ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದಲ್ಲಿ ಒಬ್ಬನಿಗೆ ಕೊರೊನಾ

India vs England: Indian player tests positive for Covid 19

ಲಂಡನ್: ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡದ 23 ಮಂದಿ ಆಟಗಾರರರಲ್ಲಿ ಒಬ್ಬನಿಗೆ ಕೋವಿಡ್ 19 ಸೋಂಕು ತಗುಲಿರುವುದಾಗಿ ವರದಿಯಾಗಿದೆ. ಪ್ರವಾಸ ಸರಣಿ ಆರಂಭಕ್ಕಿನ್ನು 20 ದಿನಗಳು ಬಾಕಿಯಿರುವಾಗ ಆಟಗಾರನಿಗೆ ಸೋಂಕು ತಗುಲಿದೆ.

ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ, 7 ರನ್‌ಗೆ ತಂಡ ಆಲ್ ಔಟ್!ಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ, 7 ರನ್‌ಗೆ ತಂಡ ಆಲ್ ಔಟ್!

ಮುಂದಿನ ತಿಂಗಳು ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಸರಣಿ ಆರಂಭಗೊಳ್ಳಲಿದ್ದು, ಸರಣಿ ಸಂಬಂಧ ಇಡೀ ತಂಡ ಡರ್‌ಹ್ಯಾಮ್‌ನ ಬಯೋಬಬಲ್‌ನಲ್ಲಿ ಮರು ಒಟ್ಟು ಸೇರಲಿತ್ತು. ಆದರೆ ಒಬ್ಬ ಆಟಗಾರನಿಗೆ ಕೊರೊನಾ ಸೋಂಕಿರುವುದರಿಂದ ಆತ ಉಳಿದ ಆಟಗಾರರೊಂದಿಗೆ ಡರ್‌ಹ್ಯಾಮ್‌ಗೆ ಪ್ರಯಾಣಿಸುತ್ತಿಲ್ಲ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿದೆ.

ಗುರುವಾರ ಭಾರತೀಯ ತಂಡ ಡರ್‌ಹ್ಯಾಮ್‌ಗೆ ಪ್ರಯಾಣಿಸುತ್ತಿದೆ. ಬಿಸಿಸಿಐ ಕಾರ್ಯದರ್ಶಿ ಜಯ ಶಾ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಇ ಮೇಲ್‌ನಲ್ಲಿ ತಂಡವನ್ನು ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಪಾಸಿಟಿವ್ ಬಂದಿರುವ ಆಟಗಾರ ಸಂಬಂಧಿಕರ ಮನೆಯಲ್ಲಿ ಕ್ವಾರಂಟೈನ್ ಪಾಲಿಸುತ್ತಿದ್ದಾರೆ.

ಶೋಯೆಬ್ ಅಖ್ತರ್ ಪಾಲಿನ ಕಷ್ಟದ ಬ್ಯಾಟ್ಸ್‌ಮನ್‌ ಯಾರು ಗೊತ್ತಾ? ಹೆಸರು ಕೇಳಿದ್ರೆ ಅಚ್ಚರಿಗೊಳ್ತೀರಿ!ಶೋಯೆಬ್ ಅಖ್ತರ್ ಪಾಲಿನ ಕಷ್ಟದ ಬ್ಯಾಟ್ಸ್‌ಮನ್‌ ಯಾರು ಗೊತ್ತಾ? ಹೆಸರು ಕೇಳಿದ್ರೆ ಅಚ್ಚರಿಗೊಳ್ತೀರಿ!

ರಾಹುಲ್ ದ್ರಾವಿಡ್ ಅವರ ಬಗ್ಗೆ ಸತ್ಯ ಬಾಯಿ ಬಿಟ್ಟ ಶಿಖರ್ ಧವನ್ | Oneindia Kannada

"ಹೌದು, ಒಬ್ಬ ಆಟಗಾರನಿಗೆ ಕೋವಿಡ್-19 ಸೋಂಕು ಪಾಸಿವಿವ್ ಬಂದಿದೆ. ಆದರೆ ಸದ್ಯ ಆತನಿಗೆ ಯಾವುದೇ ಗುಣಲಕ್ಷಣಗಳಿಲ್ಲ. ಆತ ಈಗ ಸಂಬಂಧಿಕರ ಮನೆಯಲ್ಲಿ ಕ್ವಾರಂಟೈನ್ ಪಾಲಿಸುತ್ತಿದ್ದಾರೆ. ಗುರುವಾರ (ಜುಲೈ 15) ಡರ್‌ಹ್ಯಾಮ್‌ಗೆ ಪ್ರಯಾಣಿಸುತ್ತಿರುವ ತಂಡದ ಜೊತೆಗೆ ಅವರು ಪ್ರಯಾಣಿಸುತ್ತಿಲ್ಲ," ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

Story first published: Thursday, July 15, 2021, 8:59 [IST]
Other articles published on Jul 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X