ಆಕ್ರಮಣಕಾರಿ ಆಟವಾಡಲಿದ್ದಾರೆ ನಮ್ಮ ಬ್ಯಾಟರ್‌ಗಳು: ಮೂರನೇ ದಿನದಾಟಕ್ಕೆ ಮುನ್ನ ಆಂಡರ್ಸನ್ ಎಚ್ಚರಿಕೆ

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಆರಂಭಿಕ ಹಿನ್ನಡೆಯನ್ನು ಅನುಭವಿಸಿದ್ದು ಎರಡನೇ ದಿನದಾಟದ ಅಂತ್ಯದಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಈ ಮೂಲಕ ಇಂಗ್ಲೆಂಡ್ ತಂಡ ಭಾರೀ ಹಿನ್ನೆಡೆ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಎರಡನೇ ದಿನದಾಟದ ಬಳಿಕ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಪ್ರತಿಕ್ರಿಯಿಸಿದ್ದು ತನ್ನ ತಂಡದ ಬ್ಯಾಟರ್‌ಗಳು ಸಹಜ ಆಕ್ರಮಣಕಾರಿ ಪ್ರದರ್ಶನ ನೀಡುವುದನ್ನು ಬಯಸಿದ್ದಾರೆ.

ಎರಡನೇ ದಿನದಾಟದಲ್ಲಿ ಇಂಗ್ಲೆಂಡ್‌ಗೆ ಯಾವ ಹಂತದಲ್ಲಿಯೂ ಮೇಲುಗೈ ಸಾಧಿಸಲು ಸಾಧ್ಯವಾಗಲೇ ಇಲ್ಲ. ದಿನದ ಆರಂಭದಲ್ಲಿ ಶತಕಗಳಿಸಿ ರವೀಂದ್ರ ಜಡೇಜಾ ವಿಕೆಟ್ ಕಳೆದುಕೊಂಡ ಬಳಿಕ ಕಣಕ್ಕಿಳಿದ ಜಸ್ಪ್ರೀತ್ ಬೂಮ್ರಾ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 34 ರನ್‌ಗಳಿಸುವ ಮೂಲಕ ಆಘಾತ ನೀಡಿದರು. ಇದರಲ್ಲಿ 29 ರನ್‌ಗಳು ಬೂಮ್ರಾ ಬ್ಯಾಟ್‌ನಿಂದಲೇ ಬಂದಿತ್ತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್‌ಗಳಿಸಿದೆ.

Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!

ಆಕ್ರಮಣಕಾರಿಯಾಗಿ ಆಡುವ ಅಗತ್ಯವಿದೆ

ಆಕ್ರಮಣಕಾರಿಯಾಗಿ ಆಡುವ ಅಗತ್ಯವಿದೆ

ಶನಿವಾರದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹಿನ್ನೆಡೆ ಅನುಭವಿಸಿದ ಬಳಿಕ ಮಾತನಾಡಿದ ಜೇಮ್ಸ್ ಆಂಡರ್ಸನ್ ತಂಡದ ಬ್ಯಾಟರ್‌ಗಳಿಗೆ ಸಲಹೆಯೊಂದನ್ನು ನೀಡಿದ್ದಾರೆ. ಭಾರತ ತಂಡದ ವಿರುದ್ಧ ಇಂಗ್ಲೆಂಡ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾಗಬೇಕಿದೆ ಎಂದಿದ್ದಾರೆ. ಈ ಮೂಲಕ ಎರಡನೇ ದಿನದಾಟದಲ್ಲಿ ಅನುಭವಿಸಿದ ಹಿನ್ನಡೆಯಿಂದ ತಂಡ ವಾಪಾಸಾಗಬಹುದು ಎಂದಿದ್ದಾರೆ.

ಎದುರಾಳಿ ಮೇಲೆ ಒತ್ತಡ ಹೇರಬೇಕಿದೆ

ಎದುರಾಳಿ ಮೇಲೆ ಒತ್ತಡ ಹೇರಬೇಕಿದೆ

"ನಮ್ಮ ತಂಡ ಈಗ ಅನುಭವಿಸುತ್ತಿರುವ ಹಿನ್ನೆಡೆಯಿಂದ ಹೊರಬರಬೇಕಾದರೆ ಎದುರಾಳಿ ವಿರುದ್ಧ ನಾವು ಒತ್ತಡವನ್ನು ಹಾಕಬೇಕಿದೆ. ಭಾನುವಾರ ನಮ್ಮ ತಂಡವನ್ನು ರಕ್ಷಣೆ ಮಾಡಬಲ್ಲ ಅತ್ಯುತ್ತಮ ತಂತ್ರವೆಂದರೆ ಆಕ್ರಮಣಕಾರಿ ಪ್ರದರ್ಶನ ಎಂಬುದು ನನ್ನ ಭಾವನೆ. ನಮ್ಮ ಬ್ಯಾಟರ್‌ಗಳು ಸ್ವಾಭಾವಿಕವಾಗಿ ಆಕ್ರಮಣಕಾರಿ ಆಟಗಾರರಾಗಿದ್ದಾರೆ" ಎಂದು ಭಾನುವಾರ ಇಂಗ್ಲೆಂಡ್ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಜೇಮ್ಸ್ ಆಂಡರ್ಸನ್.

ಬೌಲಿಂಗ್‌ನಲ್ಲಿ ಮಿಂಚಿದ ಭಾರತ

ಬೌಲಿಂಗ್‌ನಲ್ಲಿ ಮಿಂಚಿದ ಭಾರತ

ಇಂಗ್ಲೆಂಡ್ ತಂಡದ ವಿರುದ್ಧ ಭಾರತೀಯ ಬೌಲಿಂಗ್ ಪಡೆ ಆರಂಭದಿಂದಲೇ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಆಟಗಾರರಾದ ಅಲೆಕ್ಸ್ ಲೀಸ್, ಜಾಕ್‌ ಕ್ರಾವ್ಲೆ ಅವರ ಜೊತೆಗೆ ಒಲ್ಲೀ ಪೋಪ್ ಅವರನ್ನು ಕೂಡ ಭಾರತ ತಂಡದ ನಾಯಕ ಜಸ್ಪ್ರೀತ್ ಬೂಮ್ರಾ ಬೌಲಿಂಗ್ ದಾಳಿಯಲ್ಲಿ ಫೆವಿಲಿಯನ್‌ಗೆ ಅಟ್ಟಿದ್ದಾರೆ. ನಂತರ ಅದ್ಭುತ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್‌ಗೆ ಮತ್ತೋರ್ವ ವೇಗಿ ಮೊಹಮ್ಮದ್ ಸಿರಾಜ್ ಫೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದ ಸ್ಪಿನ್ನರ್ ಜಾಕ್ ಲೀಚ್ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ.

Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada
ಇಂಗ್ಲೆಂಡ್ ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್ ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)

ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

For Quick Alerts
ALLOW NOTIFICATIONS
For Daily Alerts
Story first published: Sunday, July 3, 2022, 13:41 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X