ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲಿ ದಿನೇಶ್ ಕಾರ್ತಿಕ್ ಕಣಕ್ಕೆ?!

India vs England: Dinesh Karthik sends subtle reminder to Team India
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ Dinesh Karthik ಗೆ ಅವಕಾಶ ಸಿಗುಲಿದೆಯೇ | Oneindia Kannada

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಕೋವಿಡ್-19ಗೆ ಪಾಸಿಟಿವ್ ಬಂದಿರುವುದನ್ನು ಖಾತರಿಪಡಿಸಿದೆ. ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೂಡ ಐಸೊಲೇಶನ್‌ನಲ್ಲಿದ್ದಾರೆ. ಈ ಬೆಳವಣಿಗೆ ಭಾರತದ ಅನುಭವಿ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌ಗೆ ತಂಡದಲ್ಲಿ ಅವಕಾಶದ ಸಾಧ್ಯತೆಯನ್ನು ಹೆಚ್ಚಿಸಿದೆ.

ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!

ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡ ಡರ್‌ಹ್ಯಾಮ್‌ನಲ್ಲಿರುವ ಬಯೋಬಬಲ್ ಒಳಗೆ ಪ್ರವೇಶಿಸಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯಲಿದೆ. ಟೆಸ್ಟ್‌ ಸರಣಿಗಿನ್ನು ಎರಡು ವಾರಗಳಿರುವಾಗ ಭಾರತ ತಂಡ ಇಬ್ಬರು ಆಟಗಾರರು ಮತ್ತು ಮೂವರು ಬೆಂಬಲ ಸಿಬ್ಬಂದಿ ಐಸೊಲೇಶನ್‌ನಲ್ಲಿರುದಾಗಿ ಮಾಹಿತಿ ಲಭಿಸಿದೆ.

ಕೆಎಲ್ ರಾಹುಲ್‌ಗೆ ಅವಕಾಶ ಇಲ್ವಾ?

ಕೆಎಲ್ ರಾಹುಲ್‌ಗೆ ಅವಕಾಶ ಇಲ್ವಾ?

ರಿಷಭ್ ಪಂತ್ ಮತ್ತು ವೃದ್ಧಿಮಾನ್ ಸಾಹ ಇಬ್ಬರು ವಿಕೆಟ್‌ ಕೀಪರ್‌ಗಳು ಐಸೊಲೇಶನ್‌ನಲ್ಲಿರುವುದರಿಂದ ಜುಲೈ 20-22ರ ವರೆಗೆ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ಕೆಎಲ್ ರಾಹುಲ್ ಅವರನ್ನು ಹೆಸರಿಸಲಾಗಿದೆ. ರಾಹುಲ್ ಟೆಸ್ಟ್‌ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಬಹುದು. ಆದರೆ ರಾಹುಲ್‌ಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪಿಂಗ್ ಮಾಡಿದ ಅನುಭವವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ರಾಹುಲ್ 2019ರಿಂದೀಚೆ ಟೆಸ್ಟ್ ಪಂದ್ಯ ಆಡಿಲ್ಲ. ಹೀಗಾಗಿ ರಾಹುಲ್‌ ಅವರನ್ನು ಆಯ್ಕೆ ಸಮಿತಿ ಪರಿಗಣಿಸುತ್ತಾ ಅನ್ನೋದು ಪ್ರಶ್ನೆಯಾಗಿ ಉಳಿದಿದೆ.

