ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ಕದನ ಜಿದ್ದಾಜಿದ್ದಿಯಿಂದ ಕೂಡಿರಲಿದೆ: ಸಚಿನ್

India vs England: It will be a closely fought contest, says Sachin Tendulkar

ನವದೆಹಲಿ: 17ರ ಹರೆಯದವರಾಗಿದ್ದಾಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂಗ್ಲೆಂಡ್ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು. ಆವತ್ತು ಸಚಿನ್ ಅವರ ಅಜೇಯ 119 ರನ್‌ನಿಂದಾಗಿ ಭಾರತ ಡ್ರಾ ಸಾಧಿಸಿತ್ತು. ಈ ಪಂದ್ಯ ನಡೆದಿದ್ದ 1990ರ ಆಗಸ್ಟ್‌ನಲ್ಲಿ ಮ್ಯಾನ್ಚೆಸ್ಟರ್‌ನಲ್ಲಿ.

ಚೆನ್ನೈ ಟೆಸ್ಟ್ : ವಿನೋದ್ ಕಾಂಬ್ಳಿ ಆಯ್ಕೆಯ ಆಡುವ XI ಹೇಗಿದೆ?ಚೆನ್ನೈ ಟೆಸ್ಟ್ : ವಿನೋದ್ ಕಾಂಬ್ಳಿ ಆಯ್ಕೆಯ ಆಡುವ XI ಹೇಗಿದೆ?

ಭಾರತ-ಇಂಗ್ಲೆಂಡ್ ಟೆಸ್ಟ್‌ನಲ್ಲೇ ಸಚಿನ್ ತೆಂಡೂಲ್ಕರ್ 51.73ರ ಸರಾಸರಿಯಲ್ಲಿ 2535 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಸಚಿನ್ ಗಳಿಸಿರುವ 51 ಶತಕಗಳಲ್ಲಿ 7 ಶತಕಗಳು ಇಂಗ್ಲೆಂಡ್ ವಿರುದ್ಧವೇ ಬಂದಿದೆ. ಈ 7 ಶತಕಗಳಲ್ಲಿ ಅತ್ಯಧಿಕ ವೈಯಕ್ತಿಕ ರನ್ ಅಂದರೆ 193.

ಮತ್ತೆ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸ ಬಂದಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಜಯ ಗಳಿಸಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧವೂ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಫೆಬ್ರವರಿ 5ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿ ಬಗ್ಗೆ ಸಚಿನ್ ಮಾತನಾಡಿದ್ದಾರೆ.

ಭಾರತ vs ಇಂಗ್ಲೆಂಡ್‌: ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಮಾತು-ವಿಡಿಯೋಭಾರತ vs ಇಂಗ್ಲೆಂಡ್‌: ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಮಾತು-ವಿಡಿಯೋ

'ಎರಡೂ ತಂಡಗಳೂ ಹಿಂದಿನ ಸರಣಿ ಗೆದ್ದು ಬಂದಿದೆ (ಭಾರತ ಆಸ್ಟ್ರೇಲಿಯಾ ವಿರುದ್ಧ, ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ). ಹೀಗಾಗಿ ಎರಡೂ ತಂಡಗಳಲ್ಲೂ ವಿಶ್ವಾಸವಿದೆ. ಎರಡೂ ತಂಡಗಳ ಸ್ಪರ್ಧೆಯೂ ಜಿದ್ದಾಜಿದ್ದಿಯಿಂದ ಕೂಡಿರಲಿದೆ. ಆದರೆ ನಾವು ಕಾಂಬಿನೇಶನ್ ಕಡೆ ನೋಡುವುದಾದರೆ ಭಾರತ ಬಲಿಷ್ಠವಾಗಿದೆ,' ಎಂದು ಸಚಿನ್ ಹೇಳಿದ್ದಾರೆ.

Story first published: Friday, February 5, 2021, 10:12 [IST]
Other articles published on Feb 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X