ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧ ಶತಕ ಚಚ್ಚಿದ ಕೃನಾಲ್ ಪಾಂಡ್ಯ

India vs England: Fifty by Krunal Pandya in just 26 balls on debut

ಪೂಣೆ: ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಭಾರತದ ಆಲ್ ರೌಂಡರ್ ಕೃನಾಲ್ ಪಾಂಡ್ಯ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಚೊಚ್ಚಲ ಏಕದಿನದಲ್ಲಿ ವೇಗದ ಅರ್ಧ ಶತಕ ಚಚ್ಚಿದ ಅಪರೂಪದ ಸಾಧನೆಗೆ ಕೃನಾಲ್ ಕಾರಣರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಆರಂಭಿಕ ಏಕದಿನ ಪಂದ್ಯದಲ್ಲಿ ಕೃನಾಲ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸನತ್ ಜಯಸೂರ್ಯರ ಬೆರಗು ಮೂಡಿಸುವ ಸ್ಫೂರ್ತಿಯ ಕತೆಯಿದು!ಸನತ್ ಜಯಸೂರ್ಯರ ಬೆರಗು ಮೂಡಿಸುವ ಸ್ಫೂರ್ತಿಯ ಕತೆಯಿದು!

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 23) ನಡೆದ ಭಾರತ-ಇಂಗ್ಲೆಂಡ್ ಮೊದಲನೇ ಏಕದಿನ ಪಂದ್ಯದಲ್ಲಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಕೃನಾಲ್ ಪಾಂಡ್ಯ 31 ಎಸೆತಗಳಲ್ಲಿ 58 ರನ್ ಸಿಡಿಸಿದರು. ಇದರಲ್ಲಿ 7 ಫೋರ್ಸ್, 2 ಸಿಕ್ಸರ್ ಕೂಡ ಸೇರಿತ್ತು.

ವೇಗದ ಅರ್ಧ ಶತಕ ದಾಖಲೆ

ವೇಗದ ಅರ್ಧ ಶತಕ ದಾಖಲೆ

ಪಾದಾರ್ಪಣೆ ಏಕದಿನ ಪಂದ್ಯದಲ್ಲಿ ಅತೀ ವೇಗವಾಗಿ ಅರ್ಧ ಶತಕ ಬಾರಿಸಿದ ದಾಖಲೆ ಪಟ್ಟಿಯಲ್ಲಿ ಕೃನಾಲ್ ಪಾಂಡ್ಯ ಸೇರಿಕೊಂಡಿದ್ದಾರೆ. ಕೇವಲ 26 ಎಸೆತಗಳಲ್ಲಿ ಪಾಂಡ್ಯ 50 ರನ್ ಪೂರೈಸಿದ್ದಾರೆ. ಅಲ್ಲದೆ ಪಾದಾರ್ಪಣೆ ಏಕದಿನ ಪಂದ್ಯದಲ್ಲಿ ಕೆಳ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದು ಅರ್ಧ ಶತಕ ಬಾರಿಸಿದ ದಾಖಲೆ ಸಾಲಿನಲ್ಲೂ ಕೃನಾಲ್ ಹೆಸರು ಸೇರ್ಪಡೆಗೊಂಡಿದೆ.

ಕೆಳಕ್ರಮಾಂಕದಲ್ಲಿ ಅರ್ಧ ಶತಕ

ಕೆಳಕ್ರಮಾಂಕದಲ್ಲಿ ಅರ್ಧ ಶತಕ

(ಏಕದಿನ ಚೊಚ್ಚಲ ಪಂದ್ಯದಲ್ಲಿ 7 ಅಥವಾ ಅದಕ್ಕೂ ಕೆಳ ಕ್ರಮಾಂಕದಲ್ಲಿ ಬಂದು ಅರ್ಧ ಶತಕ ಬಾರಿಸಿದ ಭಾರತೀಯರು)
* ಸಬಾ ಕರೀಮ್, 55 ರನ್ vs ದಕ್ಷಿಣ ಆಫ್ರಿಕಾ, ಬ್ಲೂಮ್‌ಫಾಂಟೈನ್, 1997
* ರವೀಂದ್ರ ಜಡೇಜಾ, 60* ರನ್ vs ಶ್ರೀಲಂಕಾ, ಕೊಲಂಬೋ, 2009
* ಕೃನಾಲ್ ಪಾಂಡ್ಯ, 51* ರನ್, vs ಇಂಗ್ಲೆಂಡ್, ಪೂಣೆ, 2021

ಕೃನಾಲ್ ಸಾಧನೆ ಅಂಕಿ-ಅಂಶ

ಕೃನಾಲ್ ಸಾಧನೆ ಅಂಕಿ-ಅಂಶ

ಮೊದಲನೇ ಏಕದಿನ ಪಂದ್ಯದಲ್ಲಿ ಕೃನಾಲ್ ಪಾಂಡ್ಯ 58 ರನ್ ಬಾರಿಸಿದ್ದಾರೆ. ಇನ್ನು 18 ಟಿ20ಐ ಪಂದ್ಯಗಳಲ್ಲಿ 121 ರನ್, 14 ವಿಕೆಟ್‌ಗಳು, 71 ಐಪಿಎಲ್ ಪಂದ್ಯಗಳಲ್ಲಿ 1000 ರನ್, 46 ವಿಕೆಟ್‌ಗಳ ದಾಖಲೆ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಹಿರಿಯ ಸಹೋದರ ಕೃನಾಲ್ ಪಾಂಡ್ಯಗೀಗ 30ರ ಹರೆಯ.

Story first published: Tuesday, March 23, 2021, 18:27 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X