ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತವನ್ನು ಭಾರತದಲ್ಲೇ ಮಣಿಸಿದರೆ ಅದೊಂದು ಶ್ರೇಷ್ಠ ಸಾಧನೆ: ಮಾರ್ಕ್‌ವುಡ್

India vs England: defeating India in India will be a great achievement - Mark Wood
ನಾಲ್ಕನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಆಡುವ 11 ಹೀಗಿರಲಿದೆ | Oneindia Kannada

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಗುರುವಾರ ನಡೆಯಲಿದೆ. ಈ ಪಂದ್ಯ ಆತಿಥೇಯ ಭಾರತ ತಂಡಕ್ಕೆ ಬಹಳ ಮಹತ್ವದ್ದಾಗಿದ್ದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಟಿ20 ಕ್ರಿಕೆಟ್‌ನ ನಂಬರ್ 1 ತಂಡವಾಗಿರುವ ಇಂಗ್ಲೆಂಡ್ ಭಾರತವನ್ನು ಮಣಿಸಿ ಸರಣಿಯನ್ನು ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಈ ಬಗ್ಗೆ ಇಂಗ್ಲೆಂಡ್ ವೇಗಿ ಮಾರ್ಕ್‌ವುಡ್ ಪ್ರತಿಕ್ರಿಯಿಸಿದ್ದು ಭಾರತದವನ್ನು ಮಣಿಸಿದರೆ ಅದು ಶ್ರೇಷ್ಠ ಸಾಧನೆಯಾಗಿರಲಿದೆ ಎಂದು ಹೇಳಿದ್ದಾರೆ.

"ಭಾರತವನ್ನು ಭಾರತದ ನೆಲದಲ್ಲಿ ಮಣಿಸಿದರೆ ಅದೊಂದು ಅದ್ಭುತವಾದ ಸಾಧನೆಯಾಗಲಿದೆ. ಅದು ಉತ್ಕೃಷ್ಟವಾದ ತಂಡವನ್ನು ಹೊಂದಿದೆ. ಇದು ನಮಗೆ ಮುಂದಿನ ಬೇಸಿಗೆಗೆ ಹಾಗೂ ವಿಶ್ವಕಪ್‌ಗೆ ಮುನ್ನುಗ್ಗಲು ದೊಡ್ಡ ಬಲವನ್ನು ಇಲ್ಲಿಂದಲೇ ನೀಡಲಿದೆ" ಎಂದು ಮಾರ್ಕ್‌ವುಡ್ ಹೇಳೀಕೆಯನ್ನು ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಪಟ್ಟಿಯಲ್ಲಿ ಕೊಹ್ಲಿಯೇ ಮುಂದು!ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಪಟ್ಟಿಯಲ್ಲಿ ಕೊಹ್ಲಿಯೇ ಮುಂದು!

"ಹಾಗಿದ್ದರೂ ನಾವು ಕೆಲ ವಿಭಿನ್ನ ಸಂಗತಿಗಳನ್ನು ಮತ್ತು ಕೆಲ ವಿಭಿನ್ನ ನಿಯಮಗಳನ್ನು ಆಟಗಾರರ ಮೇಲೆ ಪ್ರಯೋಗಿಸಲಿದ್ದೇವೆ. 50 ಓವರ್‌ಗಳ ವಿಶ್ವಕಪ್‌ಗೂ ಮುನ್ನ ಇಂತಾ ಸಾಧ್ಯತೆಗಳನ್ನು ಮಾಡಲು ಇದೊಂದು ಅವಕಾಶ. ಇದು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ" ಎಂದು ಇಂಗ್ಲೆಂಡ್ ತಂಡದ ವೇಗಿ ಮಾರ್ಕ್‌ವುಡ್ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು 3ನೇ ಟಿ20 ಪಂದ್ಯದಲ್ಲಿ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಮಾರ್ಕ್‌ವುಡ್ ನಿಧಾನಗತಿಯ ಬೌಲಿಂಗ್ ಮಾಡುವ ಬಗ್ಗೆ ಗಮನ ನೀಡುವುದಾಗಿ ಹೇಳಿದ್ದಾರೆ. ಭಾರತೀಯ ತಂಡದ ವೇಗಿ ಶಾರ್ದೂಲ್ ಠಾಕೂರ್ ಅವರಂತೆ ನಿಧಾನದ ಬೌಲಿಂಗ್‌ಅನ್ನು ಕೂಡ ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಳ್ಳಲು ಬಯಸುತ್ತೇನೆ ಎಂದು ಮಾರ್ಕ್‌ವುಡ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮಣಿಸಿದ ಇಂಡಿಯಾ ಲೆಜೆಂಡ್ಸ್‌ ಫೈನಲ್‌ಗೆ ಎಂಟ್ರಿ!ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮಣಿಸಿದ ಇಂಡಿಯಾ ಲೆಜೆಂಡ್ಸ್‌ ಫೈನಲ್‌ಗೆ ಎಂಟ್ರಿ!

ಇನ್ನು ಇಂಗ್ಲೆಂಡ್ ತಂಡ ನಾಲ್ಕನೇ ಪಂದ್ಯದಲ್ಲಿ ಭಾರತವನ್ನು ಗೆದ್ದರೆ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಈಗ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ.ಆದರೆ ಭಾರತ ಒಂದು ಪಂದ್ಯದಲ್ಲಿ ಮಾತ್ರವೇ ಜಯಿಸಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳು ಕೂಡ ಭಾರತ ತಂಡಕ್ಕೆ ಸಾಕಷ್ಟು ನಿರ್ಣಾಯಕ ವಾಗಿರಲಿದೆ.

Story first published: Thursday, March 18, 2021, 8:43 [IST]
Other articles published on Mar 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X