ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು

India vs England first test: Jasprit Bumrah Gets 4, England are all out for 183
ಟೀಮ್ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ | Oneindia Kannada

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು ಮೊದಲನೇ ಪಂದ್ಯ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆರಂಭಕ್ಕೂ ಮುನ್ನವೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಸರಣಿ ಎರಡೂ ತಂಡಗಳಿಗೂ ಸಹ ಅತ್ಯಮೂಲ್ಯವಾಗಿದೆ. ಈ ಸರಣಿಯ ಮೂಲಕ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಕೂಡ ಆರಂಭವಾಗುತ್ತಿದ್ದು ಕುತೂಹಲ ತುಸು ಹೆಚ್ಚಾಗುವಂತೆ ಮಾಡಿದೆ.

ಭಾರತ vs ಇಂಗ್ಲೆಂಡ್: ಅಶ್ವಿನ್‌ರನ್ನು ಕೊಹ್ಲಿ ತಂಡದಿಂದ ಕೈಬಿಟ್ಟಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳು!ಭಾರತ vs ಇಂಗ್ಲೆಂಡ್: ಅಶ್ವಿನ್‌ರನ್ನು ಕೊಹ್ಲಿ ತಂಡದಿಂದ ಕೈಬಿಟ್ಟಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳು!

ಮೊದಲನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಸಾಧಾರಣವಾದ ಆರಂಭವನ್ನು ಪಡೆದುಕೊಂಡಿತು. ಆರಂಭದಲ್ಲಿಯೇ ಆರಂಭಿಕ ಆಟಗಾರ ರೊರಿ ಬರ್ನ್ಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿತು. ಮತ್ತೆ 42 ರನ್ ಗಳಿಸುವಷ್ಟರಲ್ಲಿ ತನ್ನ ಎರಡನೇ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 66 ರನ್‌ಗಳಿಗೆ 3 ವಿಕೆಟ್ ಹಾಗೂ 138 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ನಾಲ್ಕನೇ ವಿಕೆಟ್ ಕಳೆದುಕೊಂಡ ನಂತರ ಇಂಗ್ಲೆಂಡ್ ವೇಗವಾಗಿ ತನ್ನ ಉಳಿದ ವಿಕೆಟ್‍ಗಳನ್ನು ಕಳೆದುಕೊಳ್ಳಲು ಆರಂಭಿಸಿತು.

ಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿ

ಮತ್ತೆ 138 ರನ್‌ಗಳಿಗೆ ಐದನೇ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 145 ರನ್‌ಗಳಿಗೆ 6ನೇ ವಿಕೆಟ್, 155 ರನ್‌ಗಳಿಗೆ ಉತ್ತಮ ರನ್ ಕಲೆ ಹಾಕಿದ್ದ ಜೋರೂಟ್ ವಿಕೆಟ್ (ಏಳನೇ ವಿಕೆಟ್) ಕಳೆದುಕೊಂಡಿತು, ಜೋ ರೂಟ್ ಬೆನ್ನಲ್ಲೇ 155 ರನ್‌ಗಳಿಗೆ ಇಂಗ್ಲೆಂಡ್ ತನ್ನ ಮತ್ತೊಂದು ವಿಕೆಟ್ (ಎಂಟನೇ) ಕಳೆದುಕೊಂಡಿತು, ತಂಡದ ಮೊತ್ತ 160 ಆಗಿದ್ದಾಗ ಒಂಬತ್ತನೇ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಆಲ್ಔಟ್ ಆಯಿತು.

ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಮಿಂಚಿದರು. ಇಂಗ್ಲೆಂಡ್ ಪರ ಜೋ ರೂಟ್, ಜಾನಿ ಬೈರ್‌ಸ್ಟೋ, ಜ್ಯಾಕ್ ಕ್ರಾವ್ಲೆ ಮತ್ತು ಸ್ಯಾಮ್ ಕರನ್ ಜವಾಬ್ದಾರಿಯುತ ಆಟವನ್ನಾಡಿದರು.

