ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಪ್ರವಾಸ ಸರಣಿಯಿಂದ ಆವೇಶ್ ಖಾನ್ ಹೊರಕ್ಕೆ

India vs England: Injured Avesh Khan all but out of England series
ಶ್ರೀಲಂಕಾ ತಂಡದ ಕೋಚ್ ನಿನ್ನೆ ನಡೆದುಕೊಂಡ ರೀತಿ ಇದು | Oneindia Kannada

ಲಂಡನ್: ಯುವ ವೇಗಿ ಆವೇಶ್ ಖಾನ್ ಭಾರತ-ಇಂಗ್ಲೆಂಡ್ ಪ್ರವಾಸ ಸರಣಿಯಿಂದ ಹೊರ ಬಿದ್ದಿದ್ದಾರೆ. ಕೌಂಟಿ XI ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಖಾನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದರಿಂದ ಅವರು ಟೆಸ್ಟ್‌ ಸರಣಿಯಿಂದ ಹೊರ ನಡೆಯಬೇಕಾಗಿ ಬಂದಿದೆ. ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರೆಗೆ ನಡೆಯಲಿದೆ.

ಶ್ರೀಲಂಕಾ ವಿರುದ್ಧ ರೋಚಕ ಪಂದ್ಯ ಗೆಲ್ಲಿಸಿದ ದೀಪಕ್ ಚಾಹರ್, ಭುವನೇಶ್ವರ್ ಕುಮಾರ್!ಶ್ರೀಲಂಕಾ ವಿರುದ್ಧ ರೋಚಕ ಪಂದ್ಯ ಗೆಲ್ಲಿಸಿದ ದೀಪಕ್ ಚಾಹರ್, ಭುವನೇಶ್ವರ್ ಕುಮಾರ್!

ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತೀಯ ತಂಡ ಸದ್ಯ ಇಂಗ್ಲೆಂಡ್‌ನಲ್ಲಿದೆ. ಇದಕ್ಕೂ ಮುನ್ನ ಇಂಡಿಯನ್ಸ್ ಮತ್ತು ಕೌಂಟಿ ಸೆಲೆಕ್ಟ್ XI ಮಧ್ಯೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದೆ. ಜುಲೈ 20-22ರ ವರೆಗೆ ಈ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದ ಆರಂಭಿಕ ದಿನದಾಟದ ವೇಳೆ ಆವೇಶ್ ಖಾನ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ಡರ್‌ಹ್ಯಾಮ್‌ನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಖಾನ್‌ ಎಡ ಹೆಬ್ಬೆರಳಿಗೆ ಗಾಯವಾಗಿ ಮುರಿತಕ್ಕೊಳಗಾಗಿದೆ. ಅಭ್ಯಾಸ ಪಂದ್ಯದಲ್ಲಿ ಆವೇಶ್ ಖಾನ್ ಅವರು ಕೌಂಟಿ ಸೆಲೆಕ್ಟ್ XI ತಂಡದ ಪರ ಆಡಿದ್ದರು. ಇಂಗ್ಲೆಂಡ್‌ನ ಹಲವಾರು ಆಟಗಾರರು ಕೋವಿಡ್-19 ಐಸೊಲೇಶನ್‌ಗೆ ತೆರಳಿದ್ದರಿಂದ ಖಾನ್ ಆಂಗ್ಲ ತಂಡದ ಪರ ಕಣಕ್ಕಿಳಿದಿದ್ದರು.

ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!ಟೀಮ್ ಇಂಡಿಯಾ ಗೆಲುವಿನ ಸ್ಟಾರ್ ದೀಪಕ್ ಚಾಹರ್ ಹೊಸ ದಾಖಲೆ!

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಆವೇಶ್ ಪ್ರವಾಸ ಸರಣಿಯಿಂದ ಹೊರ ಬಿದ್ದಿರುವ ಸಂಗತಿಯನ್ನು ತಿಳಿಸಿದೆ. ಗಾಯಕ್ಕೀಡಾಗಿರುವ ಖಾನ್ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುವುದರಲ್ಲಿದ್ದಾರೆ. ವೈದ್ಯಕೀಯ ತಂಡ ಅವರನ್ನು ಉಪಚರಿಸುತ್ತಿದೆ ಎಂದು ಬಿಸಿಸಿಐ ಟ್ವೀಟ್‌ನಲ್ಲಿ ತಿಳಿಸಿದೆ.

Story first published: Wednesday, July 21, 2021, 17:53 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X