ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ ಆಗಿ ಮಾರ್ಕಸ್ ಟ್ರೆಸ್ಕೊಥಿಕ್ ಆಯ್ಕೆ

India vs England: England appoint Marcus Trescothick as batting coach

ಲಂಡನ್: ಇಂಗ್ಲೆಂಡ್ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್‌ ಮಾರ್ಕಸ್ ಟ್ರೆಸ್ಕೊಥಿಕ್ ಅವರು ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್ ಆ್ಯಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಸೋಮವಾರ (ಮಾರ್ಚ್ 1) ಈ ವಿಚಾರ ತಿಳಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾಗಿ ಮಿಂಚಿದ ಈ 3 ಆಟಗಾರರು ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್‌ಗಳು!ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾಗಿ ಮಿಂಚಿದ ಈ 3 ಆಟಗಾರರು ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್‌ಗಳು!

76 ಟೆಸ್ಟ್‌ ಪಂದ್ಯಗಳನ್ನಾಡಿರುವ ಟ್ರೆಸ್ಕೊಥಿಕ್ 2005ರಲ್ಲಿ ಆ್ಯಷಸ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೂ ಮುನ್ನ ಟ್ರೆಸ್ಕೊಥಿಕ್ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ತಂಡ ಸಮರ್‌ಸೆಟ್‌ನ ಸಹ ಕೋಚ್‌ ಆಗಿದ್ದರು. ಹೊಸ ಜವಾಬ್ದಾರಿ ಸಿಕ್ಕಿರುವುದರಿಂದ ಸಮರ್‌ಸೆಟ್ ಜವಾಬ್ದಾರಿಯಿಂದ ಈಗ ಕೆಳಗಿಳಿದಿದ್ದಾರೆ.

45ರ ಹರೆಯದ ಮಾರ್ಕಸ್ ಟ್ರೆಸ್ಕೊಥಿಕ್, ಇಂಗ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ 76 ಟೆಸ್ಟ್‌ ಪಂದ್ಯಗಳು, 123 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ನಲ್ಲಿ 5825 ರನ್, ಏಕದಿನದಲ್ಲಿ 4335 ರನ್, ಟಿ20ಐನಲ್ಲಿ 166 ರನ್ ಗಳಿಸಿದ್ದಾರೆ.

4ನೇ ಟೆಸ್ಟ್‌ಗೂ ಅದೇ ಮಾದರಿಯ ಪಿಚ್ ತಯಾರಿಸಿ: ಪಿಚ್ ಬಗ್ಗೆ ಟೀಕೆಗೆ ವಿವಿಯನ್ ರಿಚರ್ಡ್ಸ್ ತಿರುಗೇಟು4ನೇ ಟೆಸ್ಟ್‌ಗೂ ಅದೇ ಮಾದರಿಯ ಪಿಚ್ ತಯಾರಿಸಿ: ಪಿಚ್ ಬಗ್ಗೆ ಟೀಕೆಗೆ ವಿವಿಯನ್ ರಿಚರ್ಡ್ಸ್ ತಿರುಗೇಟು

ನ್ಯೂಜಿಲೆಂಡ್‌ನ ಮಾಜಿ ಆಫ್‌ ಸ್ಪಿನ್ನರ್ ಜೀತನ್ ಪಟೇಲ್ ಅವರು ಇಂಗ್ಲೆಂಡ್‌ನ ಬೌಲಿಂಗ್ ಕೋಚ್ ಆಗಿ ಆರಿಸಲ್ಪಟ್ಟಿದ್ದಾರೆ. ಜಾನ್ ಲೆವಿಸ್ ಅವರು ಮುಖ್ಯ ಬೌಲಿಂಗ್ ಕೋಚ್ ಆಗಿ ಭಡ್ತಿ ಪಡೆದಿರುವುದರಿಂದ ಅವರ ಜಾಗಕ್ಕೆ ಪಟೇಲ್ ಬಂದಿದ್ದಾರೆ. ಸದ್ಯ ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಭಾರತದಲ್ಲಿದ್ದು ಟೆಸ್ಟ್‌ ಸರಣಿ ಆಡುತ್ತಿದೆ.

Story first published: Tuesday, March 2, 2021, 8:39 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X