ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋ ರೂಟ್ ರಿಂದ ತ್ವರಿತಗತಿ 6,000 ರನ್ ಗಡಿ ದಾಟಿದ ಸಾಧನೆ!

By Mahesh
Joe Root quickest to 6,000 Test runs in terms of time

ಬರ್ಮಿಂಗ್‌ಹ್ಯಾಮ್, ಆಗಸ್ಟ್ 1: ಟೀಂ ಇಂಡಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ನಾಯಕ ಜೋ ರೂಟ್, ಮೊದಲ ದಿನದಂದೇ ಹೊಸ ಮೈಲಿಗಲ್ಲು ದಾಟಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ವರಿತಗತಿಯಲ್ಲಿ 6 ಸಾವಿರ ರನ್ ಗಡಿ ದಾಟಿದ್ದಾರೆ. 27 ವರ್ಷ ವಯಸ್ಸಿನ ರೂಟ್ ಅವರು ರವಿಚಂದ್ರನ್ ಅಶ್ವಿನ್ ಎಸೆತವೊಂದನ್ನು ಬೌಂಡರಿಗೆ ಕಳಿಸುವ ಮೂಲಕ ತಮ್ಮ 127ನೇ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರು.

1
42374

ಕಡಿಮೆ ಅವಧಿಯಲ್ಲಿ ಸಾಧನೆ : ರೂಟ್ ಅವರು ಮೊದಲ ಪಂದ್ಯದಿಂದ ಅಡಿದಾಗಿನಿಂದ ಲೆಕ್ಕ ಹಾಕಿದರೆ, 6 ಸಾವಿರ ರನ್ ಪೂರೈಸಲು 5 ವರ್ಷ ಮತ್ತು 231 ದಿನಗಳನ್ನು ತೆಗೆದುಕೊಂಡಿದ್ದಾರೆ. ರೂಟ್ ಗೂ ಮುನ್ನ ಇಂಗ್ಲೆಂಡ್‌ನ ಮಾಜಿ ನಾಯಕ ಅಲೆಸ್ಟೈರ್ ಕುಕ್ 5 ವರ್ಷ ಮತ್ತು 339 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

ಇಂಗ್ಲೆಂಡಿನ 1000ನೇ ಟೆಸ್ಟ್ ಪಂದ್ಯದಲ್ಲಿ ರೂಟ್ ಅವರು 9 ಬೌಂಡರಿಗಳುಳ್ಳ 80ರನ್ ಗಳಿಸಿ ಅನಗತ್ಯವಾಗಿ ರನ್ ಕದಿಯಲು ಯತ್ನಿಸಿ ರನೌಟ್ ಆದರು. ಉಳಿದಂತೆ ಜಾನಿ ಬೈರ್ಸ್ಟೋ 70ರನ್, ಕೀಟಾನ್ ಜೆನ್ನಿಂಗ್ಸ್ 42ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಈ ಸಮಯಕ್ಕೆ ಇಂಗ್ಲೆಂಡ್ 73 ಓವರ್ ಗಳಲ್ಲಿ 242/6 ಸ್ಕೋರ್ ಮಾಡಿದೆ. ಅಶ್ವಿನ್, ಶಮಿ ತಲಾ 2 ವಿಕೆಟ್ ಗಳಿಸಿದರು.

ಕಡಿಮೆ ಇನ್ನಿಂಗ್ಸ್ ಗಳಲ್ಲಿ 6000ರನ್

ಕಡಿಮೆ ಇನ್ನಿಂಗ್ಸ್ ಗಳಲ್ಲಿ 6000ರನ್

ಇಂಗ್ಲೆಂಡ್ ಪರ ಕಡಿಮೆ ಇನ್ನಿಂಗ್ಸ್ ಗಳಲ್ಲಿ 6,000ರನ್ ಗಳಿಸಿದ ಆಟಗಾರರ ಪೈಕಿ ಕೂಡಾ ಜೋ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ.

