ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನಿಲ್ ಕುಂಬ್ಳೆಯ 619 ವಿಕೆಟ್‌ಗಳ ದಾಖಲೆ ಸರಿಗಟ್ಟಿದ ಜೇಮ್ಸ್ ಆಂಡರ್ಸನ್

India vs England: James Anderson Equals Anil Kumble 619 test wickets

ನಾಟಿಂಗ್‌ಹ್ಯಾಮ್, ಆಗಸ್ಟ್ 5: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆದ ಭಾರತ ಹಠಾತ್ ಕುಸಿತ ಅನುಭವಿಸಿದೆ. ಮೊದಲ ಸೆಶನ್‌ನ ಅಂತ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ನಂತರ ಎರಡನೇ ಸೆಶನ್‌ನಲ್ಲಿ ಜೇಮ್ಸ್ ಆಂಡರ್ಸನ್ ಭಾರತಕ್ಕೆ ಆಘಾತ ನೀಡಿದರು. ಎರಡು ದೊಡ್ಡ ವಿಕೆಟ್ ಕಬಳಿಸಿದ ಆಂಡರ್ಸನ್ ಭಾರತಕ್ಕೆ ಆಘಾತವನ್ನು ನೀಡಿದ್ದು ಮಾತ್ರವಲ್ಲ. ಭಾರತದ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ ಅವರ ಟೆಸ್ಟ್ ವಿಕೆಟ್‌ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.

ಭಾರತ ವಿರುದ್ಧದ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಭೋಜನ ವಿರಾಮದ ನಂತರ ಆರಂಭದಲ್ಲಿ ಅನುಭವಿ ಚೇತೇಶ್ವರ್ ಪೂಜಾರಾಗೆ ಆಘಾತವನ್ನು ನೀಡಿದರು. 16 ಎಸೆತಗಳನ್ನು ಎದುರಿಸಿ 4 ರನ್‌ಗಳಿಸಿದ್ದ ಪೂಜಾರ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡುವ ಮೂಲಕ ಆಂಡರ್ಸನ್‌ಗೆ ಬಲಿಯಾದರು. ಅದಾದ ನಂತರ ಕ್ರೀಸ್‌ಗಿಳಿದ ನಾಯಕ ವಿರಾಟ್ ಕೊಹ್ಲಿಯನ್ನು ಮುಂದಿನ ಎಸೆತದಲ್ಲಿಯೇ ಆಂಡರ್ಸನ್ ಗೋಲ್ಡನ್ ಡಕ್‌ ಮಾಡುವ ಮೂಲಕ ಬಂದ ದಾರಿಯಲ್ಲೇ ವಾಪಾಸ್ ಕಳುಹಿಸಿದರು.

