ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಇತಿಹಾಸದಲ್ಲಿ ವೇಗಿಗಳಿಗೆ ಹಾಗೂ ಸ್ಪಿನ್ನರ್‌ಗಳಿಗೆ ಮೊಟೇರಾ ಪಿಚ್ ಸಹಕಾರ ಹೇಗಿತ್ತು?

India vs England: in history How Spinners And Fast Bowlers Have performed in Motera stadium

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಮೂರನೇ ಪಂದ್ಯ ಸ್ಪಿನ್ನರ್‌ಗಳ ದಾಳಿಗೆ ಬ್ಯಾಟ್ಸ್‌ಮನ್‌ಗಳು ಚೇತರಿಸಿಕೊಳ್ಳಲಾಗದೆ ಪಂದ್ಯ ಎರಡನೇ ದಿನದಲ್ಲಿಯೇ ಅಂತ್ಯವಾಗಿತ್ತು. ಹೀಗಾಗಿ ಪಿಚ್ ಗುಣಮಟ್ಟದ ಬಗ್ಗೆ ವಿವಾದವೆದ್ದಿದೆ. ಹಾಗಾಗಿ ಅಂತಿಮ ಪಂದ್ಯದ ಪಿಚ್ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಮೊಟೇರಾ ಸ್ಟೇಡಿಯಂನ ಪಿಚ್ ಹೇಗಾದರೂ ಇರಲಿ. ಆದರೆ ಇತಿಹಾಸವನ್ನು ಗಮನಿಸಿದರೆ ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿಯಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಇತಿಹಾಸದಲ್ಲಿ ವೇಗಿಗಳಿಗಿಂತ ಸ್ಪಿನ್ನರ್‌ಗಳೇ ಈ ಅಂಗಳದಲ್ಲಿ ಹೆಚ್ಚಿ ವಿಕೆಟ್ ಕಬಳಿಸಿದ್ದಾರೆ. 60 ಶೇಕಡಾಕ್ಕೂ ಅಧಿಕ ವಿಕೆಟ್‌ಗಳು ಈ ಅಂಗಳದಲ್ಲಿ ಸ್ಪಿನ್ನರ್‌ಗಳ ಪಾಲಾಗಿದೆ.

ವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾ

ಕಪಿಲ್ ದೇವ್ ಹೆಸರಿನಲ್ಲಿ ದಾಖಲೆ

ಕಪಿಲ್ ದೇವ್ ಹೆಸರಿನಲ್ಲಿ ದಾಖಲೆ

ಆದರೆ ಈ ಪಿಚ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಫಿಗರ್ ವೇಗದ ಬೌಲರ್‌ನ ಹೆಸರಿನಲ್ಲಿದೆ ಎಂಬುದು ಕುತೂಹಲಕಾರಿ ಸಂಗತಿ. 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕಪಿಲ್ ದೇವ್ ಬರೊಬ್ಬರಿ 9 ವಿಕೆಟ್ ಪಡೆದಿದ್ದರು. ಇದು ಈ ಅಂಗಳದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವಾಗಿತ್ತು.

ಅತಿ ಹೆಚ್ಚು ವಿಕೆಟ್

ಅತಿ ಹೆಚ್ಚು ವಿಕೆಟ್

ಈ ಕ್ರೀಡಾಂಗಣದಲ್ಲಿ ಒಟ್ಟು ಈವರೆಗೆ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದ 10 ಕ್ಕಿಂತ ಕಡಿಮೆ ವಿಕೆಟ್‌ಗಳನ್ನು 3 ಸಂದರ್ಭದಲ್ಲಿ ಮಾತ್ರವೇ ಸ್ಪಿನ್ನರ್‌ಗಳು ಪಡೆದಿದ್ದಾರೆ. 2005ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅತಿ ಹೆಚ್ಚು 29 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಹಂಚಿಕೊಂಡಿದ್ದರು. ಇದಕ್ಕೂ ಹಿಂದೆ 1994ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸ್ಪಿನ್ನರ್‌ಗಳಿಗೆ 26 ವಿಕೆಟ್‌ಗಳನ್ನು ನೀಡಿದ್ದರೆ, 2001ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳು 25 ವಿಕೆಟ್ ಪಡೆದುಕೊಂಡಿದ್ದರು. ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಪಿನ್ನರ್‌ಗಳು 28 ವಿಕೆಟ್‌ಗಳನ್ನು ಕಬಳಿಸಿದ್ದರು.

ದಕ್ಷಿಣ ಆಫ್ರಿಕಾ ವೇಗಿಗಳ ಯಶಸ್ಸು

ದಕ್ಷಿಣ ಆಫ್ರಿಕಾ ವೇಗಿಗಳ ಯಶಸ್ಸು

ಮೊಟೇರಾ ಸ್ಟೇಡಿಯಂನಲ್ಲಿ ವೇಗಿಗಳು ಒಂದು ಪಂದ್ಯದಲ್ಲಿ 21 ವಿಕೆಟ್ ಪಡೆದಿರುವುದು ಉತ್ತಮ ಪ್ರದರ್ಶನವಾಗಿದೆ. 2008ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಂದಿದ್ದಾಗ ಡೇಲ್ ಸ್ಟೇಯ್ನ್ ನೇತೃತ್ವದ ಹರಿಣಗಳ ಬೌಲಿಂಗ್ ಪಡೆ ಮೇಲುಗೈ ಪಡೆದು ಇನ್ನಿಂಗ್ಸ್ ಹಾಗೂ 90 ರನ್‌ಗಳ ಜಯವನ್ನು ಸಾಧಿಸಿತ್ತು.

ಮೊಟೇರಾ ಅಂಗಳ ಹಾಗೂ ಇಂಗ್ಲೆಂಡ್ ಸಾಧನೆ

ಮೊಟೇರಾ ಅಂಗಳ ಹಾಗೂ ಇಂಗ್ಲೆಂಡ್ ಸಾಧನೆ

ಇನ್ನು ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡು ಸರಣಿಯನ್ನು ಸಮಬಲ ಮಾಡಿಕೊಂಡರು ಇಂಗ್ಲೆಂಡ್ ಪಾಲಿಗೆ ಈ ಅಂಗಳ ಅದೃಷ್ಟದ ಅಂಗಳ ಎನ್ನಲು ಸಾಧ್ಯವಿಲ್ಲ. ಯಾಕೆಂದರೆ ಈ ಅಂಗಳದಲ್ಲಿ ಇಂಗ್ಲೆಂಡ್ 2001ರಲ್ಲಿ ಟೆಸ್ಟ್ ಪಂದ್ಯವೊಂದನ್ನು ಡ್ರಾ ಮಾಡಿಕೊಂಡಿದ್ದರೆ ನಂತರದ ಎರಡು ಪಂದ್ಯಗಳನ್ನು(2012 & 2021) ಸೋತಿದೆ.

Story first published: Tuesday, March 2, 2021, 13:37 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X