114 ಇನ್ನಿಂಗ್ಸ್: ವಾಲಿ ಹಮ್ಮಂಡ್
116: ಲೆನ್ ಹಟನ್/ ಕೆನ್ ಬ್ಯಾರಿಂಗ್ಟನ್
127: ಜೋ ರೂಟ್
128 : ಕೆವಿನ್ ಪೀಟರ್ಸನ್
131: ಅಲೆಸ್ಟರ್ ಕುಕ್

ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿದವರು

ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಾಗಿನಿಂದ ಕಡಿಮೆ ದಿನಗಳಲ್ಲಿ 6000ರನ್ ಪೂರೈಸಿದವರ ಪೈಕಿ ರೂಟ್ ಅಗ್ರಸ್ಥಾನಕ್ಕೇರಿದ್ದಾರೆ. ಮಿಕ್ಕಂತೆ ಟಾಪ್ ಆಟಗಾರರ ಪಟ್ಟಿ ಹೀಗಿದೆ:
2058 ದಿನಗಳು: ಜೋ ರೂಟ್
2168: ಎ ಕುಕ್
2192: ಕೆವಿನ್ ಪೀಟರ್ಸನ್
2216: ಡೇವಿಡ್ ವಾರ್ನರ್
2410: ಎ ಸ್ಟ್ರಾಸ್
2479: ಗ್ರಹಾಂ ಸ್ಮಿತ್

ಅತಿ ಕಡಿಮೆ ವಯಸ್ಸಿನಲ್ಲೇ 6 ಸಾವಿರ ರನ್

ಅತಿ ಕಡಿಮೆ ವಯಸ್ಸಿನಲ್ಲೇ 6 ಸಾವಿರ ರನ್

ಅತಿ ಕಡಿಮೆ ವಯಸ್ಸಿನಲ್ಲಿ 6 ಸಾವಿರ ರನ್ ಗಳಿಸಿದ ಸಾಧನೆ ಇನ್ನು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ವರು 26 ವರ್ಷ 313 ದಿನಗಳಾಗಿದ್ದಾಗ ಈ ಸಾಧನೆ ಮಾಡಿದ್ದರು. ಮಿಕ್ಕಂತೆ ಯಾರೆಲ್ಲ ಈ ಪಟ್ಟಿಯಲ್ಲಿದ್ದಾರೆ ನೋಡಿ:

26 ವರ್ಷ 313 ದಿನಗಳು: ಸಚಿನ್ ತೆಂಡೂಲ್ಕರ್
27 ವರ್ಷ 043 ದಿನಗಳು: ಅಲೆಸ್ಟರ್ ಕುಕ್
27 ವರ್ಷ 214 ದಿನಗಳು: ಜೋ ರೂಟ್
27 ವರ್ಷ 323 ದಿನಗಳು: ಗ್ರಹಾಂ ಸ್ಮಿತ್
28 ವರ್ಷ 217 ದಿನಗಳು : ಸ್ಟೀವ್ ಸ್ಮಿತ್
28 ವರ್ಷ 329 ದಿನಗಳು: ಎಬಿ ಡಿ ವಿಲಿಯರ್ಸ್

ಅರ್ಧ ಶತಕಗಳ ವೀರ ಜೋ ರೂಟ್

ಅರ್ಧ ಶತಕಗಳ ವೀರ ಜೋ ರೂಟ್

70 ಪಂದ್ಯಗಳು, 127 ಇನ್ನಿಂಗ್ಸ್ ಗಳಿಂದ 52.16 ರನ್ ಸರಾಸರಿಯಂತೆ 6000ರನ್ ಗಳಿಸಿರುವ ಇಂಗ್ಲೆಂಡಿನ ನಾಯಕ ಜೋ ರೂಟ್ ಅವರು 13 ಶತಕಗಳಿಸಿದ್ದು, 40 ಅರ್ಧಶತಕ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ 80ರನ್ ಗಳಿಸಿ ಔಟಾಗಿದ್ದಾರೆ.

Story first published: Wednesday, August 1, 2018, 22:28 [IST]
Other articles published on Aug 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X