ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಯಾವ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ?

 India vs England: India’s Predicted Playing XI For 1st Test
ಪ್ಲೇಯಿಂಗ್ ಇಲೆವೆನ್ಗೊಸ್ಕರ ಕಾಯುತ್ತಿರುವ ಅಭಿಮಾನಿಗಳು! | Oneindia Kannada

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಕ್ರೀಡಾ ವಿಷಯವೆಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಯಾವ ಆಟಗಾರರು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎಂಬುದು. ಹೌದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯಾವ ಆಟಗಾರರು ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬುದರ ಕುರಿತು ಹೆಚ್ಚು ಚರ್ಚೆಯಾಗುತ್ತಿದ್ದು ಕ್ರೀಡಾಭಿಮಾನಿಗಳು ತಮ್ಮ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್‌; ಭಾರತ ತಂಡದ ಆಡುವ ಬಳಗದ ಕುರಿತು ಮಾಹಿತಿ ಹಂಚಿಕೊಂಡ ಕೊಹ್ಲಿಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್‌; ಭಾರತ ತಂಡದ ಆಡುವ ಬಳಗದ ಕುರಿತು ಮಾಹಿತಿ ಹಂಚಿಕೊಂಡ ಕೊಹ್ಲಿ

ಅದರಲ್ಲಿಯೂ ಸದ್ಯ ಭಾರತದ ಆರಂಭಿಕ ಆಟಗಾರರಾಗಿ ಯಾವ ಬ್ಯಾಟ್ಸ್‌ಮನ್‌ಗಳು ಕಣಕ್ಕಿಳಿಯಲಿದ್ದಾರೆ ಎಂಬುದರ ಕುರಿತು ತುಸು ಹೆಚ್ಚೇ ಚರ್ಚೆಯಾಗುತ್ತಿದೆ. ಅಭ್ಯಾಸದ ವೇಳೆ ಭಾರತದ ಆರಂಭಿಕ ಆಟಗಾರರಲ್ಲಿ ಒಬ್ಬನಾದ ಶುಬ್ಮನ್ ಗಿಲ್ ಗಾಯದ ಸಮಸ್ಯೆಗೆ ಒಳಗಾದ ಕಾರಣ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇತ್ತ ಎರಡನೇ ಆಯ್ಕೆಯಾಗಿ ಉಳಿದಿದ್ದ ಮಯಾಂಕ್ ಅಗರ್ವಾಲ್ ಕೂಡ ತಲೆಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಮೊದಲನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಹೀಗಾಗಿ ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಯಾವ ಆಟಗಾರ ಕಣಕ್ಕಿಳಿಯಲಿದ್ದಾನೆ ಎಂಬುದರ ಕುರಿತು ಹೆಚ್ಚಾಗಿ ಚರ್ಚೆಗಳು ನಡೆಯುತ್ತಿವೆ. ಕನ್ನಡಿಗ ಕೆಎಲ್ ರಾಹುಲ್ ಕೂಡ ಪಂದ್ಯವನ್ನಾಡಲು ಸಜ್ಜಾಗಿದ್ದು ರೋಹಿತ್ ಶರ್ಮಾ ಜೊತೆ ಇಂಗ್ಲೆಂಡ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಕ್ರೀಡಾ ಪಂಡಿತರು ಹೇಳುತ್ತಿದ್ದಾರೆ.

ಇಂಗ್ಲೆಂಡ್ ವಿರುದ್ಧ ಗೆಲ್ಲಲು ಆತ ತಂಡದಲ್ಲಿರಬೇಕಿತ್ತು; ಈಗಿರುವ ಆಟಗಾರರ ಕುರಿತು ಅನುಮಾನ ವ್ಯಕ್ತಪಡಿಸಿದ ಯುವಿ!ಇಂಗ್ಲೆಂಡ್ ವಿರುದ್ಧ ಗೆಲ್ಲಲು ಆತ ತಂಡದಲ್ಲಿರಬೇಕಿತ್ತು; ಈಗಿರುವ ಆಟಗಾರರ ಕುರಿತು ಅನುಮಾನ ವ್ಯಕ್ತಪಡಿಸಿದ ಯುವಿ!

ಇನ್ನು ಕೆಎಲ್ ರಾಹುಲ್ ಹೊರತುಪಡಿಸಿದರೆ ಅಧಿಕ ಆಟಗಾರನಾಗಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಭಾರತದ ಅಭಿಮನ್ಯು ಈಶ್ವರನ್ ಕೂಡ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಆದರೆ ಅಭಿಮನ್ಯು ಈಶ್ವರನ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಸಂಭವ ತೀರಾ ಕಡಿಮೆ ಇದ್ದು ಬೇರೆ ಯಾವ ಆಟಗಾರ ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕು.

ಈ ಆಯ್ಕೆಗಳನ್ನೆಲ್ಲ ಹೊರತುಪಡಿಸಿದರೆ ಚೇತೇಶ್ವರ್ ಪೂಜಾರ ಮತ್ತು ಹನುಮ ವಿಹಾರಿ ಕೂಡ ಆರಂಭಿಕ ಆಟಗಾರರಾಗಿ ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದು ಈ ಇಬ್ಬರಲ್ಲಿ ಒಬ್ಬರು ರೋಹಿತ್ ಶರ್ಮಾ ಜತೆ ಆರಂಭಿಕರಾಗಿ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ಕುರಿತು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆ ಯಾವ ಆಟಗಾರ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಪಂದ್ಯಕ್ಕೂ ಮುನ್ನ ತಿಳಿಸಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಕುರಿತಾಗಿಯೂ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2007ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಇದುವರೆಗೂ ಇಂಗ್ಲೆಂಡ್ ನೆಲದಲ್ಲಿ ನಡೆದಿರುವ ಯಾವುದೇ ಟೆಸ್ಟ್ ಸರಣಿಯಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಿಲ್ಲ. ಹೀಗಾಗಿ 14 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನೂ ಗೆಲ್ಲದ ಭಾರತ ಈ ಸರಣಿಯನ್ನು ಜಯ ಸಾಧಿಸುವುದರ ಮೂಲಕ ಆ ಕೆಟ್ಟ ಸಾಧನೆಗೆ ಅಂತ್ಯ ಆಡುತ್ತಾ ಅಥವಾ ತನ್ನ ಕೆಟ್ಟ ಸಾಧನೆಯನ್ನು ಮುಂದುವರೆಸುತ್ತಾ ಎಂಬುದನ್ನು ಕಾದು ನೋಡಬೇಕು. ಈ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತ ಈ ಕ್ರೀಡಾಂಗಣದಲ್ಲಿ ಉತ್ತಮ ಪಂದ್ಯಗಳನ್ನಾಡಿರುವ ಅನುಭವವನ್ನು ಹೊಂದಿದೆ. ಹೀಗಾಗಿ ಮೊದಲ ಪಂದ್ಯವನ್ನು ಜಯಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Story first published: Wednesday, August 4, 2021, 10:18 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X