ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಬಿನ್ಸನ್‌ಗಿಂತ ಸಿರಾಜ್ ಅತ್ಯುತ್ತಮ ಬೌಲರ್ ಎನ್ನಲು ಕಾರಣ ನೀಡಿದ ಸಲ್ಮಾನ್ ಬಟ್

India vs England: Former pakistan cricketer says mohammed siraj better pacer than Robinson

ಬೆಂಗಳೂರು, ಆಗಸ್ಟ್ 18: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದ್ದು ಸರಣಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆತಿಥೇಯ ಇಂಗ್ಲೆಂಡ್ ತಂಡವನ್ನು ಲಾರ್ಡ್ಸ್ ಅಂಗಳದಲ್ಲಿ ಭಾರೀ ಅಂತರದಿಂದ ಮಣಿಸುವ ಮೂಲಕ ವಿರಾಟ್ ಕೊಹ್ಲಿ ಪಡೆ ಅಬ್ಬರದ ಆಟವನ್ನು ಪ್ರದರ್ಶಿಸುತ್ತಿದೆ. ಅದರಲ್ಲೂ ಭಾರತ ತಂಡದ ಯುವ ಬೌಲರ್ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿಯೂ ಅತ್ಯದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚುತ್ತಿದ್ದಾರೆ. ಈ ಪ್ರದರ್ಶನಕ್ಕೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೀಡುತ್ತಿರುವ ಪ್ರದರ್ಶನಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸರಣಿಯಲ್ಲಿ ಯಶಸ್ಸು ಸಾಧಿಸಿರುವ ಇಂಗ್ಲೆಂಡ್ ತಂಡದ ವೇಗಿ ರಾಬಿನ್ಸನ್‌ ಜೊತೆಗೆ ಹೋಲಿಕೆ ಮಾಡಿರುವ ಸಲ್ಮಾನ್ ಬಟ್ ಭಾರತೀಯ ಬೌಲರ್ ಇಂಗ್ಲೀಷ್ ವೇಗಿಗಿಂತ ಅತ್ಯುತ್ತಮ ಎಂದಿದ್ದಾರೆ. ಅದಕ್ಕೆ ಅವರು ಕಾರಣವನ್ನು ಕೂಡ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್‌ವುಡ್!ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್‌ವುಡ್!

ಹಾಗಾದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಲ್ಮಾನ್ ಬಟ್ ಯಾವ ಕಾರಣಕ್ಕಾಗಿ ಮೊಹಮ್ಮದ್ ಸಿರಾಜ್ ರಾಬಿನ್ಸನ್‌ಗಿಂತ ಅತ್ಯುತ್ತಮ ಬೌಲರ್ ಎಂದಿದ್ದಾರೆ ಮುಂದೆ ಓದಿ..

ಸಿರಾಜ್, ಜೇಮಿಸನ್, ರಾಬಿನ್ಸನ್ ಪ್ರತಿಭಾನ್ವಿತ ಬೌಲರ್‌ಗಳು

ಸಿರಾಜ್, ಜೇಮಿಸನ್, ರಾಬಿನ್ಸನ್ ಪ್ರತಿಭಾನ್ವಿತ ಬೌಲರ್‌ಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಬೌಲಿಂಗ್ ಮೂಲ ಇತ್ತೀಚಿನ ದಿನಗಳಲ್ಲಿ ಮಿಂಚುತ್ತಿರುವ ಮೂವರು ಬೌಲರ್‌ಗಳನ್ನು ಈ ಸಂದರ್ಭದಲ್ಲಿ ಸಲ್ಮಾಬ್ ಬಟ್ ಉಲ್ಲೇಖಿಸಿದ್ದಾರೆ. ಈ ಮೂವರು ವೇಗಿಗಳು ಕೂಡ ಅತ್ಯಂತ ಪ್ರತಿಭಾವಂತ ಬೌಲರ್‌ಗಳಾಗಿದ್ದಾರೆ ಎಂದಿದ್ದಾರೆ ಬಟ್. ಆದರೆ ಇದೇ ಸಂದರ್ಭದಲ್ಲಿ ಅವರು ರಾಬಿನ್ಸನ್‌ಗಿಂತ ಮೊಹಮ್ಮದ್ ಸಿರಾಜ್ ಹಾಗೂ ನ್ಯೂಜಿಲೆಂಡ್ ತಂಡದ ವೇಗಿ ಕೈಲ್ ಜೇಮಿಸನ್ ಹೆಚ್ಚು ಪರಿಣಾಮಕಾರಿ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

