್ಲಿ 3 ಫೋರ್ಸ್, 7 ಸಿಕ್ಸರ್ ಸೇರಿತ್ತು (ಪಂದ್ಯದ ಸಂಕ್ಷಿಪ್ತ ಸ್ಕೋರ್‌: ಭಾರತ 336 ರನ್, 6 wkts, 50 Ov, ಇಂಗ್ಲೆಂಡ್: 337 ರನ್, 4 wkts, 43.3 Ov). ಐಪಿಎಲ್‌ನಲ್ಲಿ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ನ ಪ್ರಮುಖ ಬ್ಯಾಟ್ಸ್‌ಮನ್‌.

ಔಟಾಗದೆ ಉಳಿದಿದ್ದ ಪಂತ್

40ನೇ ಓವರ್‌ನಲ್ಲಿ ಟಾಮ್ ಕರನ್ ಎಸೆತದ ವೇಳೆ ಪಂತ್‌ ಅವರನ್ನು ಲೆಗ್‌ ಬಿಫೋರ್ ವಿಕೆಟ್ (ಎಲ್‌ಬಿಡಬ್ಲ್ಯೂ) ಎಂದು ಔಟ್ ತೀರ್ಪು ನೀಡಲಾಗಿತ್ತು. ಪಂತ್ ಕೂಡಲೇ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ಮೊರೆ ಹೋದರು. ರಿಪ್ಲೇ ಗಮನಿಸಿದಾಗ ಅದರಲ್ಲಿ ಚೆಂಡು ಪಂತ್‌ ಅವರ ಕ್ರಿಕೆಟ್‌ ಬ್ಯಾಟ್‌ಗೆ ತಾಗಿದ್ದು ಕಾಣಿಸಿತ್ತು. ಹೀಗಾಗಿ ಔಟ್ ತೀರ್ಪನ್ನು ರಿವರ್ಸ್ ಮಾಡುವಂತೆ ಆನ್ ಫೀಲ್ಡ್‌ ಅಂಪೈರ್‌ಗೆ ಸೂಚಿಸಲಾಯ್ತು. ಪಂತ್‌ ಔಟಾಗದೆ ಉಳಿದರು. ಆದರೆ ಬ್ಯಾಟ್ ತಾಗಿ ಬೌಂಡರಿ ಗೆರೆ ತಾಗಿದ್ದ ಚೆಂಡಿಗೆ 4 ರನ್ ನೀಡಲಿಲ್ಲ. ಇದರ ಬಗ್ಗೆ ಪಂತ್ ಮುಖದಲ್ಲೂ ಅಸಮಾಧಾನ ಸುಳಿದಾಡಿತ್ತು.

ತಂಡಕ್ಕೆ ಯಾಕೆ ರನ್ ನೀಡಲಿಲ್ಲ?

ತಂಡಕ್ಕೆ ಯಾಕೆ ರನ್ ನೀಡಲಿಲ್ಲ?

ಬ್ಯಾಟ್ ತಾಗಿ ಚೆಂಡು ಬೌಂಡರಿ ಗೆರೆ ತಾಗಿದ್ದರೂ ತಂಡಕ್ಕೆ ರನ್ ಸೇರ್ಪಡೆಯಾಗದಿರುವುದಕ್ಕೆ ವಿಚಿತ್ರ ಕಾರಣವಿದೆ. ಐಸಿಸಿಯ ಡಿಆರ್‌ಎಸ್ ಶರತ್ತು 3.7ರ ಪ್ರಕಾರ, 'ಒಬ್ಬ ಆಟಗಾರ ರಿವ್ಯೂಗೆ ವಿನಂತಿ ಮಾಡಿಕೊಂಡರೆ, ಅಸಲಿ ತೀರ್ಪು ಔಟ್ ಇದ್ದಿದ್ದು ನಾಟ್‌ಔಟ್ ಎಂದು ಬದಲಾದಾಗ, ಒರಿಜಿನಲ್ ತೀರ್ಪು ಬದಲಾದ ಕೂಡಲೇ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ. ಬ್ಯಾಟಿಂಗ್ ತಂಡಕ್ಕೆ ಔಟ್‌ಗೆ ಬದಲಾಗಿ ನಾಟ್‌ಔಟ್ ಲಾಭ ಸಿಗುತ್ತದೆ. ಆದರೆ ಯಾವುದೇ ರನ್‌ನ ಲಾಭ ಸಿಗುವುದಿಲ್ಲ,' ಎಂದಿದೆ. ಹೀಗಾಗಿಯೇ ಪಂತ್‌ ಬ್ಯಾಟ್ ತಾಗಿದ ಚೆಂಡು ಬೌಂಡರಿ ಗೆರೆ ದಾಟಿದ್ದರೂ ತಂಡಕ್ಕೆ ರನ್ ಸೇರ್ಪಡೆಯಾಗಿರಲಿಲ್ಲ.

Story first published: Saturday, March 27, 2021, 16:31 [IST]
Other articles published on Mar 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X