ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಪಾಳಯದಿಂದ ಹೊರಬಿತ್ತು ಮತ್ತೊಂದು ಸಿಹಿ ಸುದ್ದಿ!

India vs England: Indian skipper Rohit Sharma Covid Test negative, will come out of isolation today

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ನಡೆಯುತ್ತಿದ್ದು ಭಾರತ ಮೊದಲ ಎರಡು ದಿನಗಳಲ್ಲಿ ಅದ್ಭುತ ಪ್ರದರ್ಶನ ನಿಡುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮೇಲುಗೈ ಸಾಧಿಸುವ ಮೂಲಕ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪಾಳಯದಿಂದ ಮತ್ತೊಂದು ಖುಷಿಯ ಸುದ್ದಿ ಹೊರಬಿದ್ದಿದೆ.

ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದ ಭಾರತ ತಂಡಕ್ಕೆ ಆಘಾತ ನೀಡಿದ್ದು ಕೋವಿಡ್. ನಾಯಕ ರೋಹಿತ್ ಶರ್ಮಾಗೆ ಕೊರೊನಾವೈರಸ್ ದೃಢಪಟ್ಟ ಕಾರಣದಿಂದಾಗಿ ಮಹತ್ವದ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತವಾದರು. ಹೀಗಾಗಿ ಜಸ್ಪ್ರೀತ್ ಬೂಮ್ರಾ ಈ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ರೋಹಿತ್ ಶರ್ಮಾ ವಿಚಾರವಾಗಿ ಅಭಿಮಾನಿಗಳು ನಿಟ್ಟುಸಿರುವ ಬಿಡುವಂತಾ ಸುದ್ದಿ ಬಂದಿದೆ

Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!

ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್

ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಮುನ್ನ ನಡೆಸಿದ ಕೋವಿಡ್ ವರದಿಯಲ್ಲಿ ಪಾಸಿಟಿವ್ ವರದಿ ಪಡೆದಿದ್ದ ರೋಹಿತ್ ಶರ್ಮಾ ಕ್ವಾರಂಟೈನ್‌ನಲ್ಲಿ ಮುಂದುವರಿದಿದ್ದರು. ಇದೀಗ ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಎರಡು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ನೆಗೆಟಿವ್ ವರದಿ ಬಂದಿದ್ದು ಭಾನುವಾರವೇ ರೋಹಿತ್ ಶರ್ಮಾ ಕ್ವಾರಂಟೈನ್‌ನಿಂದ ಹೊರಬರಲಿದ್ದಾರೆ.

ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ರೋಹಿತ್

ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ರೋಹಿತ್

ಟೆಸ್ಟ್ ಸರಣಿಯ ಮುಕ್ತಾಯದ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟಿ20 ಹಾಗೂ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಕೋವಿಡ್‌ಗೆ ತುತ್ತಾಗಿದ್ದ ಹೊರತಾಗಿಯೂ ಬಿಸಿಸಿಐ ರೋಹಿತ್ ಶರ್ಮಾ ಅವರನ್ನೇ ನಾಯಕನನ್ನಾಗಿ ಘೋಷಣೆ ಮಾಡಿತ್ತು. ಇದೀಗ ರೋಹಿತ್ ಶರ್ಮಾ ಕೋವಿಡ್‌ನಿಂದ ಸಂಪೂರ್ಣ ಗುಣಮುಖವಾಗಿರುವುದು ತಂಡಕ್ಕೆ ಸಮಾಧಾನ ತಂದಿದೆ.

ಜುಲೈ 7ರಿಂದ ಆರಂಭವಾಗಲಿದೆ ಟಿ20 ಸರಣಿ

ಜುಲೈ 7ರಿಂದ ಆರಂಭವಾಗಲಿದೆ ಟಿ20 ಸರಣಿ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಮೊದಲಿಗೆ ಟಿ20 ಸರಣಿ ನಡೆಯಲಿದೆ. ಜುಲೈ 7ರಿಂದ ಟಿ20 ಸರಣಿ ನಡೆಯಲಿದ್ದು ಮೂರು ಪಂದ್ಯಗಳ ಸರಣಿ ಇದಾಗಿದೆ. ಜುಲೈ 7, 9 ಹಾಗೂ 10ರಂದು ಈ ಮೂರು ಪಂದ್ಯಗಳು ನಡೆಯಲಿದ್ದು ಸೌಥಾಂಪ್ಟನ್, ಬರ್ಮಿಂಗ್‌ಹ್ಯಾಮ್ ಹಾಗೂ ನಾಟಿಂಗ್‌ಹ್ಯಾಮ್‌ನಲ್ಲಿ ಕ್ರಮವಾಗಿ ಈ ಪಂದ್ಯಗಳು ಆಯೋಜನೆಯಾಗಲಿದೆ.

ಜಾನಿ ಬೆರಿಸ್ಟೋ ಕಣ್ಣೀರ ಕಥೆ | Oneindia Kannada
ಮೂರು ಪಂದ್ಯಗಳ ಏಕದಿನ ಸರಣಿ

ಮೂರು ಪಂದ್ಯಗಳ ಏಕದಿನ ಸರಣಿ

ಇನ್ನು ಟಿ20 ಸರಣಿಯ ಮುಕ್ತಾಯದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಏಕದಿನ ಸರಣಿ ಕೂಡ ಮೂರು ಪಂದ್ಯಗಳನ್ನು ಒಳಗೊಂಡಿದ್ದು ಜುಲೈ 12, 14 ಹಘಾಊ 17ನೇ ತಾರೀಕಿನಂದು ನಡೆಯಲಿದೆ. ಮೊದಲ ಪಂದ್ಯ ಲಂಡನ್‌ನ ಓವಲ್‌ನಲ್ಲಿ ನಡೆದರೆ ಎರಡನೇ ಏಕದಿನ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಮೈದಾನ ಆತಿಥ್ಯ ವಹಿಸಲಿದೆ. ಇನ್ನು ಸರಣಿಯ ಅಂತಿಮ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ಆಯೋಜನೆಯಾಗಲಿದೆ.

Story first published: Sunday, July 3, 2022, 12:22 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X