ಇಂಗ್ಲೆಂಡ್ ಪಿಚ್‌ನಲ್ಲಿ ಮಾತ್ರ ರಾಬಿನ್ಸನ್ ಆಟ

ಇಂಗ್ಲೆಂಡ್ ಪಿಚ್‌ನಲ್ಲಿ ಮಾತ್ರ ರಾಬಿನ್ಸನ್ ಆಟ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಆಗಿ ಮಿಂಚಿತ್ತಿರುವ ಓಲ್ಲಿ ರಾಬಿನ್ಸನ್ ಇಂಗ್ಲೀಷ್ ನೆಲದಲ್ಲಿ ಮಾತ್ರವೇ ಪರಿಣಾಮಕಾರೊಯಾಗಿರುತ್ತಾರೆ ಎಂಬುದು ಸಲ್ಮಾನ್ ಬಟ್ ಅಭಿಪ್ರಾಯ. ರಾಬಿನ್ಸನ್ ಭಾರತ ಅಥವಾ ಆಸ್ಟ್ರೇಲಿಯಾದ ನೆಲದಲ್ಲಿ ಇಂಗ್ಲೆಂಡ್‌ನಲ್ಲಿ ಇದ್ದಷ್ಟು ಪರಿಣಾಮಕಾರಿ ಎನಿಸಲಾರರು. ಇಲ್ಲಿ ಅವರು ಕೂಕಬೂರಾ ಚೆಂಡಿನಲ್ಲಿ ಸವಾಲನ್ನು ಎದುರಿಸಲಿದ್ದು ಅಷ್ಟು ಪರಿಣಾಮಕಾರಿಯಾದ ವೇಗವನ್ನು ಕೂಡ ಪಡೆಯಲಾರರು ಎಂದಿದ್ದಾರೆ. ಇಂಗ್ಲೆಂಡ್ ಪರಿಸ್ಥಿತಿಯಲ್ಲಿ ಚೆಂಡು ಹೆಚ್ಚು ತಿರುವುದು ಪಡೆಯುವ ಕಾರಣದಿಂದಾಗಿ ಅವರು ಹೆಚ್ಚಿನ ಪರಿಣಾಮಕಾರಿ ಬೌಲರ್ ಎನಿಸುತ್ತಾರೆ ಎಂದು ಸಲ್ಮಾನ್ ಬಟ್ ಹೇಳಿಕೆಯನ್ನು ನೀಡಿದ್ದಾರೆ.

ಸಿರಾಜ್, ಜೇಮಿಸನ್ ಜೊತೆ ರಾಬಿಸನ್ ಹೋಲಿಕೆ ಅಸಾಧ್ಯ

ಸಿರಾಜ್, ಜೇಮಿಸನ್ ಜೊತೆ ರಾಬಿಸನ್ ಹೋಲಿಕೆ ಅಸಾಧ್ಯ

ಇನ್ನು ಸಲ್ಮಾನ್ ಬಟ್ ಇದೇ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕೈಲ್ ಜ್ಯಾಮಿಸನ್ ಅವರೊಂದಿಗೆ ಒಲ್ಲೀ ರಾಬಿನ್ಸನ್ ಅವರನ್ನು ಹೋಲಿಕೆ ಮಾಡುವುದೇ ಸರಿಯಲ್ಲ ಎಂಬುದು ನನ್ನ ಭಾವನೆ ಎಂದು ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನ ಸಂವಾದದಲ್ಲಿ ಹೇಳಿದ್ದಾರೆ. "ನನ್ನ ಪ್ರಕಾರ ರಾಬಿನ್ಸನ್‌ಗಿಂತ ಉಳಿದಿಬ್ಬರು ಕೂಡ ಅತ್ಯುತ್ತಮ ಬೌಲರ್‌ಗಳಾಗಿದ್ದಾರೆ. ಜೇಮಿಸನ್ ಅದ್ಭುತವಾದ ವೇಗಿಯಾಗಿದ್ದಾರೆ. ಮೊಹಮ್ಮಸ್ ಸಿರಾಜ್ ಭಾರತೀಯ ತಂಡಕ್ಕೆ ದಿನಕಳೆದಂತೆ ಅತ್ಯಂತ ನಿರ್ಣಾಯಕ ಬೌಲರ್ ಆಗಿ ಬದಲಾಗುತ್ತಿದ್ದಾರೆ" ಎಂದು ಸಲ್ಮಾನ್ ಬಟ್ ತಮ್ಮ ಅಭಿಪ್ರಾಯಪಟ್ಟಿದ್ದಾರೆ.

Rashid Khan ಅವರ ಬಳಿ ವಿಶೇಷ ಮನವಿಯನ್ನಿಟ್ಟ ಅಭಿಮಾನಿಗಳು | Oneindia Kannada
ಲಾರ್ಡ್ಸ್ ಮೈದಾನದಲ್ಲಿ 8 ವಿಕೆಟ್ ಪಡೆದ ಸಿರಾಜ್

ಲಾರ್ಡ್ಸ್ ಮೈದಾನದಲ್ಲಿ 8 ವಿಕೆಟ್ ಪಡೆದ ಸಿರಾಜ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಆತಿಥೇಯರಿಗೆ ಅತ್ಯಂತ ಮಾರಕವಾಗುತ್ತಿದ್ದಾರೆ. ಅದರಲ್ಲೂ ಲಾರ್ಡ್ಸ್ ಟೆಸ್ಟ್‌ನ ಎರಡು ಇನ್ನಿಂಗ್ಸ್‌ನಲ್ಲಿಯೂ ಅವರು ತಲಾ ನಾಲ್ಕು ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಎರಡು ಪಂದ್ಯಗಳಲ್ಲಿ ಅವರು 11 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳಿದ್ದು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಭಾರತದ ಅನುಭವಿ ವೇಗಿಗಳಾದ ಬೂಮ್ರಾ, ಶಮಿ ಹಾಗೂ ಇಶಾಂತ್ ಶರ್ಮಾ ಅವರ ಜೊತೆಗೆ ಸಿರಾಜ್ ವಿರುದ್ಧದ ಸೆಣೆಸಾಟಕ್ಕೂ ಪ್ರತ್ಯೇಕ ರಣತಂತ್ರವನ್ನು ರೂಪಿಸಬೇಕಿದೆ.

Story first published: Wednesday, August 18, 2021, 19:25 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X