ಭಾರತದ ಬೌಲರ್‌ಗಳ ಉತ್ತಮ ಪ್ರದರ್ಶನ

ಭಾರತದ ಬೌಲರ್‌ಗಳ ಉತ್ತಮ ಪ್ರದರ್ಶನ

ಭಾರತ ತಂಡದ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡವನ್ನು 183 ರನ್‌ಗಳಿಗೆ ಕಟ್ಟುಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು, ಯುವ ಆಟಗಾರ ಶಾರ್ದೂಲ್ ಠಾಕೂರ್ 2 ವಿಕೆಟ್‍ಗಳನ್ನು ಪಡೆದು ಮಿಂಚಿದರು ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಜೋ ರೂಟ್ ಬಿಟ್ಟರೆ ಇಂಗ್ಲೆಂಡ್‌ನ ಬೇರೆ ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ

ಜೋ ರೂಟ್ ಬಿಟ್ಟರೆ ಇಂಗ್ಲೆಂಡ್‌ನ ಬೇರೆ ಯಾರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಭಾರತದ ವಿರುದ್ಧದ ಮೊದಲ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ನಾಯಕನಾಗಿ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ. ಒಂದೆಡೆ ತಂಡದ ವಿಕೆಟ್‍ಗಳು ಸಾಲು ಸಾಲಾಗಿ ಬೀಳುತ್ತಿದ್ದರೆ ಮತ್ತೊಂದೆಡೆ ನೆಲಕಚ್ಚಿ ನಿಂತಿದ್ದ ಜೋ ರೂಟ್ ಏಕಾಂಗಿ ಹೋರಾಟವನ್ನು ನಡೆಸಿದರು ಎಂದು ಹೇಳಿದರೆ ತಪ್ಪಾಗಲಾರದು. 108 ಎಸೆತಗಳಿಗೆ 64 ರನ್ ಗಳಿಸಿದ ಜೋ ರೂಟ್ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಎಲ್ ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದರು. ಹಾಗೂ ಕೊನೆಯ ಹಂತದಲ್ಲಿ ಇಂಗ್ಲೆಂಡ್ ತಂಡದ ಸ್ಯಾಮ್ ಕರನ್ 37 ಎಸೆತಗಳಿಗೆ ಅಜೇಯ 27 ರನ್ ಬಾರಿಸಿ ಗಮನ ಸೆಳೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅನುಪಸ್ಥಿತಿ ಕಾಡಲೇ ಇಲ್ಲ!

ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅನುಪಸ್ಥಿತಿ ಕಾಡಲೇ ಇಲ್ಲ!

ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅಶ್ವಿನ್ ಇಲ್ಲ ಎಂಬ ವಿಷಯ ತಿಳಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಟೀಕೆ ವ್ಯಕ್ತವಾಗಿತ್ತು. ಅಶ್ವಿನ್ ಇಲ್ಲದೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಸುಲಭದ ಮಾತಲ್ಲ ಎಂದೆಲ್ಲಾ ಅನಿಸಿಕೆಗಳು ಕ್ರೀಡಾಭಿಮಾನಿಗಳಿಂದ ವ್ಯಕ್ತವಾಗತೊಡಗಿದವು. ಆದರೆ ಇದಕ್ಕೆಲ್ಲಾ ಉತ್ತರ ನೀಡಿರುವ ಭಾರತದ ಬೌಲರ್‌ಗಳು ಎಲ್ಲಿಯೂ ಅಶ್ವಿನ್ ಅನುಪಸ್ಥಿತಿ ಕಾಡದ ಹಾಗೆ ವಿಕೆಟ್‍ಗಳನ್ನು ಪಡೆದು ಉತ್ತಮ ಪ್ರದರ್ಶನವನ್ನು ನೀಡಿದರು.

Story first published: Thursday, August 5, 2021, 9:55 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X