ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಸ್ಪಿನ್ನರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೆವಿನ್ ಪೀಟರ್‌ಸನ್

India vs England: Indian spinners are bloody good: Kevin Pietersen

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡವನ್ನು 205 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಇದರಲ್ಲಿ 8 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದೆ.

ಟೀಮ್ ಇಂಡಿಯಾ ಬೌಲಿಂಗ್ ಪ್ರದರ್ಶನದ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್‌ಸನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆವಿನ್ ಪೀಟರ್ಸನ್ ಭಾರತೀಯ ಸ್ಪಿನ್ನರ್‌ಗಳು ಅತ್ಯುತ್ತಮ" ಎಂದು ಬರೆದುಕೊಂಡಿದ್ದಾರೆ.

ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

ಟೀಮ್ ಇಂಡಿಯಾ ಪರವಾಗಿ ಅಕ್ಷರ್ ಪಟೇಲ್ 4 ವಿಕೆಟ್ ಕಿತ್ತರೆ ಆರ್ ಅಶ್ವಿನ್ 3 ವಿಕೆಟ್ ಪಡೆದರು. ಒಮದು ವಿಎಕಟ್ ವಾಶಿಂಗ್ಟನ್ ಸುಂದರ್ ಪಾಲಾಯಿತು. ಉಳಿದ ಎರಡು ವಿಕೆಟ್‌ಗಳನ್ನು ವೇಗಿ ಮೊಹಮ್ಮದ್ ಸಿರಾಜ್ ಪಡೆದುಕೊಂಡು ಮಿಂಚಿದ್ದರು.

ಇನ್ನು ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ತನ್ನ ಮೊದಲ ಐದು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆಉಕೊಂಡಾಗ ಟ್ವೀಟ್ ಮಾಡಿದ್ದರು. "ಪಿಚ್ ಫ್ಲ್ಯಾಟ್ ಇದ್ದಂತೆ ಕಾಣಿಸುತ್ತದೆ. ಬ್ಯಾಟಿಂಗ್ ಮತ್ತೆ.. ಲಾರೆನ್ಸ್, ಪೋಪ್, ಫೋಕ್ಸ್ ಸೇರಿಕೊಂಡು ಇಂಗ್ಲೆಂಡ್ ತಂಡಕ್ಕೆ 275 ರನ್‌ಗಳನ್ನು ಗಳಿಸಿಕೊಡಬಹುದು" ಎಂದಿದ್ದರು.

ಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವುಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವು

ಇನ್ನು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬಗ್ಗೆ ಕಿಡಿ ಕಾರಿದ್ದಾರೆ. ಈ ಮೊದಲು ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮೈಕಲ್ ವಾನ್ ಈ ಬಾರಿ ಪಿಚ್ ಉತ್ತಮವಾಗಿದೆ, ಆದರೆ ಬ್ಯಾಟಿಂಗ್ ಕಳಪೆಯಾಗಿದೆ" ಎಂದು ಪ್ರತಿಕ್ರಿಯಿಸಿದ್ದರು.

Story first published: Thursday, March 4, 2021, 18:00 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X