ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 2ನೇ ಟೆಸ್ಟ್‌ಗೆ ಇಂಗ್ಲೆಂಡ್ ಪಡೆಯಲ್ಲಿ 3 ಬದಲಾವಣೆಗೆ ಮೈಕಲ್ ವಾನ್ ಸಲಹೆ

India vs England: Former England skipper Michael Vaughan advises 3 changes for England

ಲಂಡನ್, ಆಗಸ್ಟ್ 10: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ನೀರಸವಾಗಿ ಡ್ರಾ ಮೂಲಕ ಅಂತ್ಯವಾಯಿತು. ಮಳೆಯ ಕಾರಣದಿಂದ ಗೆಲ್ಲಬಹುದಾಗಿದ್ದ ಪಂದ್ಯವನ್ನು ಪ್ರವಾಸಿ ಭಾರತ ಡ್ರಾಗೆ ತೃಪ್ತಿಪಡಬೇಕಾಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಲು ಯಶಸ್ವಿಯಾಗಿತ್ತು. ಆದರೆ ಅಂತಿಮ ದಿನ ಮಳೆ ಭಾರತದ ಪಾಲಿಗೆ ವಿಲನ್ ಆಗಿ ಪರಿಣಮಿಸಿತ್ತು. ಈಗ ಎರಡು ತಂಡಗಳು ಕೂಡ ಎರಡನೇ ಟೆಸ್ಟ್ ಪಂದ್ಯದತ್ತ ಚಿತ್ತ ನೆಟ್ಟಿವೆ. ಹೀಗಾಗಿ ಎರಡನೇ ಪಂದ್ಯಕ್ಕಾಗಿ ಎರಡು ತಂಡಗಳು ಕೂಡ ಲಂಡನ್‌ನಲ್ಲಿರುವ ಐತಿಹಾಸಿಕ ಲಾರ್ಡ್ಸ್ ಮೈದಾನಕ್ಕೆ ಪ್ರಯಾಣ ಬೆಳೆಸಿದೆ. ಗುರುವಾರದಿಂದ ಆರಂಭವಾಗುವ ಈ ಪಂದ್ಯದ ಮೇಲೆ ಈಗ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ.

ಮೊದಲ ಪಂದ್ಯದಲ್ಲಿ ಹಿನ್ನೆಡೆಯನ್ನು ಕಂಡಿರುವ ಇಂಗ್ಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಪ್ರವಾಸಿ ಭಾರತದ ವಿರುದ್ಧ ಮೇಲುಗೈ ಸಾಧಿಸಲು ರಣತಂತ್ರವನ್ನು ಹೆಣೆಯುತ್ತಿದೆ. ಈ ಹಿನ್ನೆಲೆಯಲ್ಲಿ ಲಾರ್ಡ್ಸ್ ಅಂಗಳದಲ್ಲಿ ನಡೆಯುವ ಎರಡನೇ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇಂಗ್ಲೆಂಡ್ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ. ಈ ಸಲಹೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಲಾರ್ಡ್ಸ್ ಪಂದ್ಯದಲ್ಲಿ ಮೂರು ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ ಎಂದಿದ್ದಾರೆ ಮೈಕಲ್ ವಾನ್.

ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್

ಹಾಗಾದರೆ ಮೈಕಲ್ ವಾನ್ ಇಂಗ್ಲೆಂಡ್ ತಂಡದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಬಗ್ಗೆ ಏನು ಹೇಳಿದ್ದಾರೆ. ಯಾವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ? ಮುಂದೆ ಓದಿ..

ಮೂವರು ಆಟಗಾರರನ್ನು ಕೈಬಿಡಲು ವಾನ್ ಸಲಹೆ

ಮೂವರು ಆಟಗಾರರನ್ನು ಕೈಬಿಡಲು ವಾನ್ ಸಲಹೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕಾಗಿ ಮೊದಲ ಪಂದ್ಯದಲ್ಲಿ ಆಡಿದ್ದ ಮೂವರು ಆಟಗಾರರನ್ನು ಕೈಬಿಡಬೇಕೆಂದಯ ಮೈಕಲ್ ವಾನ್ ಸಲಹೆ ನೀಡಿದ್ದಾರೆ. ಮೂವರು ಬ್ಯಾಟ್ಸ್‌ಮನ್‌ಗಳಾದ ಡಾಮ್ ಸಿಬ್ಲಿ, ಜಾಕ್ ಕ್ರಾಲಿ ಮತ್ತು ಡ್ಯಾನ್ ಲಾರೆನ್ಸ್ ಅವರನ್ನು ಆಡುವ ಬಳಗದಿಂದ ಕೈಬಿಡಬೇಕಿದೆ ಎಂದು ಮೈಕಲ್ ವಾನ್ ಸಲಹೆಯನ್ನು ನೀಡಿದ್ದಾರೆ. ದಿ ಟೆಲಿಗ್ರಾಪ್‌ಗೆ ನೀಡಿದ ಹೇಳಿಕೆಯಲ್ಲಿ ಮೈಕಲ್ ವಾನ್ ಈ ಸಲಹೆಯ ಮಾತುಗಳನ್ನಾಡಿದ್ದಾರೆ.