ದಿನೇಶ್ ಕಾರ್ತಿಕ್‌ಗೆ ಹೆಚ್ಚಿನ ಚಾನ್ಸ್

ದಿನೇಶ್ ಕಾರ್ತಿಕ್‌ಗೆ ಹೆಚ್ಚಿನ ಚಾನ್ಸ್

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಹವಾಮಾನ ವಿಶ್ಲೇಷಕರಾಗಿ ದಿನೇಶ್ ಕಾರ್ತಿಕ್ ಕೂಡ ಇಂಗ್ಲೆಂಡ್‌ಗೆ ತೆರಳಿದ್ದರು. ಈಗ ಕಾರ್ತಿಕ್ ಇಂಗ್ಲೆಂಡ್‌ನಲ್ಲೇ ಇದ್ದಾರೆ. ಸದ್ಯ ತಂಡದಲ್ಲಿ ಕೋವಿಡ್ ಭೀತಿ ಕಾಣಿಸಿಕೊಂಡಿರುವುದರಿಂದ ತಂಡದ ಸಕ್ರಿಯ ಆಟಗಾರನಾಗಿರುವ ಕಾರ್ತಿಕ್ ಅವರನ್ನು ಬಳಸಿಕೊಳ್ಳಲು ಟೀಮ್ ಇಂಡಿಯಾಕ್ಕೆ ಅವಕಾಶವಿದೆ. ಇತ್ತೀಚೆಗೆ ರೋಹಿತ್ ಶರ್ಮಾ ಕೂಡ ಸಂವಾದದಲ್ಲಿ ಕಾರ್ತಿಕ್‌ಗೆ ಇನ್ನೂ ಕ್ರಿಕೆಟ್‌ನಲ್ಲಿ ಮುಂದುವರೆಯಬಲ್ಲರು ಎಂದಿದ್ದರು. ಮುಖ್ಯವಾಗಿ ನಿದಹಾಸ್ ಟ್ರೋಫಿ ಫೈನಲ್‌ನಲ್ಲಿ 8 ಎಸೆತಗಳಿಗೆ ಅಜೇಯ 29 ರನ್ ಬಾರಿಸಿ ಭಾರತ ಗೆಲ್ಲಿಸಿದ್ದ ಹೀರೋ ಡಿಕೆ ಮತ್ತೆ ತಂಡಕ್ಕೆ ಆಡುವುದಾದರೆ ಕ್ರಿಕೆಟ್‌ ಅಭಿಮಾನಿಗಳಿಗೆ ಖುಷಿಯೆ ಅಲ್ಲವೆ?

ಟ್ವೀಟ್‌ ಮಾಡಿದ್ದ ಡಿಕೆ

ಜುಲೈ 15ರಂದು ದಿನೇಶ್ ಕಾರ್ತಿಕ್ ಒಂದು ಟ್ವೀಟ್ ಮಾಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕಿಟ್ ಅನ್ನು ಪೋಸ್ಟ್‌ ಮಾಡಿದ್ದ ಡಿಕೆ, 'ಸುಮ್ಮನೆ ಹೇಳುತ್ತಿದ್ದೇನೆ' (ಜಸ್ಟ್ ಸೇಯಿಂಗ್) ಎಂದು ಬರೆದುಕೊಂಡಿದ್ದರು. ಈ ಕಿಟ್‌ ಕೆಕೆಆರ್‌ಗೆ ಕಾರ್ತಿಕ್ ನಾಯಕರಾಗಿದ್ದಾಗ ಸಿಕ್ಕಿದ್ದು. ಈ ಕಿಟ್‌ ಅನ್ನು ಟ್ವಿಟರ್‌ನಲ್ಲಿ ಕಾರ್ತಿಕ್ ಪೋಸ್ಟ್‌ ಮಾಡಿದ್ದೇಕೆಂದರೆ, ಆಡಲು ಅವಕಾಶ ಸಿಕ್ಕರೆ ನಾನು ಆಡಲು ಸಜ್ಜಾಗಿದ್ದೇನೆ ಅನ್ನೋದನ್ನು ಸೂಚಿಸಲು.

ಕಾರ್ತಿಕ್ ಫಾರ್ಮ್, ಸಾಧನೆ

ಕಾರ್ತಿಕ್ ಫಾರ್ಮ್, ಸಾಧನೆ

26 ಟೆಸ್ಟ್‌ ಪಂದ್ಯಗಳನ್ನಾಡಿರುವ ಡಿಕೆ 25.0ಯ ಸರಾಸರಿಯಲ್ಲಿ 1025 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 7 ಅರ್ಧ ಶತಕಗಳು ಸೇರಿವೆ. ಕಾರ್ತಿಕ್ ಕಡೇಯ ಬಾರಿ ಟೆಸ್ಟ್‌ ಪಂದ್ಯ ಆಡಿದ್ದು 2018ರಲ್ಲಿ ಇಂಗ್ಲೆಂಡ್ ವಿರುದ್ಧವೆ. ಇದರಲ್ಲಿ ಕಾರ್ತಿಕ್ ಉತ್ತಮ ಬ್ಯಾಟಿಂಗ್‌ ನೀಡಿರಲಿಲ್ಲ. ಆದರೆ ರಣಜಿ ಕ್ರಿಕೆಟ್‌ನಲ್ಲಿ ಕಾರ್ತಿಕ್ ತಮಿಳುನಾಡು ತಂಡದ ಪರ ಆಡುತ್ತಿರುವುದರಿಂದ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಒಳ್ಳೆಯ ಅನುಭವಿ ಆಗಿರುವುದರಿಂದ ಡಿಕೆ ಟೆಸ್ಟ್‌ ಸರಣಿಯ ವೇಳೆ ಭಾರತೀಯ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

Story first published: Friday, July 16, 2021, 23:28 [IST]
Other articles published on Jul 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X