ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನೀಗ ವ್ಯಕ್ತಿಯಾಗಿ ಬೆಳೆದಿದ್ದೇನೆ: ವಿವಾದ ಸೃಷ್ಠಿಸಿದ್ದ ರಾಬಿನ್ಸನ್ ಹೇಳಿಕೆ

India vs England: I have grown as a person now, says Ollie Robinson

ನ್ಯಾಟಿಂಗ್‌ಹ್ಯಾಮ್: ಹಿಂದೆ ವಿವಾದಾತ್ಮಕ ಕಾಮೆಂಟ್ ಮಾಡಿ ಕ್ರಿಕೆಟ್‌ನಿಂದ ನಿಷೇಧಕ್ಕೀಡಾಗಿದ್ದ ಇಂಗ್ಲೆಂಡ್‌ ವೇಗಿ ಆಲಿ ರಾಬಿನ್ಸನ್ ಮತ್ತೆ ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಭಾರತ ವಿರುದ್ಧದ ಮೊದಲನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತದ ಪ್ರಮುಖ ಐದು ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದರು. ಅದೇ ರಾಬಿನ್ಸ್ ತನ್ನ ಹಿಂದಿನ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ನಾನೀಗ ಒಳ್ಳೆಯ ವ್ಯಕ್ತಿಯಾಗಿ ಬದಲಾಗಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಿಎಸ್‌ಕೆಯಿಂದ ನೀರಜ್ ಚೋಪ್ರಾಗೆ 1 ಕೋ.ರೂ., ವಿಶೇಷ ಜೆರ್ಸಿ ಕೊಡುಗೆಸಿಎಸ್‌ಕೆಯಿಂದ ನೀರಜ್ ಚೋಪ್ರಾಗೆ 1 ಕೋ.ರೂ., ವಿಶೇಷ ಜೆರ್ಸಿ ಕೊಡುಗೆ

ಕೆಲ ವರ್ಷಗಳ ಹಿಂದೆ ಆಲಿ ರಾಬಿನ್ಸನ್ ಮಾಡಿದ್ದ ಜನಾಂಗೀಯ ನಿಂದನೆ ಮತ್ತು ಅಶ್ಲೀಲ ಟ್ವೀಟ್‌ ಕಾಮೆಂಟ್‌ಗೆ ಸಂಬಂಧಿಸಿ ಅವರನ್ನು 8 ಪಂದ್ಯಗಳಿಂದ ನಿಷೇಧಿಸಲಾಗಿತ್ತು. $ 4,400 (3,27,881 ರೂ.) ದಂಡ ಕೂಡ ವಿಧಿಸಲಾಗಿತ್ತು. ಆದರೆ ಮತ್ತೆ ನಿಷೇಧವನ್ನು ಕಡಿತಗೊಳಿಸಲಾಗಿದೆ. ಹೀಗಾಗಿ ರಾಬಿನ್ಸನ್ ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿದಿದ್ದಾರೆ.

ಭಾರತ vs ಇಂಗ್ಲೆಂಡ್, ಮೊದಲನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
49712

18 ವರ್ಷದವರಾಗಿದ್ದಾಗ ರಾಬಿನ್ಸನ್ ಕಿಡಿಗೇಡಿತನ
18 ವರ್ಷದವರಾಗಿದ್ದಾಗ ಆಲಿ ರಾಬಿನ್ಸನ್ ವಿವಾದಾತ್ಮಕ ಮತ್ತು ಅಶ್ಲೀಲ ಕಾಂಮೆಂಟ್ ಮಾಡಿದ್ದರು. ಇದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ವೇಳೆ ಎಲ್ಲರ ಗಮನಕ್ಕೆ ಬಂದಿತ್ತು. ಯಾಕೆಂದರೆ ಆ ವೇಳೆ ರಾಬಿನ್ಸನ್ ಮಾಡಿದ್ದ ಟ್ವೀಟ್‌ಗಳು ವೈರಲ್ ಆಗಿದ್ದವು. ಜೂನ್‌ನಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ರಾಬಿನ್ಸನ್ ಅಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಪ್ರದರ್ಶನದ ಬೆನ್ನಲ್ಲೇ ರಾಬಿನ್ಸನ್ ಅವರ ಹಿಂದಿನ ಕಿಡಿಗೇಡಿತನ ಬಹಿರಂಗವಾಗಿತ್ತು. ರಾಬಿನ್ಸನ್ ವಿವಾದವನ್ನು ವಿಚಾರಣೆ ನಡೆಸಿದ್ದ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ರಾಬಿನ್ಸನ್ ಮೇಲೆ ನಿಷೇಧ ಹೇರಿತ್ತು.