ನಾಯಕ ವಿರಾಟ್ ಕೊಹ್ಲಿ ವಿಕೆಟ್ ಜೇಮ್ಸ್ ಆಂಡರ್ಸನ್ ಪಾಲಾಗುತ್ತಿದ್ದಂತೆಯೇ ಭಾರತದ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆ ಸಾಧನೆಯನ್ನು ಆಂಡರ್ಸನ್ ಸರಿಗಟ್ಟಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ಇಂಗ್ಲೆಂಡ್ ದಿಗ್ಗಜ ವೇಗಿ. ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ 619 ವಿಕೆಟ್ ಪಡೆದು ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದರು. ಈಗ ಜೇಮ್ಸ್ ಆಂಡರ್ಸನ್ ಕೂಡ ಇದೇ ಸಾಧನೆಯನ್ನು ಮಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ. ಮುರಳೀಧರನ್ 800 ವಿಕೆಟ್ ಪಡೆದು ಈ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಇದ್ದು ಟೆಸ್ಟ್‌ನಲ್ಲಿ ವಾರ್ನ್ 708 ವಿಕೆಟ್ ಪಡೆದಿದ್ದಾರೆ. ಈಗ ಮೂರನೇ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಹಾಗೂ ಜೇಮ್ಸ್ ಆಂಡರ್ಸನ್ 619 ವಿಕೆಟ್ ಕಬಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಭಾರತ vs ಇಂಗ್ಲೆಂಡ್ 1st ಟೆಸ್ಟ್: ಆರಂಭಿಕರಾಗಿ ರೋಹಿತ್-ರಾಹುಲ್ ವಿಶೇಷ ಸಾಧನೆಭಾರತ vs ಇಂಗ್ಲೆಂಡ್ 1st ಟೆಸ್ಟ್: ಆರಂಭಿಕರಾಗಿ ರೋಹಿತ್-ರಾಹುಲ್ ವಿಶೇಷ ಸಾಧನೆ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ವೇಗಿಗಳ ಪೈಕಿ ಜೇಮ್ಸ್ ಆಂಡರ್ಸನ್ ಈ ಮೊದಲೇ ಅಗ್ರ ಸ್ಥಾನವನ್ನು ಸಂಪಾದಿಸಿದ್ದರು. ಈಗ ತನ್ನ ಸಾಧನೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್. ಪ್ರಸಕ್ತ ಆಡುತ್ತಿರುವ ಬೌಲರ್‌ಗಳ ಪೈಕಿ ಜೇಮ್ಸ್ ಆಂಡರ್ಸನ್ ಮೊದಲ ಸ್ಥಾನವನ್ನು ಸಂಪಾದಿಸಿದ್ದಾರೆ. ಉಳಿದಂತೆ ಅಗ್ರ ಐದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಎಲ್ಲರೂ ನಿವೃತ್ತರಾಗಿದ್ದಾರೆ.

2003ರಲ್ಲಿ ಟೆಸ್ಟ್ ವೃತ್ತಿ ಜೀವನ ಆರಂಭಿಸಿದ ಆಂಡರ್ಸನ್ ಈವರೆಗೆ 163 ಟೆಸ್ಟ್ ಪಂದ್ಯಗಳಲ್ಲಿ 302 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. 39ರ ಹರೆಯದ ಜೇಮ್ಸ್ ಆಂಡರ್ಸನ್ ಈಗಲೂ ಬೌಲಿಂಗ್‌ನಲ್ಲಿ ತಮ್ಮ ಮೊನಚುತನವನ್ನು ಉಳಿಸಿಕೊಂಡಿದ್ದು ಎದುರಾಳಿಗಳಿಗೆ ಕಂಟಕವಾಗುತ್ತಿದ್ದಾರೆ.

ಟ್ವೀಟ್ ಮೂಲಕ ಟ್ರೊಲ್ ಆದ ವಿರಾಟ್ ಕೊಹ್ಲಿ !! | Oneindia Kannada

ಇನ್ನು ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೇಮ್ಸ್ ಆಂಡರ್ಸನ್‌ಗೆ ಔಟ್ ಆಗುವ ಮೂಲಕ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ವಿಕೆಟ್ ಔಟಾದ ಭಾರತೀಯ ನಾಯಕ ಎಂಬ ಬೇಡದ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಲ್ಲದೆ ಏಳು ವರ್ಷಗಳ ನಂತರ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಜೇಮ್ಸ್ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಜೇಮ್ಸ್ ಆಂಡರ್ಸನ್ ನಡುವಿನ ಈ ಕದನವನ್ನು ಶ್ರೇಷ್ಠ ಕದನ ಎಂದೇ ಬಣ್ಣಿಸಲಾಗುತ್ತಿದೆ. ಇದರಲ್ಲಿ ಮೊದಲ ಮುಖಾಮುಖಿಯಲ್ಲಿ ಜೇಮ್ಸ್ ಆಂಡರ್ಸನ್ ಮೇಲುಗೈ ಸಾಧಿಸಿದ್ದಾರೆ.

Story first published: Friday, August 6, 2021, 9:52 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X