ಆರಂಭದ 25 ಎಸೆತಗಳು..

ಆರಂಭದ 25 ಎಸೆತಗಳು..

ಮೈಕಲ್ ವಾನ್ ಆರಂಭದಲ್ಲಿ ಡ್ಯಾನ್ ಲಾರೆನ್ಸ್ ಬಗ್ಗೆ ಮಾತನಾಡಿದ್ದಾರೆ. "ನಾನು ಲಾರೆನ್ಸ್ ಅವರಿಂದ ಆರಂಬಿಸುತ್ತೇನೆ. ಆತ ಆರಂಭದ 25 ಎಸೆತಗಳನ್ನು ಉತ್ತಮವಾಗಿ ಎದುರಿಸುವ ಪರಿಣತಿಯನ್ನು ಪಡೆದುಕೊಳ್ಳಬೇಕಿದೆ. ಆತ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಆತ ಉತ್ತಮವಾದ ರನ್ ಗಳಿಸಿದ ಪಂದ್ಯಗಳನ್ನೂ ಸೇರಿದಂತೆ ಆರಂಭದ 25 ಎಸೆತಗಳನ್ನು ಅತ್ಯಂತ ಅಸ್ತವ್ಯಸ್ಥ ರೀತಿಯಲ್ಲಿ ಎದುರಿಸಿದ್ದಾರೆ. ನನ್ನ ಪ್ರಕಾರ ಅವರು ಕಮ್‌ಬ್ಯಾಕ್ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಮತ್ತಷ್ಟು ನಿರ್ಭೀತಿಯಿಂದ ಆಡುವುದನ್ನು ಆತ ಕರಗತ ಮಾಡಿಕೊಳ್ಳಬೇಕಿದೆ" ಎಂದು ಮೂಕಲ್ ವಾನ್ ಹೇಳಿದ್ದಾರೆ.

ನೀರಜ್ ಚೋಪ್ರಾಗೆ ಕಾಶಿನಾಥ್ ಕೋಚ್ ಅಲ್ಲ,10ಲಕ್ಷ ರೂ ಬಹುಮಾನಕ್ಕೆ ಶುರುವಾಯ್ತು ವಿವಾದ | Oneindia Kannada
ಕ್ರಾವ್ಲಿಗೂ ಉತ್ತಮ ಭವಿಷ್ಯವಿದೆ

ಕ್ರಾವ್ಲಿಗೂ ಉತ್ತಮ ಭವಿಷ್ಯವಿದೆ

ಇನ್ನು ಮುಂದುವರಿದು ಅಭಿಪ್ರಾಯವ್ಯಕ್ತಪಡಿಸಿರುವ ಮೈಕಲ್ ವಾನ್ "ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರನಾಗಿರುವ ಜಾಕ್ ಕ್ರಾವ್ಲಿ ಅತ್ಯುತ್ತಮ ಟೆಸ್ಟ್ ವೃತ್ತಿ ಜೀವನವನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆತ ಅತ್ಯುತ್ತಮ ಆಟಗಾರನಾಗುತ್ತಾನೆ ಎಂಬ ಭರವಸೆ ನನ್ನಲ್ಲಿದೆ. ಆದರೆ ತನ್ನಲ್ಲಿರುವ ತಾಂತ್ರಿಕ ಕೌಶಲ್ಯವನ್ನು ಆತ ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ" ಎಂದು ಮೈಕಲ್ ವಾನ್ ಹೇಳಿದ್ದಾರೆ. ಈ ಮೂಲಕ ಲಾರೆನ್ಸ್ ಹಾಗೂ ಕ್ರಾವ್ಲಿ ಟೆಸ್ಟ್ ತಂಡದಿಂದ ಕೈಬಿಟ್ಟರೂ ಮತ್ತೆ ಅವಕಾಶವನ್ನು ಗಳಿಸಲು ಅರ್ಹರಾಗಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಡಾಮಿನಿಕ್ ಸಿಬ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್‌ ಅವರನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ.

Story first published: Tuesday, August 10, 2021, 10:39 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X