ಆ್ಯಂಡ್ರ್ಯೂ ಟೈ, ಮಿಚೆಲ್ ಸ್ವೆಪ್ಸನ್ ಮಾರಕ ಬೌಲಿಂಗ್, ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಕ್ಕೆ ಜಯಆ್ಯಂಡ್ರ್ಯೂ ಟೈ, ಮಿಚೆಲ್ ಸ್ವೆಪ್ಸನ್ ಮಾರಕ ಬೌಲಿಂಗ್, ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಕ್ಕೆ ಜಯ

ನಾನು ಬಹಳಷ್ಟು ತಪ್ಪುಗಳನ್ನು ಮಾಡಿದದ್ದೇನೆ, ಅದೊಂದು ಅಲ್ಲ!
"ನಾನು 18-19 ವರ್ಷದವನಾಗಿದ್ದೆ ಆಗ. ಆ ದಿನಗಳಲ್ಲಿ ನಾನು ಬಹಳಷ್ಟು ತಪ್ಪುಗಳನ್ನು ಮಾಡಿದದ್ದೇನೆ. ಅದೊಂದು ಟ್ವೀಟ್ ಮಾತ್ರ ಅಂತಲ್ಲ. ಆ ದಿನಗಳಲ್ಲಿ ನಾನು ಬೇರೆ ಬೇರೆ ರೀತಿಯಲ್ಲೂ ತಪ್ಪುಗಳನ್ನು ಮಾಡುತ್ತಿದ್ದೆ. ಆ ದಿನಗಳಿಂದ ಈಗ ನಾನು ಮುಂದೆ ಬಂದಿದ್ದೇನೆ. ವ್ಯಕ್ತಿಯಾಗಿ ನಾನು ಸಾಕಷ್ಟು ಬೆಳೆದಿದ್ದೇನೆ. ಕಳೆದ 10 ವರ್ಷಗಳಿಂದಲೂ ನಾನು ನನ್ನನ್ನು ತಿದ್ದಿಕೊಳ್ಳಲು ತುಂಬಾ ಪ್ರಯತ್ನಿಸುತ್ತಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ಒಳ್ಳೆಯ ವ್ಯಕ್ತಿಯಾಗಲು ನಾನು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ," ಎಂದು ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ರಾಬಿನ್ಸನ್ ಹೇಳಿದ್ದಾರೆ. ಭಾರತ ವಿರುದ್ಧ ಮೊದಲನೇ ಟೆಸ್ಟ್‌ ನಲ್ಲಿ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ ರಾಬಿನ್ಸನ್ 85 ರನ್‌ಗೆ 5 ವಿಕೆಟ್ ಮುರಿದಿದ್ದರು. ರಾಬಿನ್ಸನ್‌ಗೆ ಈಗ 27ರ ಹರೆಯ.

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಕ್ರೀಡಾಪಟುಗಳಿಗೆ ವಿವಿಧ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

Neeraj Chopraಗೆ ತರಬೇತಿ ನೀಡಿದ ಕನ್ನಡಿಗ Kashinath Naik ಯಾರು? | Oneindia Kannada

ಭಾರತ ಮತ್ತು ಇಂಗ್ಲೆಂಡ್ ಪ್ಲೇಯಿಂಗ್ XI
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬೂಮ್ರಾ.
ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾಲೆ, ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೊ, ಡೇನಿಯಲ್ ಲಾರೆನ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

Story first published: Thursday, September 30, 2021, 18:50 [IST]
Other articles published on Sep 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X